ಮತ್ತೆ ಸ್ವ-ಪಕ್ಷದ ವಿರುದ್ಧ ರೇಣುಕಾಚಾರ್ಯ ಗುಡುಗು
‘ಪಕ್ಷದ ಶಿಸ್ತು ಸಮಿತಿ’ಯನ್ನು ಗೇಲಿ ಮಾಡಿದ ಮಾಜಿ ಸಚಿವ
ದೊಡ್ಡವರು ಕರೆ ಮಾಡಿ ರೇಣುಕಾಚಾರ್ಯಗೆ ಏನ್ ಹೇಳ್ತಿದ್ದಾರಂತೆ ಗೊತ್ತಾ?
ಸ್ವಪಕ್ಷದ ವಿರುದ್ಧ ಮಾತನಾಡುವ ಪ್ರವೃತ್ತಿಯನ್ನು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮುಂದುವರಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿರುವ ರೇಣುಕಾಚಾರ್ಯ, ನಾನು ಯಾವುದೇ ಕಾರಣಕ್ಕೂ ನೋಟಿಸ್ಗೆ ಉತ್ತರ ನೀಡಲ್ಲ. ನಮ್ಮಲ್ಲಿ ಶಿಸ್ತು ಸಮಿತಿ ಇದೆ ಎಂದು ಗೊತ್ತಾಗಿದ್ದೆ ನಂಗೆ ನೋಟಿಸ್ ಕೊಟ್ಟ ಮೇಲೆ ಎಂದಿದ್ದಾರೆ.
ನನಗೆ ಶಿಸ್ತು ಸಮಿತಿಯ ಅಧ್ಯಕ್ಷರು ಯಾರು ಅಂತ ಸಹ ಗೊತ್ತಿಲ್ಲ. ನಾನು ಯಾವುದೇ ರೀತಿ ತಪ್ಪು ಮಾತನಾಡಿಲ್ಲ. ಕಾರ್ಯಕರ್ತರು ಮಾತನಾಡುವುದನ್ನೇ ಹೇಳಿದ್ದೇನೆ. ನಾನು ಹೇಳಿದ್ದನ್ನು ನೋಡಿ ನಮ್ಮ ಪಕ್ಷದ ನಾಯಕರೆ ಕರೆ ನೀವು ಮಾತನಾಡುತ್ತಿರುವುದು ಸರಿ ಇದೆ ಎಂದಿದ್ದಾರೆ. ಯಡಿಯೂರಪ್ಪ ವಿರುದ್ಧ ಮಾತನಾಡಿದವರಿಗೆ ರಾಜ ಮರ್ಯಾದೆನಾ ಎಂದು ಪ್ರಶ್ನೆ ಮಾಡಿದ್ದಾರೆ.
ಪಕ್ಷದಲ್ಲಿ 11 ಜನರಿಗೆ ನೋಟಿಸ್ ಕೊಟ್ಟಿದ್ದೀವಿ ಎಂದು ಹೇಳಿದ್ದಾರೆ. ನನ್ನೊದೊಂದು ನೋಟಿಸ್ ವೈರಲ್ ಮಾಡ್ತಾರೆ. ನಾನು ಯಾವುದೇ ಕಾರಣಕ್ಕೂ ನೋಟಿಸ್ಗೆ ಉತ್ತರ ಕೊಡಲ್ಲ. ಶಾಮನೂರು ಶಿವಶಂಕರಪ್ಪ ಜೊತೆ ರಾಜಕೀಯ ಬಿಟ್ಟು ಉತ್ತಮ ಒಡನಾಟ ಇದೆ. ನಾನು ಈಗಲೂ ಪಕ್ಷದಲ್ಲಿಯೇ ಇದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ