newsfirstkannada.com

ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲಾಗದ ಅಣ್ಣಾಮಲೈ ಕಡೆಯಿಂದ ನಾವು ಪಾಠ ಕಲಿಯಬೇಕೇ?- ರೇಣುಕಾಚಾರ್ಯ

Share :

29-06-2023

    ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು

    ಸೋಲಿನ ಹತಾಶೆಯಿಂದ ನಿತ್ಯ ಬೀದಿಯಲ್ಲೇ ರಾಜ್ಯ ಬಿಜೆಪಿ ನಾಯಕರ ಕಿತ್ತಾಟ

    ಅಣ್ಣಾಮಲೈ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಸಚಿವ ರೇಣುಕಾಚಾರ್ಯ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲಾಗದ ಅಣ್ಣಾಮಲೈ ನಮಗೆ ಮಾರ್ಗದರ್ಶನ ಮಾಡುತ್ತಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಇಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಪಿ ರೇಣುಕಾಚಾರ್ಯ, ರಾಜ್ಯಕ್ಕೆ ತಮಿಳುನಾಡಿನಿಂದ ಬಂದ ಅಣ್ಣಾಮಲೈ ನಮಗೆ ಪಾಠ ಮಾಡುತ್ತಾರೆ. ಏನು ಅಣ್ಣಾಮಲೈ ದೊಡ್ಡ ನಾಯಕನೇ? ಎಂದು ಪ್ರಶ್ನೆ ಕೇಳಿದ್ದಾರೆ.

ಒಂದು ಕಾಲದಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದ ಐಪಿಎಸ್​​ ಅಧಿಕಾರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಒಂದು ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲಾಗದ ಅಣ್ಣಾಮಲೈಯಿಂದ ಕೇಳಿಸಿಕೊಳ್ಳುವುದು ಎಂದರೆ ಎಂಥಾ ಮುಜುಗರ. ಇದು ನಾನು ಆಡುತ್ತಿರುವ ಮಾತುಗಳಲ್ಲ, ಬದಲಿಗೆ ಕಾರ್ಯಕರ್ತರ ಭಾವನೆಗಳು ಎಂದರು.

ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದ ಡಾ. ಕೆ ಸುಧಾಕರ್​​ ಸೋತಾಗ ಮನೆಗೆ ಹೋಗಿ ಸಾಂತ್ವನ ಹೇಳಿದ್ದೀರಿ. 2 ಖಾತೆ ನೀಡದಿದ್ದರೆ ಬಿಜೆಪಿಯನ್ನೇ ಮುಗಿಸುವೆ ಎಂದು ಬೆದರಿಕೆ ಹಾಕಿದ್ದವರ ಮನೆಗೂ ಹೋಗಿದ್ರಿ. ಬಿಜೆಪಿಯಲ್ಲೇ ಇದ್ದ ನಾನು ನಿಮಗೆ ನೆನಪಾಗಲಿಲ್ಲವೇ? ಸೌಜನ್ಯಕ್ಕಾದರೂ ಒಂದು ಕಾಲ್​​ ಮಾಡಿದ್ರಾ? ಎಂದು ಬಸವರಾಜ ಬೊಮ್ಮಾಯಿಗೆ ಎಂಪಿ ರೇಣುಕಾಚಾರ್ಯ ನೇರವಾಗಿ ಪ್ರಶ್ನಿಸಿದ್ದಾರೆ. ಈಗ ಎಂಪಿ ರೇಣುಕಾಚಾರ್ಯ ನೀಡಿರುವ ಹೇಳಿಕೆ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ. ಇದು ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯದ ಬೇಗುದಿಯನ್ನು ಎತ್ತಿ ತೋರಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲಾಗದ ಅಣ್ಣಾಮಲೈ ಕಡೆಯಿಂದ ನಾವು ಪಾಠ ಕಲಿಯಬೇಕೇ?- ರೇಣುಕಾಚಾರ್ಯ

https://newsfirstlive.com/wp-content/uploads/2023/06/MP-Renukhacharya.jpg

Load More