newsfirstkannada.com

‘ನನ್ನ ಹೆತ್ತ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ, ಯಡಿಯೂರಪ್ಪನವರು..’ ಏನ್ ಹೇಳಿದ್ರು ಗೊತ್ತಾ ರೇಣುಕಾಚಾರ್ಯ..?

Share :

01-07-2023

    ‘11 ಮಂದಿಗೆ ನೋಟಿಸ್ ಅಂದ್ರು, ಉಳಿದ 10 ಜನ ಯಾರು?’

    ‘BSY ವಿರುದ್ಧ ಮಾತಾಡಿದ್ರೆ ಪಕ್ಷದಲ್ಲಿ ರಾಜಮರ್ಯಾದೆ’

    ಕಾಂಗ್ರೆಸ್​ ಸೇರುವ ಸುದ್ದಿಗೆ ಉತ್ತರ ಕೊಟ್ಟ ರೇಣುಕಾಚಾರ್ಯ

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

‘BSY ವಿರುದ್ಧ ಮಾತಾಡಿದ್ರೆ ರಾಜಮರ್ಯಾದೆ’

ಯಡಿಯೂರಪ್ಪ ಅವರನ್ನು ಎರಡು ಬಾರಿ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಆಗ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿತ್ತು. ಯಡಿಯೂರಪ್ಪ ವಿರುದ್ಧ ಮಾತಾಡಿದರೆ ರಾಜ ಮರ್ಯಾದೆ, ಯಾವುದೇ ಶಿಸ್ತು ಕ್ರಮ ಇಲ್ಲ. ಯಡಿಯೂರಪ್ಪ ಕೀಳುಮಟ್ಟದ ರಾಜಕಾರಣ ಮಾಡಲ್ಲ. ಯಡಿಯೂರಪ್ಪಗೆ ಸಂಘ ಪರಿವಾರದ ಹಿನ್ನೆಲೆ ಇದೆ. ಈಗ ಬಿಜೆಪಿಯಲ್ಲಿ ಇರೋರು ಯಾರೂ ಪಕ್ಷವನ್ನು ಕಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರತಾಪ್ ಸಿಂಹ JDS ಜೊತೆ ಹೊಂದಾಣಿಕೆ ಮಾಡ್ಕೊಂಡಿಲ್ವಾ?

ಮೈಸೂರು ಲೋಕಸಭಾ ಸದಸ್ಯರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ವಾ? ಇದು ಯಾರಿಗೂ ಗೊತ್ತಿಲ್ವಾ? ನಾನು ಬಿಜೆಪಿ, ಮೋದಿ ವಿರುದ್ಧವಾಗಿ ಮಾತಾಡಿಲ್ಲ. ಪಕ್ಷ ಕಟ್ಟಿ ಬೆಳೆಸಿದ ಮಹಾನ್ ನಾಯಕ ಯಡಿಯೂರಪ್ಪಗೆ ಅಪಮಾನ ಮಾಡಿದ್ದಾರೆ. ರೇಣುಕಾಚಾರ್ಯಗೆ ನೋಟಿಸ್ ಕೊಟ್ಟಿದ್ದನ್ನು ವ್ಯವಸ್ಥಿತವಾಗಿ ಬಿಡುಗಡೆ ಮಾಡ್ತೀರಿ. ರಾಜ್ಯಾಧ್ಯಕ್ಷರು 11 ಜನರಿಗೆ ನೋಟಿಸ್ ಕೊಟ್ಟಿದ್ದೇವೆ ಅಂದಿದ್ದಾರೆ. ಹಾಗಾದರೆ ಉಳಿದ 10 ಜನರು ಯಾರು?

ನನ್ನ ಬಲಿಪಶು ಮಾಡಲು ಸಾಧ್ಯವಿಲ್ಲ

ನಾನು ಕಾಂಗ್ರೆಸ್​ಗೆ ಹೋಗುತ್ತೇನೆ ಎಂದು ಎಲ್ಲಿ ಸೃಷ್ಟಿ ಮಾಡಿದ್ದಾರೋ ಗೊತ್ತಿಲ್ಲ. ನಾನು ಬಿಜೆಪಿ ಬಿಡಲ್ಲ. ನನ್ನನ್ನು ಬಲಿಪಶು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಟಾರ್ಗೆಟ್ ಮಾಡಲೂ ಆಗೋದಿಲ್ಲ. ಮೋದಿ, ಬಿಎಸ್​ವೈ ಹಾಗೂ ನನ್ನ ಕ್ಷೇತ್ರದ ಜನರ ಆಶೀರ್ವಾದ ನನಗೆ ಇದೆ ಎಂದರು. ವಲಸಿಗರಿಂದ ಪಕ್ಷದಲ್ಲಿ ಅಶಿಸ್ತು ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರು ಹಿರಿಯರು. ನಾನು ಈಶ್ವರಪ್ಪಗೆ ಯಾವುದೇ ಕೌಂಟರ್ ಕೊಡುತ್ತಿಲ್ಲ. ಶಾಸಕರು ಕಾಂಗ್ರೆಸ್, ಜೆಡಿಎಸ್​ನಿಂದ ಬಂದಿದ್ದರಿಂದ ಬಿಜೆಪಿ ಸರ್ಕಾರ ಬಂತು. ಪಕ್ಷದಲ್ಲಿ, ಸರ್ಕಾರದಲ್ಲಿ ಅನೇಕ ತಪ್ಪುಗಳಾಗಿವೆ ಎಂದರು.

ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ

ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ಮುಂದೆ ಬಹಿರಂಗವಾಗಿ ಮಾತನಾಡಬೇಡ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ನಾನು ಯಡಿಯೂರಪ್ಪಗೆ ಗೌರವ ಕೊಡ್ತೀನಿ. ಕೇಂದ್ರದ ನಾಯಕರನ್ನು ಭೇಟಿ ಮಾಡಿ, ಸೋಲಿಗೆ ಕಾರಣ ಯಾರು ಎಂದು ಹೇಳ್ತೀನಿ. ನನ್ನನ್ನು ಟಾರ್ಗೆಟ್ ಮಾಡಲು ಆಗಲ್ಲ, ಯಡಿಯೂರಪ್ಪ ಅವರನ್ನು ಏನೂ ಮಾಡಲು ಆಗೋದಿಲ್ಲ. ನನ್ನ ಹೆತ್ತ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ. ಬಿಎಸ್​ವೈ ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡಲ್ಲ. ಮಾಡೋದು ಇಲ್ಲ. ಅವರೊಬ್ಬ ಅಪ್ರತಿಮ ನಾಯಕ. ನನ್ನಂತವನಿಂದ ಈ ರೀತಿಯ ಹೇಳಿಕೆಗಳನ್ನು ಯಾವತ್ತೂ ಹೇಳಿಸಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಹೆತ್ತ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ, ಯಡಿಯೂರಪ್ಪನವರು..’ ಏನ್ ಹೇಳಿದ್ರು ಗೊತ್ತಾ ರೇಣುಕಾಚಾರ್ಯ..?

https://newsfirstlive.com/wp-content/uploads/2023/07/RENUKACHARYA.jpg

Load More