newsfirstkannada.com

ನಮ್ಮ ಮೆಟ್ರೋ 3ನೇ ಹಂತದ ಅನುಮೋದನೆಗೆ ಮನವಿ; ಕೇಂದ್ರ ಸಚಿವರ ಜೊತೆ ತೇಜಸ್ವಿ ಸೂರ್ಯ ಮಹತ್ವದ ಚರ್ಚೆ

Share :

19-08-2023

    ಜೆಪಿ ನಗರದ ವೇಗಾ ಸಿಟಿ ಜಂಕ್ಷನ್ ಮತ್ತು ಮಾಗಡಿ ರಸ್ತೆಯವರೆಗೆ

    32.15 ಕಿ.ಮೀನಲ್ಲಿ ಹೊಸಹಳ್ಳಿ ಮತ್ತು ಕಡಬಗೆರೆ ನಡುವೆ 9 ನಿಲ್ದಾಣ

    ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತವು ಜೆ.ಪಿ ನಗರದಿಂದ ಪ್ರಾರಂಭವಾಗಿ ಮಾಗಡಿ ರಸ್ತೆಯವರೆಗೆ ಸಾಗಲಿದ್ದು ಇದರ ಡಿಪಿಆರ್​ಗೆ ತ್ವರಿತವಾಗಿ ಅನುಮೋದನೆ ನೀಡುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್​ ಸಿಂಗ್​ ಪುರಿ ಅವರಿಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಂಸದ ಸೂರ್ಯ ತಮ್ಮ ಅಧಿಕೃತ ಎಕ್ಸ್​ ಅಕೌಂಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 3ನೇ ಹಂತದ ನಮ್ಮ ಮೆಟ್ರೋ ಕಾರ್ಯಚರಣೆ ಜೆ.ಪಿ ನಗರದಿಂದ ಮಾಗಡಿ ರಸ್ತೆಯವರೆಗೆ ನಡೆಯಲಿದೆ. ಇದು ನನ್ನ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೂಲಕ ಹಾದು ಹೋಗುತ್ತದೆ. ಮೆಟ್ರೋ ಕಾರ್ಯಾಚರಣೆ ವೇಳೆ ದಕ್ಷಿಣ ಕ್ಷೇತ್ರ ಗೇಮ್​ ಚೇಂಜರ್​ ಆಗಿರಲಿದೆ. ಹೀಗಾಗಿ 3ನೇ ಹಂತದ ಡಿಪಿಆರ್‌ಗೆ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ಸಚಿವರಿಗೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆಯು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸಿಲ್ಕ್​ ಬೋರ್ಡ್​ದಿಂದ ಏರ್​ಪೋರ್ಟ್ ಮೆಟ್ರೋ ಲೈನ್​ ಯೋಜನೆ ವೇಳೆಯು ಬೆಂಗಳೂರು ನಗರದ ಬಗ್ಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದೀರಿ. ನಗರದ ಬೆಳವಣಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸಚಿವರಿಗೆ ಧನ್ಯವಾದಗಳೆಂದು ಸಂಸದ ಸೂರ್ಯ ಹೇಳಿದ್ದಾರೆ.

ಇನ್ನು ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿಯವರು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಸಂಸದ ಸೂರ್ಯ ಅವರು ಭೇಟಿ ಮಾಡಿ ಮನವಿ ಮಾಡಿರುವ ಬಗ್ಗೆ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ ಸೂರ್ಯ ಜೊತೆ ಬೆಂಗಳೂರಿನ 3ನೇ ಹಂತದ ಮೆಟ್ರೋ ಕುರಿತು ಕಚೇರಿಯಲ್ಲಿ ಚರ್ಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮೆಟ್ರೋ 3ನೇ ಹಂತದ ಅನುಮೋದನೆಗೆ ಮನವಿ; ಕೇಂದ್ರ ಸಚಿವರ ಜೊತೆ ತೇಜಸ್ವಿ ಸೂರ್ಯ ಮಹತ್ವದ ಚರ್ಚೆ

https://newsfirstlive.com/wp-content/uploads/2023/08/TEJASWI_SURY.jpg

Load More