newsfirstkannada.com

ಫ್ಯೂಚರ್ ಹಾರ್ದಿಕ್​ ಪಾಂಡ್ಯ ಈತನೇ.. ಅರ್ಶಿನ್ ಬ್ಯಾಟಿಂಗ್​, ಬೌಲಿಂಗ್​ಗೆ CSK ಪ್ಲೇಯರ್ಸ್​ ಫಿದಾ..!

Share :

Published June 22, 2023 at 12:11pm

    ಸೆನ್ಸೇಷನ್ ಹುಟ್ಟಿ ಹಾಕಿದ 18 ವರ್ಷದ ಯಂಗ್ ಟ್ಯಾಲೆಂಟೆಡ್​

    ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಆಡುತ್ತಿರುವ ​ಅರ್ಶಿನ್

    ಈತನ ಬ್ಯಾಟಿಂಗ್​, ಬೌಲಿಂಗ್​ ಅಬ್ಬರಕ್ಕೆ ಎದುರಾಳಿ ಉಡೀಸ್​

ಇಂಡಿಯನ್ ಪ್ರೀಮಿಯರ್ ಲೀಗ್​​ ಮುಗಿದು ಬರೋಬ್ಬರಿ 22 ದಿನಗಳು ಮುಗಿದಿದೆ. ಆದ್ರೀಗ ಭಾರತದಲ್ಲಿ, ರಾಜ್ಯ ಪ್ರೀಮಿಯರ್​ ಲೀಗ್​ಗಳ ದರ್ಬಾರ್ ನಡೆಯುತ್ತಿದೆ. ಆದ್ರೆ ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಮತ್ತೊಬ್ಬ ಹಾರ್ದಿಕ್ ಪಾಂಡ್ಯ ಸಿಕ್ಕಿದ್ದಾನೆ. ಆ ಕ್ರಿಕೆಟರ್ ಯಾರು?.

ವಿಶ್ವದ ರಿಚೆಸ್ಟ್​ ಕ್ರಿಕೆಟ್​ ಲೀಗ್ ಮುಗಿದರು ಟಿ20 ಲೀಗ್​ ಇಂಪ್ಯಾಕ್ಟ್​ ಮಾತ್ರ ಭಾರತದಲ್ಲಿ ಹಾಗೇ ಉಳಿದಿದೆ. ರಾಜ್ಯವಾರು ಪ್ರೀಮಿಯರ್ ಲೀಗ್​ಗಳು ಜೋರಾಗಿ ನಡೆಯುತ್ತಿದ್ದು, ಯುವ ಪ್ರತಿಭೆಗಳ ಪ್ರತಿಭೆಯನ್ನ ಪರಿಚಯಿಸುತ್ತಿದೆ. ಆದ್ರೆ, ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿನ 18 ವರ್ಷದ ಯಂಗ್ ಟ್ಯಾಲೆಂಟೆಡ್​​​​​​​​​ ಸೆನ್ಸೇಷನ್ ಹುಟ್ಟಿ ಹಾಕಿದ್ದಾರೆ. ರಾತ್ರೋ ರಾತ್ರೋ ಸೆನ್ಸೇಷನ್ ಹುಟ್ಟಿಹಾಕಿದ ಆಟಗಾರನ ಹೆಸರೇ ಅರ್ಶಿನ್ ಕುಲಕರ್ಣಿ.

ಸದ್ಯ ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ನಾಸಿಕ್ ಟೈಟನ್ಸ್​ ಪರ ಆಡ್ತಿರೋ ಅರ್ಶಿನ್ ಕುಲಕರ್ಣಿ, ಆಲ್​ರೌಂಡರ್ ಶೋ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಈತನ ಅಬ್ಬರದ ಬ್ಯಾಟಿಂಗ್​ಗೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಅಷ್ಟೇ ಅಲ್ಲ, ಈತನ ಬ್ಯಾಟಿಂಗ್, ಬೌಲಿಂಗ್ ನೋಡಿದ ಫ್ಯಾನ್ಸ್​.. ಮುಂದಿನ ಹಾರ್ದಿಕ್ ಪಾಂಡ್ಯ ಅಂತಾನೇ ಬಿಂಬಿಸ್ತಿದ್ದಾರೆ. ಇದಕ್ಕೆ ಕಾರಣ ಈತನ ಪರ್ಫಾಮೆನ್ಸ್​.

ಸೆನ್ಸೇಷನ್ ಸೆಂಚೂರಿ ಸಿಡಿಸಿದ 18ರ ಪೋರ ಅರ್ಶಿನ್

ಮಹಾರಾಷ್ಟ್ರ ಪ್ರೀಮಿಯರ್ ಲೀಗ್​​ನ 7ನೇ ಮ್ಯಾಚ್​.. ಈ ಪಂದ್ಯದಲ್ಲಿ ಪುಣೇರಿ ಬಪ್ಪಾ ಹಾಗೂ ನಾಸಿಕ್ ಟೈಟನ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ನಾಸಿಕ್ ಟೈಟನ್ಸ್ ಪರ ನಿಜಕ್ಕೂ 18 ವರ್ಷದ ಅರ್ಶಿನ್ ರೌದ್ರವತಾರ ಪ್ರದರ್ಶಿಸಿದ. ಸಿಕ್ಕ ಸಿಕ್ಕ ಬೌಲರ್​ಗಳನ್ನ ಚೆಂಡಾಡಿದ ಅರ್ಶಿನ್​ ಕೇವಲ 46 ಎಸೆತಗಳಲ್ಲೇ ಸೆಂಚೂರಿ ಪೂರ್ಣಗೊಳಿಸಿದ. 54 ಎಸೆತಗಳಲ್ಲಿ 117 ರನ್ ಕಲೆ ಹಾಕಿದರು. ಈತನ ಸಿಡಿಲಬ್ಬರ ಶತಕದಲ್ಲಿ ಸಿಡಿದಿದ್ದು ಬರೋಬ್ಬರಿ 13 ಸಿಕ್ಸರ್​​ಗಳು.

ಇದರೊಂದಿಗೆ ಈಗಲ್ ಟೈಟನ್ಸ್ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 203 ರನ್​ಗಳ ಬೃಹತ್​ ಮೊತ್ತ ಕಲೆಹಾಕಿಕ್ತು. ಆದ್ರೆ, ಈ ಮೊತ್ತ ಬೆನ್ನತ್ತಿದ್ದ ರುತುರಾಜ್ ಗಾಯಕ್ವಾಡ್ ನೇತೃತ್ವದ ಪುಣೇರಿ ಬಪ್ಪಾ ತಂಡ ಸುಲಭ ಗೆಲುವಿನ ಲೆಕ್ಕಚಾರದಲ್ಲಿತ್ತು. ಆದ್ರೆ, ಆ ಗೆಲುವಿನ ತಣ್ಣೀರು ಎರಚಿದ್ದು ಅರ್ಶಿನ್.

20ನೇ ಓವರ್​ನಲ್ಲಿ ಕುಲಕರ್ಣಿ ಮ್ಯಾಜಿಕ್..!

ಬ್ಯಾಟಿಂಗ್​ನಲ್ಲಿ ಮಾತ್ರವೇ ಅಲ್ಲ. ಬೌಲಿಂಗ್​ನಲ್ಲೂ ಅರ್ಶಿನ್ ಮ್ಯಾಜಿಕ್ ಮಾಡಿದ್ದರು. 4 ಓವರ್​ಗಳ ಕೋಟಾದಲ್ಲಿ 21 ರನ್ ನೀಡಿ 4 ವಿಕೆಟ್ ಉರುಳಿಸಿದ ಅರ್ಶಿನ್, ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೇ ವಹಿಸಿದ್ದರು. ಅದರಲ್ಲೂ ಅರ್ಶಿನ್ ಎಸೆದ ಕೊನೆ ಓವರ್ ಮಾತ್ರ, ನಿಜಕ್ಕೂ ಸೆನ್ಸೇಷನ್​.

ಅಂತಿಮ ಓವರ್​​ನಲ್ಲಿ ಪುಣೆ ತಂಡದ ಗೆಲುವಿಗೆ 6 ರನ್​​ ಬೇಕಾಗಿತ್ತು. ಈ ವೇಳೆ ಬೌಲಿಂಗ್ ಮಾಡಿದ ಅರ್ಶಿನ್, 20ನೇ ಓವರ್​ನಲ್ಲಿ ಜಸ್ಟ್​ 4 ರನ್ ಬಿಟ್ಟುಕೊಟ್ಟು 2 ಮಹತ್ವದ ವಿಕೆಟ್ ಉರುಳಿಸಿ ಎಲ್ಲರ ಗಮನ ಸೆಳೆದರು. ಈತನ ಮ್ಯಾಜಿಕಲ್ ಬೌಲಿಂಗ್ ನೆರವಿನಿಂದ ನಾಸಿಕ್ ಟೈಟನ್ಸ್​ 1 ರನ್​ ಗೆಲುವು ದಾಖಲಿಸಿತು.

ಅರ್ಶಿನ್ ಸೆನ್ಸೇಷನ್​ ಆಟಕ್ಕೆ ಸಿಎಸ್​ಕೆ ಆಟಗಾರರು ಫಿದಾ..!

ಅರ್ಶಿನ್​ ಆಲ್​ರೌಂಡರ್ ಆಟಕ್ಕೆ ಕ್ರಿಕೆಟ್​​​​​​​​​​​​ ಜಗತ್ತು ಆಕ್ಷರಶಃ ನಿಬ್ಬೆರಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈತನ ಆಟವೇ ಟ್ರೆಂಡಿಂಗ್​ನಲ್ಲಿತ್ತು. ಅಷ್ಟೇ ಅಲ್ಲ, ಈತನ ಆಟಕ್ಕೆ ಮನಸೋತ ನಾಲ್ವರು ಸಿಎಸ್​ಕೆ ಆಟಗಾರರು ಇನ್ಸ್​ಟಾದಲ್ಲಿ ಫಾಲೋ ಮಾಡಿದ್ದಾರೆ. ಆ ಆಟಗಾರರೇ ಶೈಕ್​​ ರಶೀದ್, ನಿಶಾಂತ್ ಸಿಂಧು, ರಾಜವರ್ಧನ್ ಹಂಗರ್ಗೇಕರ್, ಪ್ರಶಾಂತ್ ಸೋಲಂಕಿ. ಇವರ ಆಟವನ್ನ ನೋಡಿದ ಫ್ಯಾನ್ಸ್​ ಕೂಡ ನೆಕ್ಸ್ಟ್​ ಹಾರ್ದಿಕ್ ಪಾಂಡ್ಯ ಅಂತ ಕೊಂಡಾಡ್ತಿದ್ದಾರೆ.

ವಿನೂ ಮಂಕಡ್​​​​ ಟೂರ್ನಿಯಲ್ಲೂ ಅರ್ಶಿನ್ ಅಬ್ಬರ..!

ಸದ್ಯ ನಡೆಯುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಅಲ್ಲ. 2022-23ರ ವಿನೂ ಮಂಕಡ್​​​​ ಟೂರ್ನಿಯಲ್ಲೂ ಅರ್ಶಿನ್ ಕುಲಕರ್ಣಿ ಕಮಾಲ್ ಮಾಡಿದ್ದರು. ಲೀಡಿಂಗ್ ಸ್ಕೋರರ್ ಆಗಿ ಗಮನ ಸೆಳೆದಿದ್ದರು.

2022-23ರ ವಿನೂ ಮಂಕಡ್​​​​ ಟೂರ್ನಿಯಲ್ಲಿ ಅರ್ಶಿನ್

2022-23ರ ವಿನೂ ಮಂಕಡ್​​​​ ಟೂರ್ನಿಯ 4 ಪಂದ್ಯಗಳಿಂದ 268 ರನ್ ಸಿಡಿಸಿದ್ದ ಅರ್ಶಿನ್ ಕುಲಕರ್ಣಿ, 67ರ ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ದರು. 4 ಪಂದ್ಯಗಳಿಂದ 2 ಶತಕ ದಾಖಲಿಸಿ ಟೂರ್ನಿಯಲ್ಲಿ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ.

ಇಂಥಹ ಅದ್ಭುತ ಆಟದಿಂದಲೇ ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ಗೆ ಎಂಟ್ರಿಕೊಟ್ಟ ಈ ಯಂಗ್ ಟ್ಯಾಲೆಂಟ್, ಈಗ ಸಿಕ್ಕ ಅವಕಾಶದಲ್ಲಿ ಅಬ್ಬರಿಸಿ ಬೊಬ್ಬೆರೆದು ಭವಿಷ್ಯದ ಪ್ರತಿಭೆಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಎಲೆ ಮರಿಕಾಯಿಯಂತಿದ್ದ ಈ ಅರ್ಶಿನ್, ಈಗ ಸೆಂಚುರಿಯೊಂದಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಫ್ಯುಚರ್ ಹಾರ್ದಿಕ್ ಅಂತಾನೇ ಕರೆಸಿಕೊಳ್ಳುತ್ತಿರುವ ಈತ, ಮುಂದೊಂದು ದಿನ ಐಪಿಎಲ್, ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫ್ಯೂಚರ್ ಹಾರ್ದಿಕ್​ ಪಾಂಡ್ಯ ಈತನೇ.. ಅರ್ಶಿನ್ ಬ್ಯಾಟಿಂಗ್​, ಬೌಲಿಂಗ್​ಗೆ CSK ಪ್ಲೇಯರ್ಸ್​ ಫಿದಾ..!

https://newsfirstlive.com/wp-content/uploads/2023/06/ARSHIN_MPL_1.jpg

Load More