newsfirstkannada.com

ಧೋನಿ ಸಂಕಷ್ಟದಲ್ಲಿ ಕೈಹಿಡಿದಿದ್ದರು ರೆಬಲ್ ಸ್ಟಾರ್; ಅಂಬಿಯ ‘ಕರ್ಣ ಗುಣ’ದ ಇಂಟರೆಸ್ಟಿಂಗ್ ಸಂಗತಿ..!

Share :

26-08-2023

    ಜನಪ್ರಿಯತೆ ಸಿಕ್ಕಿದ್ದರೂ ಧೋನಿ ಅಂದು ಸಂಕಷ್ಟದಲ್ಲಿದ್ದರು

    ಧೋನಿ ಸ್ಥಿತಿ ತಿಳಿದು ಮರುಗಿದ್ದ ರೆಬಲ್ ಸ್ಟಾರ್ ಅಂಬರೀಶ್

    ವಿಶೇಷ ಮಾಹಿತಿ ಹಂಚಿಕೊಂಡ ಸುಮಲತಾ ಅಂಬರೀಶ್

ವಿಶ್ವ ಕ್ರಿಕೆಟ್​ ಜಗತ್ತು ಕಂಡ ಶ್ರೇಷ್ಟ ಕ್ಯಾಪ್ಟನ್​ ಎಮ್​.ಎಸ್​ ಧೋನಿ ಹಾಗೂ ಕನ್ನಡ ಚಿತ್ರರಂಗದ ಕರ್ಣ ರೆಬಲ್​ ಸ್ಟಾರ್​ ಅಂಬರೀಶ್​​ ನಡುವೆ ಒಂದು ಇಂಟರೆಸ್ಟಿಂಗ್​ ಸಂಗತಿ ನಡೆದಿತ್ತು. ಈ ಕಥೆ ಹಲವರಿಗೆ ಗೊತ್ತಿದ್ರೂ, ಇಷ್ಟು ದಿನ ಇದು ಅಂತೆ ಕಂತೆ ಸುದ್ದಿಯಾಗಿತ್ತು. ಅದಕ್ಕೆ ಈಗ ಸಾಕ್ಷಿ ಸಿಕ್ಕಿದೆ.

ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ 3 ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ವೀರ, ಎಮ್​​.ಎಸ್​ ಧೋನಿಗೆ ಇಂದು ಕೋಟ್ಯಧಿಪತಿ. ಆದರೆ ಇಂಟರ್​​ನ್ಯಾಷನಲ್​ ಕ್ರಿಕೆಟ್​​ಗೆ​​​ ಕಾಲಿಟ್ಟ ದಿನಗಳಲ್ಲಿ ಧೋನಿಯ ಆರ್ಥಿಕ ಸ್ಥಿತಿ ಅಷ್ಟು ಚನ್ನಾಗಿರಲಿಲ್ಲ. ಅವರ ತಂದೆಯೇ ಆಗ ಹೇಳಿಕೊಂಡಂತೆ ಧೋನಿಯ ಆಟದಿಂದ ಹೆಸರು ಫೇಮಸ್​ ಆಗ್ತಿದ್ದಂತೆ ಮನೆಗೆ ಗಣ್ಯ ವ್ಯಕ್ತಿಗಳು, ಅಭಿಮಾನಿಗಳು ಹೆಚ್ಚು ಹೆಚ್ಚು ಬರಲಾರಂಭಿಸಿದ್ರಂತೆ. ಆ ಸಂದರ್ಭದಲ್ಲಿ ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೂಡ ಒದಗಿಸಲಾಗದ ಪರಿಸ್ಥಿತಿ ಕುಟುಂಬದ್ದಾಗಿತ್ತಂತೆ.
ಒಂದು ಖ್ಯಾತಿ ಹೆಚ್ಚುತ್ತಿದ್ದರೂ ಆರ್ಥಿಕವಾಗಿ ಬಲಿಷ್ಠಗೊಳ್ಳದ ಸಂದರ್ಭದಲ್ಲಿ ಪರೋಕ್ಷವಾಗಿ ಮಾಹಿಯ ಕೈ ಹಿಡಿದಿದ್ದು, ರೆಬಲ್​ ಸ್ಟಾರ್​ ಅಂಬರೀಶ್​​. ಅಂಬರೀಶ್, ತಮ್ಮ ಜೊತೆಗಿದ್ದ ಅದೆಷ್ಟೋ ಜನರ ಸಂಕಷ್ಟದ ಸಂದರ್ಭದಲ್ಲಿ ಹೆಗಲಾಗಿ ನಿಂತಿರೋ ಉದಾಹರಣೆ ಸಾಕಷ್ಟಿವೆ. ಅದೇ ರೀತಿ ಧೋನಿಗೂ ಅಂಬರೀಶ್​ ಸಹಾಯಹಸ್ತ ಚಾಚಿದ್ದರು.

2006-07ರಲ್ಲಿ ಟೀಮ್​ ಇಂಡಿಯಾ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯವನ್ನು ಆಡಿದಾಗ ನಡೆದ ಘಟನೆಯಿದು. ಧೋನಿಯ ಆಟಕ್ಕೆ ಕ್ಲೀನ್​ಬೋಲ್ಡ್​ ಆಗಿದ್ದ ಅಂಬರೀಶ್​​ಗೆ ಮಾಹಿ ಕುಟುಂಬದ ಬಡತನದ ಬಗ್ಗೆಯೂ ತಿಳಿದಿತ್ತು. ಹೀಗಾಗಿ ಹೇಗಾದ್ರೂ ಸಹಾಯ ಮಾಡಬೇಕು ಅನ್ನೋದು ಅಂಬರೀಶ್​ ತುಡಿತವಾಗಿತ್ತಂತೆ. ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಪಂದ್ಯದ ಬಳಿಕ ಧೋನಿಯನ್ನ ಭೇಟಿಯಾಗಿದ್ದ ಅಂಬಿ, 2 ಲಕ್ಷ ರೂಪಾಯಿಗಳ ಸಹಾಯಧನ ನೀಡಿ ಉದಾರತೆ ಮೆರೆದಿದದ್ದರು. ಈ ಸಂದರ್ಭದ ಫೋಟೋವನ್ನು ಇದೀಗ ಸುಮಲತಾ ಅಂಬರೀಷ್​ ಹಂಚಿಕೊಂಡಿದ್ದು ಘಟನೆಯನ್ನ ನೆನೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧೋನಿ ಸಂಕಷ್ಟದಲ್ಲಿ ಕೈಹಿಡಿದಿದ್ದರು ರೆಬಲ್ ಸ್ಟಾರ್; ಅಂಬಿಯ ‘ಕರ್ಣ ಗುಣ’ದ ಇಂಟರೆಸ್ಟಿಂಗ್ ಸಂಗತಿ..!

https://newsfirstlive.com/wp-content/uploads/2023/08/MS_DHONI.jpg

Load More