newsfirstkannada.com

ವರುಣಾಕ್ಕೆ ಸುದೀಪ್ ಬಾರದಂತೆ ನೋಡಿಕೊಂಡವರು ಯಾರು? ಎಳಸು ಎಂದ ಸಿದ್ದು ವಿರುದ್ಧ ಪ್ರತಾಪ್ ಸಿಂಹ ಹೊಸ ಬಾಂಬ್‌

Share :

16-06-2023

  ನಿಮಗೆ ಯಾರ್ ಯಾರು ಕರೆ ಮಾಡಿ ಹಣ ಸಹಾಯ ಮಾಡಿದ್ದಾರೆ ಹೇಳಿ

  ನಾನು ಕೇಳಿದ ಪ್ರಶ್ನೆಗಳಿಗೇಕೆ ನೀವು ಉತ್ತರ ನೀಡುತ್ತಿಲ್ಲ ಎಂದ ಸಿಂಹ

  ದೇವೇಗೌಡರನ್ನು ತಾತ್ಸಾರದಲ್ಲಿ ಮಾತನಾಡಿಸೋದು ನಿಮ್ಮ ಪ್ರಬುದ್ಧತೆ

ಮೈಸೂರು: ಸಿಎಂ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ ಅವರ ಮಧ್ಯೆ ನಡೆಯುತ್ತಿರುವ ವಾಕ್ಸಮರ ಮತ್ತಷ್ಟು ಜೋರಾಗಿದೆ. ಪ್ರತಾಪ್ ಸಿಂಹ ಒಬ್ಬ ಎಳಸು ಎಂದಿದ್ದ ಸಿದ್ದರಾಮಯ್ಯ ಅವರಿಗೆ ಪ್ರತಾಪ್ ಸಿಂಹ ಅವರು ನಿಮ್ಮ ರೀತಿಯ ಪ್ರಬುದ್ಧತೆ ನಮಗೆ ಬೇಡ. ವರುಣಾದಲ್ಲಿ ಗೆಲ್ಲುವುದಕ್ಕೆ ಅನುಕೂಲ ಪಡೆದುಕೊಳ್ಳುವ ರೀತಿಯ ಪ್ರಬುದ್ಧತೆ ನನಗೆ ಬೇಡ ಎಂದು ತಿರುಗೇಟು ಕೊಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ನನ್ನನ್ನು ಎಳಸು ಎಂದರು ಬೇಜಾರಿಲ್ಲ. ನಾನು ಕೇಳಿದ ಪ್ರಶ್ನೆಗಳಿಗೇಕೆ ಉತ್ತರ ನೀಡುತ್ತಿಲ್ಲ. ನನ್ನನ್ನ ಚೈಲ್ಡ್ ಅಂತಾನೆ ಕರಿಯಿರಿ ಬೇಜಾರ್ ಇಲ್ಲ. ಆದರೆ ರಾಜ್ಯದಲ್ಲಿ ಸಂಪನ್ಮೂಲ ಕ್ರೂಢೀಕರಣ ಮಾಡುವುದು ಹೇಗೆ ಎಂದು ತಿಳಿಸಿ. ಸೀನಿಯರ್ ರಾಜಕಾರಣಿ ಆಗಿರುವ ನೀವು ಡಾ. ಜಿ ಪರಮೇಶ್ವರ್ ಅವರನ್ನ ಮುಗಿಸಿ ಸಿಎಂ ಆಗಿದ್ರಲ್ಲಾ ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ ಸರ್ ಎಂದು ಪ್ರತಾಪ್ ಸಿಂಹ ಹೇಳಿದರು.

ಇನ್ನು, ರಾಜಕೀಯ ಜೀವನದಲ್ಲಿ ಮುಂದೆ ಬರಲು ನಿಮಗೆ ಸಹಕರಿಸಿದವರು ಹೆಚ್.ಡಿ ದೇವೇಗೌಡರು. ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿದ ಹೆಚ್.ಡಿ.ದೇವೇಗೌಡ ಅವರನ್ನು ಏಕವಚನ, ತಾತ್ಸಾರದಲ್ಲಿ ಮಾತನಾಡುತ್ತೀರಿ. ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ ಅದು ನನಗೆ ಬೇಡ ಸರ್. 10 ಕೆಜಿ ಅಕ್ಕಿ ಕೊಡುವ ಘೋಷಣೆ ಮಾಡುವ ಮುನ್ನ ಮೋದಿ ಜೀ ಕೇಳಿದ್ರಾ? ಇದನ್ನೆಲ್ಲಾ ಮೆಚೂರಿಟಿ ಎನ್ನುವುದಾದ್ರೆ ಅದ್ಯಾವುದು ನಮಗೆ ಬೇಡ ಸರ್ ಎಂದು ಪ್ರತಾಪ್ ಸಿಂಹ ಕುಟುಕಿದ್ದಾರೆ.

ನಿಮ್ಮ ಪ್ರಕಾರ ಪ್ರಬುದ್ಧತೆ ಎಂದರೆ ಏನು?
ಸುದ್ದಿಗೋಷ್ಟಿಯಲ್ಲಿ ಮಾತು ಮುಂದುವರಿಸಿದ ಪ್ರತಾಪ್ ಸಿಂಹ ಅವರು, ನಿಮ್ಮ ರೀತಿಯ ಪ್ರಬುದ್ಧತೆ ನಮಗೆ ಬೇಡ. ತಮ್ಮ ರಾಜಕೀಯ ಲಾಭಕ್ಕಾಗಿ 2013ರಲ್ಲಿ ಸ್ವಜಾತಿಯವರನ್ನು ಛೂ ಬಿಟ್ಟು ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದ್ದು ಪ್ರಬುದ್ಧತೆಯೇ? ಅಂತಹ ಪ್ರಬುದ್ಧತೆ ನನಗೆ ಬೇಡ. ಮಗ, ಮೊಮ್ಮಗನನ್ನು ರಾಜಕೀಯಕ್ಕೆ ತರಲು ಪೂರಕ ಪ್ರಯತ್ನ ಮಾಡುವ ಪ್ರಬುದ್ಧತೆ ನನಗೆ ಬೇಡ. ವರುಣಾದಲ್ಲಿ ಗೆಲ್ಲುವುದಕ್ಕೆ ಅನುಕೂಲ ಪಡೆದುಕೊಳ್ಳುವ ರೀತಿಯ ಪ್ರಬುದ್ಧತೆ ನನಗೆ ಬೇಡ. ನಟ ಸುದೀಪ್ ಪ್ರಚಾರಕ್ಕೆ ಬಾರದಂತೆ ನೋಡಿಕೊಂಡವರು ಯಾರು. ನಿಮಗೆ ಯಾರ್ ಯಾರು ಕರೆ ಮಾಡಿದ್ದಾರೆ. ಹಣ ಸಹಾಯ ಮಾಡಿದ್ದಾರೆ ಹೇಳಿ. ಇದೆಲ್ಲವೂ ನಮಗೆ ಗೊತ್ತಿದೆ ಎನ್ನುತ್ತಾ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವರುಣಾಕ್ಕೆ ಸುದೀಪ್ ಬಾರದಂತೆ ನೋಡಿಕೊಂಡವರು ಯಾರು? ಎಳಸು ಎಂದ ಸಿದ್ದು ವಿರುದ್ಧ ಪ್ರತಾಪ್ ಸಿಂಹ ಹೊಸ ಬಾಂಬ್‌

https://newsfirstlive.com/wp-content/uploads/2023/06/Pratap-Simha-1.jpg

Load More