newsfirstkannada.com

ಉರಿಯೋ ಬೆಂಕಿಗೆ ತುಪ್ಪ ಸುರಿದ ಎಂ.ಪಿ ರೇಣುಕಾಚಾರ್ಯ; ನಳಿನ್‌ಕುಮಾರ್ ಕಟೀಲ್‌ಗೆ ಕೊಟ್ಟ ಕೌಂಟರ್ ಏನು?

Share :

28-06-2023

    ಯಡಿಯೂರಪ್ಪ, ಶೆಟ್ಟರ್‌, ಈಶ್ವರಪ್ಪರನ್ನು ಕಡೆಗಣಿಸಿದ್ದು ಸೋಲಿಗೆ ಕಾರಣ

    ಮೋದಿಜಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕಾದ್ರೆ ನೀವು ಜಾಗ ಬಿಡಿ

    ಅಧ್ಯಕ್ಷರಿಗೆ ವಿನಂತಿ ಅಂತಾನೇ ಸಖತ್ ಟಾಂಗ್ ಕೊಟ್ಟ ರೇಣುಕಾಚಾರ್ಯ

ದಾವಣಗೆರೆ: ವಿಧಾನಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ನಾಯಕರ ಸಿಟ್ಟು, ಕೋಪ ಅಸಮಾಧಾನ ದಿನಕಳೆದಂತೆ ಜಾಸ್ತಿಯಾಗ್ತಿದೆ. ಸೋಲಿನ ಪರಾಮರ್ಶೆಯ ಜೊತೆಗೆ ಸೋಲಿನ ಹೊಣೆ ಹೊತ್ತವರ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕುರ್ಚಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಹೊನ್ನಾಳಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರಂತೂ ಇವತ್ತು ಕಟೀಲ್ ಅವರನ್ನೇ ಡೈರೆಕ್ಟ್ ಅಟ್ಯಾಕ್ ಮಾಡಿದ್ದಾರೆ.

ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗೇ ಧ್ವನಿ ಎತ್ತಿರೋ ರೇಣುಕಾಚಾರ್ಯ ಅವರು ಬಿಜೆಪಿ ಪಕ್ಷವನ್ನು ಹಗಲು ರಾತ್ರಿ ಕಟ್ಟಿದ ಹಿರಿಯರಾದ ಯಡಿಯೂರಪ್ಪ, ದಿವಂಗತ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪನವರದ್ದು ಬಹುದೊಡ್ಡ ಪಾತ್ರವಿದೆ. ಅಂಥವರನ್ನು ಚುನಾವಣಾ ಸಮಯದಲ್ಲಿ ಕಡೆಗಣಿಸಿದ್ದು. ಬಿಜೆಪಿಗೆ ನಷ್ಟವಾಯಿತು ಎಂದಿದ್ದಾರೆ.

ಇನ್ನು, ಭಾರತೀಯ ಜನತಾ ಪಕ್ಷ ನನಗೆ ತಾಯಿ ಸಮಾನ. ನನಗೆ ಎಲ್ಲಾ ಸ್ಥಾನಮಾನ ನೀಡಿರುವುದು ಬಿಜೆಪಿ. ಪಕ್ಷಕ್ಕೆ ಹೀನಾಯ ಸೋಲಾದಾಗ ನಾವೆಲ್ಲರೂ ಸತ್ಯಸಂಗತಿಗಳ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಲೇಬೇಕು. ಜನತಾ ನ್ಯಾಯಾಲಯದಲ್ಲಿ ಜನರು ತೀರ್ಪು ನೀಡಿದ್ದಾರೆ ಅದಕ್ಕೆ ನಾವು ತಲೆಬಾಗಲೇಬೇಕು. ಅದೇ ಜನಸಾಮಾನ್ಯರು ತಿಳಿಸಿದ ಅಭಿಪ್ರಾಯವನ್ನು ನಾನು ತಿಳಿಸುತ್ತಿದ್ದೇನೆ ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ ಬಿಜೆಪಿ ರಾಜ್ಯದ ಅಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ. ನಿಮ್ಮ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಮೋದಿಜಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲ ಪಕ್ಷದ ನಾಯಕರು ಕಾರ್ಯಕರ್ತರನ್ನು ಜೋಡಣೆ ಮಾಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಉರಿಯೋ ಬೆಂಕಿಗೆ ತುಪ್ಪ ಸುರಿದ ಎಂ.ಪಿ ರೇಣುಕಾಚಾರ್ಯ; ನಳಿನ್‌ಕುಮಾರ್ ಕಟೀಲ್‌ಗೆ ಕೊಟ್ಟ ಕೌಂಟರ್ ಏನು?

https://newsfirstlive.com/wp-content/uploads/2023/06/MP-Renukacharya.jpg

Load More