newsfirstkannada.com

ಪ್ರೀತಿ ವಿಚಾರಕ್ಕೆ ಭೀಕರ ಹತ್ಯೆ? ಮಹಿಳೆಯ ಮೇಲೆ ಗುಂಡು ಹಾರಿಸಿ ಸಾವಿಗೆ ಶರಣಾದ ಪೊಲೀಸ್ ಪೇದೆ

Share :

24-05-2023

  ಪ್ರೀತಿ ನಿರಾಕರಿಸಿದ್ದಕ್ಕೆ ಪೇದೆ ಗುಂಡಿನ ದಾಳಿ

  ಲವ್ವರ್ ಜೊತೆ ಆತನ ತಂದೆ ಬರ್ಬರ ಹತ್ಯೆ

  ಇದು ಪೊಲೀಸಪ್ಪನ ದುರಂತ ಪ್ರೇಮಗೀತೆ

ಭೋಪಾಲ್: ಪೊಲೀಸ್ ಪೇದೆಯೊಬ್ಬರು ಮಹಿಳೆಯ ಮೇಲೆ ಗುಂಡು ಹಾರಿಸಿ ಬಳಿಕ ಆಕೆಯ ತಂದೆಯನ್ನು ಕೊಲೆ ಮಾಡಿದ ನಂತರ ತಾವು ಕೂಡ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಮಧ್ಯಪ್ರದೇಶದ ಬರ್ಚಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲಿಖೇಡಿ ಗ್ರಾಮದಲ್ಲಿ ನಡೆದಿದೆ. ಸುಭಾಷ್ ಖರಾಡಿ ಮೃತ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ.

ಪ್ರೀತಿ ವಿಚಾರಕ್ಕೆ ಈ ಭೀಕರ ಕೊಲೆಯನ್ನು ಮಾಡಲಾಗಿದೆ ಎಂದು ಪೊಲೀಸ್​​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತ ಪೊಲೀಸ್ ಪೇದೆಯು ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಈ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ಗುಂಡು ಹಾರಿಸಿದ್ದಾನೆ. ಜೊತೆಗೆ ಆಕೆಯ ತಂದೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಈ ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆಯ ತಂದೆ ಮೃತಪಟ್ಟಿದ್ದಾರೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಭವಿಷ್ಯ ಭಾಸ್ಕರ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿ ವಿಚಾರಕ್ಕೆ ಭೀಕರ ಹತ್ಯೆ? ಮಹಿಳೆಯ ಮೇಲೆ ಗುಂಡು ಹಾರಿಸಿ ಸಾವಿಗೆ ಶರಣಾದ ಪೊಲೀಸ್ ಪೇದೆ

https://newsfirstlive.com/wp-content/uploads/2023/05/police-death.jpg

Load More