ಕೇಂದ್ರ ತನಿಖಾ ಸಂಸ್ಥೆ ತನಿಖೆಗೆ ಆದೇಶ ಎಂದ ಬಿಜೆಪಿ ಸಂಸದ
ಸಿಬಿಐ ಬಂದು ನನ್ನ ಬೂಟು ಎಣಿಸಿ ಹೋಗಲಿ ಎಂದ ಸಂಸದೆ
ಕಾಸಿಗಾಗಿ ಪ್ರಶ್ನೆ ಕೇಸ್; ಕೇಂದ್ರ ತನಿಖಾ ಸಂಸ್ಥೆ ಎಂಟ್ರಿ ಕೊಡುವ ಸಾಧ್ಯತೆ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಕಾಸಿಗಾಗಿ ಕ್ವಶ್ಚನ್ ಕೇಸ್ ಬೆನ್ನುಬಿದ್ದಿದೆ. ಮೋದಿ ಟಾರ್ಗೆಟ್ ಮಾಡಿ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಉರುಳು ಮತ್ತಷ್ಟು ಬಿಗಿಯಾಗುತ್ತಿದೆ. ಇದೇ ಕೇಸ್ ಸಿಬಿಐ ಕದ ತಟ್ಟಿರೋ ಸುಳಿವು ಸಿಕ್ಕಿದೆ. ಸಂಸತ್‌ನಿಂದ ಮೊಯಿತ್ರಾಗೆ ಗೇಟ್‌ಪಾಸ್ ಕೊಡುವಂತೆ ಆಗ್ರಹ ಕೇಳಿಬಂದಿದೆ. ಇದಕ್ಕೆಲ್ಲಾ ಟಿಎಂಸಿ ಸಂಸದೆ ಬೂಟಿನ ತಿರುಗೇಟು ಕೊಟ್ಟಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕಾಸಿಗಾಗಿ ಪ್ರಶ್ನೆ ಕೇಳಿದ ಆರೋಪ ದೀದಿ ಪಕ್ಷದ ನಾಯಕಿಗೆ ಸುತ್ತಿಕೊಳ್ಳುತ್ತಿದೆ. ಆದಾನಿ ಮೂಲಕ ಸದನದಲ್ಲಿ ಮೋದಿ ಟಾರ್ಗೆಟ್ ಮಾಡಲು ಹಣ ಪಡೆದು ಪ್ರಶ್ನೆ ಮಾಡಿರೋ ಆರೋಪಕ್ಕೆ ಗುರಿಯಾಗಿದ್ದಾರೆ.. ಇದೀಗ ಮಹುವಾ ಮೊಯಿತ್ರಾ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಕೇಂದ್ರ ತನಿಖಾ ಸಂಸ್ಥೆ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿದೆ.
ಸಿಬಿಐ ತನಿಖೆಗೆ ಮಹುವಾ ಮೊಯಿತ್ರಾ ಕಾಸಿಗಾಗಿ ಪ್ರಶ್ನೆ ಕೇಸ್?
ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿಯನ್ನ ಟಾರ್ಗೆಟ್ ಮಾಡಲು ಹಣ, ಬೆಲೆಬಾಳುವ ಉಡುಗೊರೆ ಪಡೆದಿದ್ದಾರೆ ಎಂಬ ಆರೋಪ ಮೊಯಿತ್ರಾ ಹೆಗಲೇರಿತ್ತು. ಹೀರಾನಂದಾನಿ ಗ್ರೂಪ್ ಪರವಾಗಿ ನಿಲ್ಲಲು ಲಂಚ ಪಡೆದಿದ್ದಾರೆ ಅಂತ ಉದ್ಯಮಿ ದರ್ಶನ್ ಹೀರಾನಂದಾನಿಯೇ ಅಫಿಡವಿಟ್ ಸಲ್ಲಿಸಿದ್ರು. ಇದೇ ಆಧಾರದ ಮೇಲೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೇಸ್ ಕೂಡಾ ದಾಖಲಿಸಿದ್ರು.. ಇದೀಗ ಲೋಕ್‌ಪಾಲ್ ಸಿಬಿಐ ತನಿಖೆಗೆ ಆದೇಶಿಸಿದೆ ಅಂತ ದುಬೆ ಮಾಹಿತಿ ನೀಡಿದ್ದಾರೆ.
ಸಿಬಿಐಗೆ ಮೊಯಿತ್ರಾ ಕೇಸ್!’
ನಾನು ಮಹುವಾ ಮೊಯಿತ್ರಾ ವಿರುದ್ಧ ನೀಡಿದ್ದ ದೂರಿನ ಮೇರೆಗೆ ಸಂಸದೆ ಮಹುವಾ ಮೊಯಿತ್ರಾ ಕೇಸ್ ಅನ್ನು ಲೋಕಪಾಲ್ ಸಿಬಿಐಗೆ ವಹಿಸಿದೆ ರಾಷ್ಟ್ರೀಯ ಭದ್ರತೆಯನ್ನೇ ಅಡಮಾನವಿಟ್ಟಿದ್ದ ಆರೋಪಿ ವಿರುದ್ಧ ತನಿಖೆಗೆ ಸಿಬಿಐಗೆ ಆದೇಶ ನೀಡಿದೆ.
-ನಿಶಿಕಾಂತ್ ದುಬೆ, ಬಿಜೆಪಿ ಸಂಸದ
ನಿಶಿಕಾಂತ್ ದುಬೆಗೆ ಸಂಸದೆ ಮಹುವಾ ಮೊಯಿತ್ರಾ ತಿರುಗೇಟು
ಕಾಸಿಗಾಗಿ ಪ್ರಶ್ನೆ ಕೇಸ್‌ನ ಸಿಬಿಐ ತನಿಖೆಗೆ ನೀಡಲಾಗಿದೆ ಎಂಬ ಸುಳಿವು ಸಿಕ್ತಿದ್ದಂತೆ ಟಿಎಂಸಿ ಫೈರ್‌ಬ್ರಾಂಡ್ ಸಂಸದೆ ಮಹುವಾ ಮೊಯಿತ್ರಾ ನಿಗಿ ನಿಗಿ ಕೆಂಡವಾಗಿದ್ರು. ಅದಾನಿ ವಿರುದ್ಧ ಗುಡುಗುತ್ತಲೇ ಕೇಂದ್ರ ಸರ್ಕಾರವನ್ನ ತರಾಟೆೆಗೆ ತೆಗೆದುಕೊಂಡಿದ್ರು. ಜೊತೆಗೆ ಸಿಬಿಐಗೆ ಬೂಟಿನ ಸವಾಲು ಹಾಕಿದ್ದಾರೆ.
‘ಬೂಟು ಎಣಿಸಲು ಸ್ವಾಗತ’
ಮೊದಲು ಸಿಬಿಐ 13,000 ಕೋಟಿ ರೂಪಾಯಿ ಅದಾನಿ ಕಲ್ಲಿದ್ದಲು ಹಗರಣದ ಮೇಲೆ ಎಫ್‌ಐಆರ್ ದಾಖಲಿಸಲಿ. ಎರಡನೆಯದಾಗಿ ಗೃಹ ಸಚಿವಾಲಯದ ಅನುಮತಿಯೊಂದಿಗೆ ಭಾರತೀಯ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನ ಎಫ್‌ಪಿಐ ಒಡೆತನದ ಅದಾನಿ ಸಂಸ್ಥೆಗಳು ಹೇಗೆ ಖರೀದಿಸುತ್ತಿವೆ ಅನ್ನೋದು ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ. ಇದರ ಮಧ್ಯೆ ಸಿಬಿಐ ಬರೋದಾದ್ರೆ ಸ್ವಾಗತ. ನನ್ನ ಬೂಟುಗಳನ್ನು ಎಣಿಸಿಕೊಂಡು ಹೋಗಲು.
-ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ
ಮೊಯಿತ್ರಾರನ್ನ ಲೋಕಸಭೆಯಿಂದ ವಜಾ ಮಾಡುವಂತೆ ಶಿಫಾರಸು
ಮಹುವಾ ಮೊಯಿತ್ರಾರನ್ನ ಲೋಕಸಭೆಯಿಂದ ವಜಾ ಮಾಡುವಂತೆ ಸಂಸದೀಯ ನೀತಿ ಸಮಿತಿ ಶಿಫಾರಸು ಮಾಡಿದೆ.. ಅವರ ಲೋಕಸಭಾ ಸದಸ್ಯ ಸ್ಥಾನವನ್ನ ರದ್ದುಗೊಳಿಸುವಂತೆ ಮನವಿ ಮಾಡಿದೆ.. ಅಲ್ಲದೇ ಸುಮಾರು 500 ಪುಟಗಳ ವರದಿಯಲ್ಲಿ ಕೇಂದ್ರ ಸರ್ಕಾರ ಈ ಪ್ರಕರಣವನ್ನ ಸಂಪೂರ್ಣ ತನಿಖೆ ನಡೆಸುವಂತೆ ಶಿಫಾರಸು ಮಾಡಿದೆ.
ಒಟ್ಟಾರೆ, ಕಾಸಿಗಾಗಿ ಪ್ರಶ್ನೆ ಕೇಳಿರುವ ಕೇಸ್‌ನಲ್ಲಿ ಮಹುವಾ ಮೊಯಿತ್ರಾ ನೆತ್ತಿಯ ಮೇಲೆ ಸಿಬಿಐ ಕತ್ತಿ ನೇತಾಡುತ್ತಿದೆ. ಹೀಗಾಗಿ ಟಿಎಂಸಿ ಫೈರ್‌ಬ್ರಾಂಡ್ ಸಂಸದೆಗೆ ಇದೇ ಕೇಸ್ ಉರುಳಾಗುತ್ತಾ? ಕಾದು ನೋಡಬೇಕಿದೆ.