ಜೆಡಿಎಸ್-ಬಿಜೆಪಿ ಮೈತ್ರಿಗೆ ಸಂಸದರ ಪ್ರತಿಕ್ರಿಯೆ
‘ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ’
ನಾನು ದುಡುಕಿನ ನಿರ್ಧಾರ ತೆಗೆದುಕೊಳ್ಳಲ್ಲ -ಸುಮಲತಾ
ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ.. ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ. ರಾಜಕಾರಣ ಬಿಟ್ಟರೂ ಸ್ವಾಭಿಮಾನ, ಸಿದ್ಧಾಂತ ಬಿಡಲ್ಲ ಎಂದು ಗುಡುಗಿದ್ದಾರೆ.
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ. ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಹೋಗಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಆಗಿದೆ, ಆದರೆ ಕ್ಷೇತ್ರ ಹಂಚಿಕೆ ಇನ್ನೂ ಆಗಿಲ್ಲ. ಈಗ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡಲ್ಲ. ನಾನು ದುಡುಕಿನ ನಿರ್ಧಾರ ಮಾಡಲ್ಲ ಎಂದರು.
ಕ್ಷೇತ್ರ ಹಂಚಿಕೆ ಬಗ್ಗೆ ಮಾತುಕತೆ ನೂರಾರು ನಡೆದಿರಬಹುದು. ಆದರೆ ಇನ್ನು ಯಾವುದೇ ಕ್ಷೇತ್ರ ಹಂಚಿಕೆ ಕನ್ಫರ್ಮ್ ಆಗಿಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ, ನನಗೆ ಆ ವಿಶ್ವಾಸ ಇದೆ. ಈ ಕ್ಷೇತ್ರ ಬೇಕು, ಆ ಕ್ಷೇತ್ರ ಬೇಕು ಎಂದು ಯಾವ ಪಕ್ಷವನ್ನು ಕೇಳಿಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ. ಬೆಂಗಳೂರು ಉತ್ತರ ಆಫರ್ ಕಳೆದ ಚುನಾವಣೆಯಲ್ಲೇ ನಿರಾಕರಿಸಿದ್ದೆ. ನನಗೆ ಈ ಸ್ಥಾನಮಾನ ಕೊಟ್ಟಿದ್ದು ಮಂಡ್ಯ ಜನರು. ಬೇರೆ ಕ್ಷೇತ್ರದ ಆಫರ್ ಎಂದಿಗೂ ಒಪ್ಪಲ್ಲ. ಇದನ್ನ ನೂರಾರು ಬಾರಿ ಹೇಳಿದ್ದೇನೆ, ಇನ್ನು ರಕ್ತದಲ್ಲಿ ಬರೆದು ಕೊಡಬೇಕಾ? ಎಂದು ಪ್ರಶ್ನೆ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ