ಅಂಜು ಓಡಿ ಹೋದ ಕೇಸ್ನಲ್ಲಿ ಹೊಸ ಅನುಮಾನ
ಪ್ರೀತಿ, ಪ್ರೇಮದ ಹಿಂದೆ ನಡೆದಿದ್ಯಾ ಕಿಲಾಡಿ ಷಡ್ಯಂತ್ರ?
ಪಾಕ್ನಲ್ಲಿ ಮದ್ವೆಯಾಗಿ ಫಾತಿಮಾ ಎಂದು ಹೆಸರು ಬದಲು
ಪ್ರಿಯತಮನಿಗಾಗಿ ಯಾರಿಗೂ ತಿಳಿಸದೇ ಗುಟ್ಟಾಗಿ ಪಾಕಿಸ್ತಾನಕ್ಕೆ ಹೋಗಿರುವ ಅಂಜು ಪ್ರಕರಣವನ್ನು ತನಿಖೆ ಮಾಡುವಂತೆ ಮಧ್ಯಪ್ರದೇಶ ಸರ್ಕಾರ ಆದೇಶ ನೀಡಿದೆ. ಎರಡು ಮಕ್ಕಳ ತಾಯಿ ಅಂಜು ಪಾಕ್‌ಗೆ ಹೋದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಷಡ್ಯಂತ್ರ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸ್ ಸ್ಪೆಷಲ್ ಬ್ರಾಂಚ್ಗೆ ಆದೇಶ ನೀಡಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ತಿಳಿಸಿದ್ದಾರೆ.
ರಾಜಸ್ಥಾನದ ನಿವಾಸಿಯಾಗಿದ್ದ ಅಂಜುಗೆ ಇಬ್ಬರು ಮಕ್ಕಳು, ಗಂಡ ಇದ್ದ. ಫೇಸ್ಬುಕ್ ಮೂಲಕ ಪರಿಚಯ ಆಗಿದ್ದ ಪಾಕಿಸ್ತಾನದ ನಸ್ರುಲ್ಲಾ ಜೊತೆ ಪ್ರೀತಿಯಾಗಿ ತಿರುಗಿತ್ತು. ಇತ್ತೀಚೆಗೆ ಸ್ನೇಹಿತನ ಭೇಟಿಗೆ ಹೋಗ್ತೀನಿ ಎಂದು ಗಂಡನ ಬಳಿ ಹೇಳಿ ಹೋಗಿದ್ದ ಅಂಜು, ಗುಟ್ಟಾಗಿ ಪಾಕಿಸ್ತಾನಕ್ಕೆ ಹೋಗಿದ್ದಳು.
ನಂತರ ಗಂಡನಿಗೆ ಕಾಲ್ ಮಾಡಿದ್ದ ಅಂಜು ನಾನು ಪಾಕಿಸ್ತಾನದಲ್ಲಿದ್ದೇನೆ. ಸ್ನೇಹಿತನ ಭೇಟಿ ಮಾಡಲು ಬಂದಿದ್ದೇನೆ ಎಂದು ಬಾಂಬ್ ಹಾಕಿದ್ದಳು. ನಂತರ ಫೇಸ್ಬುಕ್ ಪ್ರಿಯಕರ ನಸ್ರುಲ್ಲಾನನ್ನು ಮದುವೆಯಾಗಿ, ಫಾತಿಮಾ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾಳೆ.
ಪಾಕ್ ಓಡಿ ಹೋಗಿರುವ ಮಹಿಳೆಗೆ ಪಾಸ್ಪೋರ್ಟ್ ಹೇಗೆ ಸಿಕ್ಕಿತು. ಆಕೆ ನಕಲಿ ದಾಖಲೆಗಳನ್ನು ನೀಡಿದ್ದಾಳಾ? ಇದರ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಇದೆಯಾ ಎಂಬ ಅನುಮಾನ ಹಲವರಲ್ಲಿ ಕಾಡಿತ್ತು. ಮಾತ್ರವಲ್ಲ, ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಆಗಿರುವ ಅಂಜಿ ತಂದೆ ಗಯಾ ಪ್ರಸಾದ್, ಕೂಡ ತನಿಖೆ ಬಗ್ಗೆ ಮಾತನಾಡಿದ್ದರು.
ಮಗಳು ನಮಗೆ ಪಾಕ್ ಹೋಗೋದನ್ನು ತಿಳಿಸಿಲ್ಲ. ಆಕೆ ಆತನನ್ನು ಮದುವೆ ಆಗೋದಿದ್ದರೆ ಮೊದಲ ಪತಿಗೆ ಡಿವೋರ್ಸ್ ನೀಡಬೇಕಿತ್ತು. ಆದರೆ ಅವಳು ಹಾಗೆ ಮಾಡಲಿಲ್ಲ. ಮನೆಯಲ್ಲಿದ್ದ ಇಬ್ಬರು ಮಕ್ಕಳ ಬಗ್ಗೆ ಯೋಚನೆ ಮಾಡಲಿಲ್ಲ. ನನ್ನ ಮಕ್ಕಳು ಅಪರಾಧ ಹಿನ್ನೆಲೆ ಇದ್ದರೆ ನಾನು ಯಾವುತ್ತೂ ಸಹಿಸಲ್ಲ. ಈ ಬಗ್ಗೆ ತನಿಖೆ ನಡೆದರೆ ಅದನ್ನು ಎದುರಿಸಲು ನಾವು ಸಿದ್ಧ ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ