newsfirstkannada.com

‘ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ಮುಸ್ಲೀಮರನ್ನು ಒಡೆಯುತ್ತಿರುವ ಕಾಂಗ್ರೆಸ್​​’​- ಪ್ರತಾಪ್​ ಸಿಂಹ ಲೇವಡಿ

Share :

03-06-2023

  ಗ್ಯಾರಂಟಿಗಳ ಬಗ್ಗೆ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಲೇವಡಿ

  ಮನೆ ಯಜಮಾನಿ ಯಾರು ಅಂತಾ ತೀರ್ಮಾನ ಮಾಡಬೇಕಂತೆ?

  ಈ ಕುರಿತು ಸಂಸದ ಪ್ರತಾಪ್​ ಸಿಂಹ ಹೇಳಿದ್ದೇನು..?

ಮೈಸೂರು: ಗೃಹಲಕ್ಷ್ಮೀ ಸ್ಕೀಮ್​ ಹೆಸರಲ್ಲಿ ಕಾಂಗ್ರೆಸ್​​ ಮುಸ್ಲಿಮರನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಜಾರಿ ಮಾಡಿದ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ತಮ್ಮ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ರಾಜ್ಯದ ಜನತೆಗೆ ಶುಭ ಸುದ್ದಿಯನ್ನು ನೀಡಿದ್ದರು. ಮನೆ ಯಜಮಾನಿಗೆ 2000 ರೂಪಾಯಿ, ಗೃಹಜ್ಯೋತಿ, ಅನ್ನಭಾಗ್ಯ, ಉಚಿತ ಬಸ್​ ಹಾಗೂ ಯುವನಿಧಿ ಯೋಜನೆಯನ್ನು ಫೋಷಣೆ ಮಾಡಿದ್ದರು.

ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಅವರು, ಮನೆ ಯಜಮಾನಿ ಯಾರು ಅಂತಾ ತೀರ್ಮಾನ ಮಾಡಬೇಕಂತೆ? ಮನೆಯೊಳಗೆ ಅತ್ತೆ – ಸೊಸೆ ಜಗಳ ಇದ್ದೇ ಇರುತ್ತೆ. ಈಗ ಅತ್ತೆ ಹಾಗೂ ಸೊಸೆ ಇಬ್ಬರು ಕೂತು ಈ ತೀರ್ಮಾನ ಮಾಡಲು ಸಾಧ್ಯನಾ? ನೀವು ಹೀಗೆ ಹೇಳಿ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡುತಿದ್ದೀರಾ? ಹಿಂದೂಗಳ ಕುಟುಂಬದಲ್ಲಿ ಅತ್ತೆ- ಸೊಸೆ ನಡುವೆ ಜಗಳ ಉಂಟಾದರೆ, ಅಲ್ಲಿ ಮುಸ್ಲೀಮರ ಮನೆಯಲ್ಲಿ ಎರಡು, ಮೂರು ಹೆಂಡ್ತಿಯರು ಇದ್ದಾರೆ. ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ? ಅವರ ಮನೆಯೊಳಗೆ ಬೆಂಕಿ ಹಾಕುತ್ತಿದ್ದೀರಿ. ಅವರ ಕುಟುಂಬವನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಾ ಎಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ಮುಸ್ಲೀಮರನ್ನು ಒಡೆಯುತ್ತಿರುವ ಕಾಂಗ್ರೆಸ್​​’​- ಪ್ರತಾಪ್​ ಸಿಂಹ ಲೇವಡಿ

https://newsfirstlive.com/wp-content/uploads/2023/06/siddu-9.jpg

Load More