newsfirstkannada.com

Video: ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ.. ಸಾಕ್ಷ್ಯ ಸಿಗಬಾರ್ದು ಎಂದು ಹಣವನ್ನೇ ನುಂಗಿದ! ಮುಂದೇನಾಯ್ತು?

Share :

25-07-2023

  ಕಂದಾಯ‌ ಇಲಾಖೆಯ‌‌ ಅಧಿಕಾರಿಯೊಬ್ಬರ ಲಂಚಾವತಾರ

  4,500 ರೂಪಾಯಿ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ಅಧಿಕಾರಿ

  ಹಣದ ಸಾಕ್ಷ್ಯ ಸಿಗಬಾರ್ದು ಎಂದು ಎಂಥಾ ಐಡಿಯಾ ಮಾಡಿದ ಗೊತ್ತಾ?

ಮಧ್ಯಪ್ರದೇಶ: ಕಂದಾಯ‌ ಇಲಾಖೆಯ‌‌ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಂತೆ ಕಂದಾಯ‌ ಇಲಾಖೆಯ‌‌ ಅಧಿಕಾರಿ ಗಜೇಂದ್ರ ಸಿಂಗ್ ಕೈಯಲ್ಲಿದ್ದ ಹಣವನ್ನು ಬಾಯಿಗೆ ಹಾಕಿ ಜಗಿದು ನುಂಗಿದ್ದಾನೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ

ಬರ್ಕೇಡಾ ಗ್ರಾಮದ ವ್ಯಕ್ತಿಯೊಬ್ಬರಿಂದ ಲಂಚದ ಹಣ ಪಡೆಯುತ್ತಿದ್ದಾಗ ಗಜೇಂದ್ರ ಸಿಂಗ್ ಸಿಕ್ಕಿಬಿದ್ದಿದ್ದಾನೆ. 4,500 ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಹಣವನ್ನು ಬಾಯಿಗೆ ಹಾಕಿ ಜಗಿದ

ತನ್ನ ಮುಖವಾಡ ಕಳಚಿರೋದು ಗೊತ್ತಾಗುತ್ತಿದ್ದಂತೆ ಗಜೇಂದ್ರ ಸಿಂಗ್ ಅಷ್ಟೊಂದು ಹಣವನ್ನು ಬಾಯಿಗೆ ಹಾಕಿ ಜಗಿದಿದ್ದಾನೆ. ಲಂಚ ಪಡೆದ ಹಣದ ಸಾಕ್ಷ್ಯ ಲೋಕಾಯುಕ್ತ ಅಧಿಕಾರಿಗಳಿಗೆ ಸಿಗಬಾರದೆಂದು ಈ ಐಡಿಯಾ ಉಪಯೋಗಿಸಿದ್ದಾನೆ.

ಕಕ್ಕಿಸಲು ಹರಸಾಹಸ

ಬಳಿಕ ಗಜೇಂದ್ರ ಸಿಂಗ್​ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.‌ ತಪಾಸಣೆ ನಡೆಸಲಾಗಿದೆ. ತಿಂದ ಹಣವನ್ನು ವೈದ್ಯರ ಸಹಾಯದಿಂದ ಕಕ್ಕಿಸಲು ಲೋಕಾಯುಕ್ತ ಪೊಲೀಸರು ಯತ್ನಿಸಿದ್ದಾರೆ.

ಇನ್ನು ಕಂದಾಯ‌ ಇಲಾಖೆಯ‌‌ ಅಧಿಕಾರಿ ಗಜೇಂದ್ರ ಸಿಂಗ್ ನೋಟುಗಳನ್ನು ತಿನ್ನುವ ವಿಡಿಯೋವನ್ನು ಲೋಕಾಯುಕ್ತ ಪೊಲೀಸರು ರೆಕಾರ್ಡ್ ಮಾಡಿದ್ದಾರೆ. ಸದ್ಯ ಗಜೇಂದ್ರ ಸಿಂಗ್ ವಿರುದ್ಧ ಕೇಸ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ.. ಸಾಕ್ಷ್ಯ ಸಿಗಬಾರ್ದು ಎಂದು ಹಣವನ್ನೇ ನುಂಗಿದ! ಮುಂದೇನಾಯ್ತು?

https://newsfirstlive.com/wp-content/uploads/2023/07/Gajendra-Singh.jpg

Load More