newsfirstkannada.com

ದಿಢೀರ್ ಶಾಮನೂರು ಭೇಟಿ; ಕಾಂಗ್ರೆಸ್​ ಸೇರುವ ವದಂತಿಗೆ ಸ್ಪಷ್ಟಣೆ ಕೊಟ್ಟ ಎಂ.ಪಿ.ರೇಣುಕಾಚಾರ್ಯ

Share :

18-09-2023

    ವರಸೆ ಬದಲಿಸಿ ಬಿಜೆಪಿ ಮುಂದೆ ಹೊಸ ಡಿಮ್ಯಾಂಡ್

    ಶಾಮನೂರು ಭೇಟಿ ಬಗ್ಗೆ ರೇಣುಕಾಚಾರ್ಯ ಸ್ಪಷ್ಟಣೆ

    ಶೆಟ್ಟರ್ ಕರೆ ಮಾಡಿದ್ದು ನಿಜ ಎಂದ ಮಾಜಿ ಸಚಿವ

ದಾವಣಗೆರೆ: ನಾನು ಬಿಜೆಪಿಯಲ್ಲೇ ಇದ್ದೇನೆ, ಬಿಜೆಪಿ ಎಂಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಅಂತ ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ನೋಡೋಣ ಮುಂದೆ ಏನಾಗುತ್ತೋ ಕಾದು ನೋಡೋಣ. ಬಿಜೆಪಿ ಹೆತ್ತ ತಾಯಿಗೆ ಸಮಾನ, ಆದರೆ ಕೆಲವರ ದೌರ್ಬಲ್ಯಗಳ ಬಗ್ಗೆ ಮಾತನಾಡಿದ್ದೆ. ನಾನು ಕಾಂಗ್ರೆಸ್​​ಗೆ ಹೋಗ್ತಿನಿ ಅಂದಿಲ್ಲ, ಅವರು ಸಹ ನನ್ನನ್ನು ಕರೆದಿಲ್ಲ, ರಾಜಕೀಯ ಹೊರತಾಗಿ ಕ್ಷೇತ್ರದ ಕೆಲಸಕ್ಕಾಗಿ ಬಂದಿದ್ದೇನೆ ಅಂತ ಸಚಿವ ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಭೇಟಿ ಬಳಿಕ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ನಾನು ಕಾಂಗ್ರೆಸ್​ ಹೋಗ್ತೀನಿ ಅಂದಿಲ್ಲ, ಅವರು ಸಹ ನನ್ನನ್ನು ಕರೆದಿಲ್ಲ. ರಾಜಕೀಯ ಹೊರತಾಗಿ ಕ್ಷೇತ್ರದ ಕೆಲಸಕ್ಕಾಗಿ ಬಂದಿದ್ದೇನೆ. ಬಿಜೆಪಿ ಜಿಲ್ಲಾಧ್ಯಕ್ಷ ನನ್ನ ಬಗೆ ಹಗುರವಾಗಿ ಮಾತನಾಡಿದ್ದಾರೆ. ಯಾರೋ ಕಟ್ಟಿದ್ದ ಪಕ್ಷದಲ್ಲಿ ಬಾಯಿಗೆ ಬಂದಂತೆ ಮಾತನಾಡಬೇಡಿ. ನನ್ನ ಬಗ್ಗೆ ಮಾತನಾಡಿದರೆ ಹುಷಾರು. ನನಗೆ ಎಚ್ಚರಿಕೆ ಕೊಡೋಕೆ ನೀನು ಯಾರು? ಜಿಲ್ಲೆಗೆ ಜಿಲ್ಲಾಧ್ಯಕ್ಷರ ಕೊಡುಗೆ ಏನಿದೆ? ಚುನಾವಣೆ ಸಮಯದಲ್ಲಿ ಕ್ಷೇತ್ರಗಳಿಗೆ ಬಂದಿದ್ರಾ? ಮಾಜಿ ಸಚಿವ ಜಗದೀಶ್ ಶೆಟ್ಟರ್ ಕರೆ ಮಾಡಿದ್ದು ನಿಜ. ಸೌಹಾರ್ದಯುತವಾಗಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿಢೀರ್ ಶಾಮನೂರು ಭೇಟಿ; ಕಾಂಗ್ರೆಸ್​ ಸೇರುವ ವದಂತಿಗೆ ಸ್ಪಷ್ಟಣೆ ಕೊಟ್ಟ ಎಂ.ಪಿ.ರೇಣುಕಾಚಾರ್ಯ

https://newsfirstlive.com/wp-content/uploads/2023/09/SHAMANURU.jpg

Load More