ಆದಿ ಚುಂಚನಗಿರಿ ಶಾಖಾ ಮಠಕ್ಕೆ ಹೆಚ್.ಡಿ ದೇವೇಗೌಡರು ಭೇಟಿ
ಹಳೇ ಮೈಸೂರು ಭಾಗದ ಮೇಲೆ ಗಮನ ಹರಿಸುತ್ತಿರುವ ಜೆಡಿಎಸ್
ಈಗಿನಿಂದಲೇ ಪ್ರತಾಪ್ ಸಿಂಹ ಜೆಡಿಎಸ್ ಮತ ಬ್ಯಾಂಕ್ ಮೇಲೆ ಕಣ್ಣು
ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಮೆಗಾ ಎಲೆಕ್ಷನ್ ಎದುರಿಸೋ ಚರ್ಚೆಗಳು ಜೋರಾಗಿದೆ. ಮೈತ್ರಿ ಮಾತುಕತೆ ಖಚಿತ ಆಗುತ್ತಿದ್ದಂತೆಯೇ ಜೆಡಿಎಸ್ ವಿರುದ್ಧ ಕೆಂಡ ಕಾರುತ್ತಿದ್ದ ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಂದೆ ಮಂಡಿಯೂರಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇದನ್ನು ಓದಿ: ಇಂದು ದೆಹಲಿಗೆ ತೆರಳುತ್ತಾರಾ ಹೆಚ್ ಡಿ ಕುಮಾರಸ್ವಾಮಿ? ಪ್ರಧಾನಿಯನ್ನು ಭೇಟಿ ಮಾಡುತ್ತಾರಾ? ಇಲ್ಲಿದೆ ಮಾಹಿತಿ
ಮೈತ್ರಿ ಮಾತುಕತೆ ಖಚಿತ ಆಗುತ್ತಿದ್ದಂತೆಯೇ ಜೆಡಿಎಸ್ ವಿರುದ್ಧ ಆಗಾಗ ಕೆಂಡ ಕಾರುತ್ತಿದ್ದ ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಆದಿ ಚುಂಚನಗಿರಿ ನೂತನ ಶಾಖಾ ಮಠದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಭೇಟಿ ಮಾಡಿದ್ದಾರೆ.
ಬಳಿಕ ಹೆಚ್.ಡಿ ದೇವೇಗೌಡರ ಮುಂದೆ ಮಂಡಿಯೂರಿ ಸಂಸದ ಪ್ರತಾಪ್ ಸಿಂಹ ನಮಸ್ಕರಿಸಿದ್ದಾರೆ. ಸದ್ಯ ಈ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈಗ ಇಬ್ಬರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಈ ಫೋಟೋ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ಸಂಸದ ಪ್ರತಾಪ್ ಸಿಂಹ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಈ ಬಾರಿ ದೋಸ್ತಿ ಜೊತೆ ಹ್ಯಾಟ್ರಿಕ್ ಸಾಧಿಸುವುದು ಪ್ರತಾಪ್ ಸಿಂಹ ಕನಸಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ