/newsfirstlive-kannada/media/post_attachments/wp-content/uploads/2024/09/MS_DHONI_LOSS.jpg)
ಎಂ.ಎಸ್.ಧೋನಿ ಐಪಿಎಲ್-2025ರಲ್ಲಿ ಆಡುವ ಬಗ್ಗೆ ಅನುಮಾನವಿತ್ತು. ಇದೀಗ ಅವರೇ ಕ್ರಿಕೆಟ್ ಆಡಬೇಕೋ ಬೇಡವೋ ಎಂಬ ವಿಷಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ನಾನು ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್ ಆನಂದಿಸಲು ಬಯಸುತ್ತೇನೆ ಎಂದಿದ್ದಾರೆ.
ಈ ಆಟವನ್ನು ಇನ್ನಷ್ಟು ವರ್ಷಗಳವರೆಗೆ ಆನಂದಿಸಲು ಬಯಸುತ್ತೇನೆ ಎಂದಿರೋದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಧೋನಿ ಆಡಲು ಸಿದ್ಧರಾಗಿರಬೇಕು, ಇದಕ್ಕಿಂತ ಹೆಚ್ಚೇನೂ ಬಯಸುವುದಿಲ್ಲ ಎಂದು ಇತ್ತೀಚೆಗೆ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದರು.
ಇನ್ನು ಕೆಲವು ವರ್ಷಗಳು..
ನಾನು ಕ್ರಿಕೆಟ್‌ಗೆ ಭಾವನಾತ್ಮಕವಾಗಿದ್ದೇನೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಇನ್ನಷ್ಟು ವರ್ಷಗಳವರೆಗೆ ಆಟವನ್ನು ಆನಂದಿಸಲು ಬಯಸುತ್ತೇನೆ. ಐಪಿಎಲ್ ನಡೆಯುವ ಅವಧಿ 2 ತಿಂಗಳ. ಅದಕ್ಕಾಗಿ ನಾನು 9 ತಿಂಗಳು ಫಿಟ್ನೆಸ್ ಕಾಪಾಡಿಕೊಳ್ಳಬೇಕು. ಅದೇ ಸಮಯದಲ್ಲಿ ಎಲ್ಲವನ್ನೂ ಆನಂದಿಸುವುದು ಕೂಡ ಮುಖ್ಯ ಎಂದು ಧೋನಿ ಹೇಳಿದ್ದಾರೆ. ಧೋನಿಯ ಈ ಮಾತು, ಐಪಿಎಲ್​​ನಲ್ಲಿ ಬ್ಯಾಟ್ ಬೀಸುತ್ತಾರೆ ಎಂದರ್ಥವಲ್ಲ. ಇವತ್ತು ಅಥವಾ ನಾಳೆ ವೇಳೆಗೆ ಧೋನಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಇದನ್ನೂ ಓದಿ:ನಿಮ್ಮ ಪಾದದ ಈ 7 ಗುಣಲಕ್ಷಣಗಳು ನಿಮ್ಮ ಅನಾರೋಗ್ಯದ ಬಗ್ಗೆ ಎಚ್ಚರಿಕೆ ನೀಡುತ್ತವೆ! ಯಾವುವು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us