newsfirstkannada.com

ಒಂದು ಷೇರಿನ ಬೆಲೆ ಒಂದು ಲಕ್ಷ ರೂಪಾಯಿ; ಷೇರುಪೇಟೆ ಇತಿಹಾಸದಲ್ಲಿ MRF ಹೊಸ ದಾಖಲೆ

Share :

13-06-2023

    ಷೇರು ಮಾರುಕಟ್ಟೆಯಲ್ಲಿ ಮದ್ರಾಸ್ ರಬ್ಬರ್ ಫ್ಯಾಕ್ಟರಿ ಹೊಸ ದಾಖಲೆ

    MRF ಭಾರತದಲ್ಲೇ ಅತ್ಯಂತ ದುಬಾರಿ ಷೇರು ಹೊಂದಿರುವ ಕಂಪನಿ

    ಸಚಿನ್, ವಿರಾಟ್‌ ಕೊಹ್ಲಿ ಬ್ಯಾಟ್‌ ಮೇಲೆ ಮಿಂಚುತ್ತಿದ್ದ ಬ್ರ್ಯಾಂಡ್

ಮುಂಬೈ: ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ MRF ಟೈರ್ ಕಂಪನಿ ಹೊಸ ದಾಖಲೆ ಬರೆದಿದೆ. MRF ಕಂಪನಿಯ ಒಂದು ಷೇರಿನ ಬೆಲೆ ಒಂದು ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಷೇರಿನ ಬೆಲೆ ಹೆಚ್ಚಿಸಿಕೊಂಡ ಮೊದಲ ಭಾರತದ ಕಂಪನಿ ಅನ್ನೋ ಹೆಗ್ಗಳಿಕೆಗೆ MRF ಪಾತ್ರವಾಗಿದೆ.

ಇವತ್ತು ದೇಶದ ದಲಾಲ್‌ ಸ್ಟ್ರೀಟ್‌ನಲ್ಲಿ ಇತಿಹಾಸವೇ ಸೃಷ್ಟಿಯಾಗಿದೆ. ಒಂದು ಷೇರಿನ ಬೆಲೆ ಒಂದು ಲಕ್ಷ ರೂಪಾಯಿ. ಹೌದು.. ಮದ್ರಾಸ್ ರಬ್ಬರ್ ಫ್ಯಾಕ್ಟರಿಯ ಷೇರುಗಳು ಷೇರುಪೇಟೆಯ ದರ 1 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಇದು ಭಾರತದಲ್ಲೇ ಅತ್ಯಂತ ದುಬಾರಿ ಷೇರು ಎನಿಸಿಕೊಂಡಿದೆ. 1 ಲಕ್ಷ ರೂಪಾಯಿಗೆ ಒಂದು ಷೇರಿನ ಬೆಲೆ ಏರಿಸಿಕೊಂಡ ಭಾರತದ ಮೊದಲ ಕಂಪನಿ MRF ಟೈರ್ ಕಂಪನಿ ಆಗಿದೆ.

ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡ MRF ಟೈರ್ ಕಂಪನಿ ಷೇರಿನ ಬೆಲೆ 1 ಲಕ್ಷಕ್ಕೆ ಏರಿಕೆಯಾಗಿರೋದು ಇಡೀ ದೇಶದ ಗಮನ ಸೆಳೆದಿದೆ. 2020ರ ಮಾರ್ಚ್ ಕೊರೊನಾದ ಬಳಿಕ MRF ಶೇ.92ರಷ್ಟು ಬೆಳವಣಿಗೆ ಕಂಡಿದೆ. MRF ಟೈರ್ ಕಂಪನಿ ಸಾಕಷ್ಟು ಸವಾಲುಗಳನ್ನ ಎದುರಿಸಿ ಈ ಸಾಧನೆ ಮಾಡಿದೆ. ಸದ್ಯ MRF ಟೈರ್ ಕಂಪನಿ 42,411 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

MRF ಅಂದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಥಟ್ ಅಂತಾ ನೆನಪಾಗೋದು ಸಚಿನ್ ತೆಂಡೂಲ್ಕರ್ ಬ್ಯಾಟ್‌. ಸಚಿನ್ ಬ್ಯಾಟ್‌ ಮೇಲೆ ಹಲವಾರು ವರ್ಷಗಳ ಕಾಲ MRF ರಾರಾಜಿಸಿತ್ತು. ಇದೀಗ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ MRFನ ರಾಯಭಾರಿಯಾಗಿದ್ದಾರೆ. ಜನಮಾನಸದಲ್ಲಿ ಪರಿಚಿತವಾಗಿರುವ MRF ಟೈರ್ ಕಂಪನಿಯ ಷೇರಿನ ಬೆಲೆ ಇವತ್ತು ಸಾರ್ವಕಾಲಿಕ ದಾಖಲೆ ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಒಂದು ಷೇರಿನ ಬೆಲೆ ಒಂದು ಲಕ್ಷ ರೂಪಾಯಿ; ಷೇರುಪೇಟೆ ಇತಿಹಾಸದಲ್ಲಿ MRF ಹೊಸ ದಾಖಲೆ

https://newsfirstlive.com/wp-content/uploads/2023/06/MRF.jpg

Load More