newsfirstkannada.com

ಕಂಡ, ಕಂಡವರ ಕಚ್ತಾನೆ.. ಹಸಿ ಮಾಂಸ ತಿಂತಾನೆ; ಇವನ ವಿಚಿತ್ರ ವರ್ತನೆಗೆ ಬೆಚ್ಚಿ ಬಿದ್ದ ಇಡೀ ಊರಿನ ಜನ!

Share :

Published August 22, 2024 at 10:17pm

Update August 22, 2024 at 10:19pm

    ಕೆಲವು ದಿನಗಳಿಂದ ಈ ವ್ಯಕ್ತಿ ನಾಯಿಯಂತೆ ಆಡ್ತಿರೊದೇಕೆ, ಏನಾಯ್ತು?

    ಕಂಡವರನ್ನು ಕಚ್ಚುವುದು, ಹಸಿ ಮಾಂಸ ತಿನ್ನುವುದು ಕಂಡು ಬೆಚ್ಚಿ ಬಿದ್ದ ಜನ

    ನಾಯಿಯಿಂದ ಕಚ್ಚಿಸಿಕೊಂಡು ಶ್ವಾನದಂತೆ ಆಡುತ್ತಿರುವವನಿಗೆ ರೆಬೀಸ್​?

ಭೋಪಾಲ್​: ಮಧ್ಯಪ್ರದೇಶದ ಸಾಗರದ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಒಬ್ಬ ವ್ಯಕ್ತಿ ದೊಡ್ಡ ತಲೆನೋವಾಗಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಮಾರುಕಟ್ಟೆಯಲ್ಲಿ ಕಸಗೂಡಿಸುವ ಕೆಲಸ ಮಾಡುತ್ತಿದ್ದ ಸೋನು ಎಂಬ ಯುವಕ, ಕಳೆದ 10-12 ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಕಂಡ ಕಂಡವರನ್ನು ಕಚ್ಚುತ್ತಿದ್ದಾನೆ. ಹಸಿ ಮಾಂಸವನ್ನು ತಿನ್ನುತ್ತಾನೆ, ಥೇಟು ಶ್ವಾನಗಳು ಮಾಡಿದಂತೆಯೇ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಭಯಭೀತಗೊಂಡಿದ್ದಾರೆ.

ಇದನ್ನೂ ಓದಿ: ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ ಕೇಸ್​ಗೆ ಬಿಗ್​ ಟ್ವಿಸ್ಟ್​.. ಆಮೇಲೇನಾಯ್ತು ಗೊತ್ತಾ?

ಈಗಾಗಲೇ ಹಲವಾರು ಜನರ ಮೇಲೆ ದಾಳಿ ಮಾಡಿ ಕಚ್ಚಿರುವ ಸೋನು, ಕೆಲವು ದಿನಗಳ ಹಿಂದೆ ಅವನಿಗೆ ನಾಯಿ ಕಚ್ಚಿದ ಮೇಲೆ ಹೀಗೆ ಆಡುತ್ತಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿ ಆಗಿರುವ ಮೊಹಮ್ಮದ್ ರಶೀದ್ ಹೇಳುವ ಪ್ರಕಾರ, ಕೆಲವು ದಿನಗಳ ಹಿಂದೆ ಸೋನುಗೆ ನಾಯಿಯೊಂದು ಕಚ್ಚಿತ್ತು.

ಇದನ್ನೂ ಓದಿ: ‘ಆತನ ಕಾಲು ಮುರಿಯಿರಿ, ಖಾಸಗಿ ಅಂಗಕ್ಕೆ ಹೊಡೆಯಿರಿ’.. ಕೋಪಗೊಂಡ ಯುಜ್ವೇಂದ್ರ ಚಹಾಲ್

ಅಂದಿನಿಂದ ಈತ ವಿಚಿತ್ರವಾಗಿ ಆಡುತ್ತಿದ್ದಾನೆ. ಹಾದಿಯಲ್ಲಿ ಹೋಗುವವರಿಗೆ ಕಚ್ಚಲು ಹೋಗುತ್ತಾನೆ, ಹಸಿಮಾಂಸವನ್ನು ತಿನ್ನುತ್ತಾನೆ ಅವನ ವರ್ತನೆ ಇಲ್ಲಿ ಓಡಾಡುವ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಾವಿನ ಸಂಖ್ಯೆ 18ಕ್ಕೆ ಏರಿಕೆ, 40ಕ್ಕೂ ಹೆಚ್ಚು ಜನರಿಗೆ ಗಾಯ.. ಫಾಕ್ಟರಿ ಸ್ಫೋಟದಲ್ಲಿ 380 ಮಂದಿ ಏನಾದ್ರು?

ಮತ್ತೊಬ್ಬ ತರಕಾರಿ ವ್ಯಾಪಾರಿ ನರೇಂದ್ರ ಠಾಕೂರ್ ಹೇಳುವ ಪ್ರಕಾರ, ಕೆಲವು ದಿನಗಳ ಹಿಂದೆ ಈರುಳ್ಳಿಯನ್ನು ಕೊಳ್ಳುವಾಗ ಸೋನು ಅವರ ಮೇಲೆ ದಾಳಿ ಮಾಡಿ ಕಚ್ಚಿದನಂತೆ, ಅವರು ಮುನ್ನೆಚ್ಚರಿಕಾ ಕ್ರಮವಾಗಿ ಇಂಜೆಕ್ಷನ್ ಮಾಡಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಸಮಂತಾ ಫಾಲೋ ಮಾಡ್ತಿರೋ ದಗ್ಗುಬಾಟಿ ಫ್ಯಾಮಿಲಿ.. ನಾಗ ಚೈತನ್ಯ ಭಾವಿ ಪತ್ನಿನಾ ಕಡೆಗಣಿಸಿದ್ರಾ?

ಮಾರುಕಟ್ಟೆಯಲ್ಲಿರುವ ವ್ಯಾಪಾರಿಗಳೆಲ್ಲರೂ ಸೇರಿ ಅವನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದ್ರೆ ಅದಕ್ಕೆ ಸೋನು ಸಹಕರಿಸುತ್ತಿಲ್ಲ. ಆಸ್ಪತ್ರೆಗೆ ಹೋಗೋಣ ಅಂದ್ರೆ ತಪ್ಪಿಸಿಕೊಂಡು ಹೋಗುತ್ತಾನೆ. ಮಧ್ಯಪ್ರದೇಶದ ಬುಂದೇಲ್​ಖಂಡ್ ಮೆಡಿಕಲ್ ಕಾಲೇಜ್​ನ ವೈದ್ಯ ಸುಮಿತ್ ರಾವತ್ ಹೇಳುವ ಪ್ರಕಾರ. 10-12 ದಿನದಿಂದ ವ್ಯಕ್ತಿ ಈ ರೀತಿ ಮಾಡುತ್ತಿದ್ದಾನೆ ಅಂದ್ರೆ ಅದು ರೆಬೀಸ್ ತೀವ್ರ ಮಟ್ಟಕ್ಕೆ ಹೋಗಿ ಸಾವಿನ ಅಂಚಿನಲ್ಲಿ ಅವನು ಇರಬಹುದು. ಇನ್ನು ಅವನು ಕಚ್ಚಿದ್ದಾನೆ ಅಂತ ಯಾರೂ ಆತಂಕಪಡುವ ಅಗತ್ಯವಿಲ್ಲ, ರೆಬೀಸ್​ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: 10 ವರ್ಷದ ಲವ್​.. ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ; ವಿಚಾರ ಕೇಳಿ ಬಿಚ್ಚಿ ಬಿದ್ದ ಫ್ಯಾಮಿಲಿ! 

ಅದು ಮಾತ್ರವಲ್ಲ, ಸೋನುವಿನ ವರ್ತನೆಯನ್ನು ನೋಡಿದ್ರೆ. ವಿಪರೀತ ಕುಡಿತದಿಂದ ಮಾನಸಿಕ ಸಮತೋಲನ ತಪ್ಪಿ ಮನೋರೋಗದ ಒಂದು ಅಂಶವೂ ಆಗಿರುವ ಸಾಧ್ಯತೆ ಇರುತ್ತದೆ. ರೆಬೀಸ್​ಗಿಂತ ಈ ರೀತಿಯಾಗಿರುವ ಸಾಧ್ಯತೆ ಹೆಚ್ಚು, ಯಾವುದಕ್ಕೂ ಜನರು ಆತನಿಂದ ದೂರ ಇರುವ ಪ್ರಯತ್ನ ಮತ್ತು ಅವನಿಂದ ಎಚ್ಚರಿಕೆಯಿಂದ ಇರುವ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಡ, ಕಂಡವರ ಕಚ್ತಾನೆ.. ಹಸಿ ಮಾಂಸ ತಿಂತಾನೆ; ಇವನ ವಿಚಿತ್ರ ವರ್ತನೆಗೆ ಬೆಚ್ಚಿ ಬಿದ್ದ ಇಡೀ ಊರಿನ ಜನ!

https://newsfirstlive.com/wp-content/uploads/2024/08/man-behave-like-dog.jpg

Load More