newsfirstkannada.com

ಪತ್ನಿ ಮೇಲೆ ಕೋಪ ಮಾಡಿಕೊಂಡ್ರಾ ಧೋನಿ.. ಫಾರಿನ್ ಟ್ರಿಪ್​ಗೆ ಹೋದ್ರೂ ತಪ್ಪುತ್ತಿಲ್ಲ ಆಭಿಮಾನಿಗಳ ಅಭಿಮಾನ

Share :

Published June 13, 2024 at 11:35am

  ಧೋನಿಗೆ ಕ್ರಿಕೆಟ್​ ಮಾತ್ರವಲ್ಲ, ಫ್ಯಾಮಿಲಿ ಕೂಡ ಇಂಪಾರ್ಟೆಂಟ್

  ಧೋನಿ ಸಿಟ್ಟಾದ್ರೆ ಉಗ್ರವಾತಾರ ನಿಜಕ್ಕೂ ಭಯಾನಕ ಆಗಿರುತ್ತದೆ

  ಪತ್ನಿ ಸಾಕ್ಷಿ ಮೇಲೆ ಮಹೇಂದ್ರ ಸಿಂಗ್ ಧೋನಿ ಸಿಟ್ಟಾಗುವುದೇಕೆ?

ಟಿ20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ ಬ್ಯುಸಿಯಾಗಿದೆ. ಚುಟುಕು ಕಿರೀಟ ಯಾರ ಪಾಲಾಗುತ್ತೆ ಎಂಬ ಕ್ಯೂರಿಯಾಸಿಟಿ ದಿನೇ ದಿನೇ ಹೆಚ್ಚಾಗ್ತಿದೆ. ಇದ್ರ ನಡುವೆ ಮಿಸ್ಟರ್​ ಕೂಲ್ ಮಾಹಿ ಸಖತ್​ ಟ್ರೆಂಡಿಂಗ್​ನಲ್ಲಿದ್ದಾರೆ. ಬ್ರೇಕ್​ ಟೈಮ್​ನ ಎಂಜಾಯ್​ ಮಾಡ್ತಿರೋ ಮಾಹಿ, ಫ್ಯಾಮಿಲಿಗೆ ಫುಲ್​ ಟೈಮ್​ ಕೊಡ್ತಿದ್ದಾರೆ. ಬಿಂದಾಸ್ ಆಗಿ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ. ವಿಕೆಟ್ ಹಿಂದೆ ನಿಂತು ಎದುರಾಳಿಯ ದಿಕ್ಕು ತಪ್ಪಿಸುವ ಚಾಣಾಕ್ಷ. ಮಿಸ್ಟರ್​ ಪರ್ಫೆಕ್ಟ್​ ಕ್ಯಾಪ್ಟನ್ ಎಂತೆಲ್ಲ ಕರೆಸಿಕೊಳ್ಳುವ ಮಾಹಿ, ಆನ್​ಫೀಲ್ಡ್​ನಲ್ಲಿ ಮಾತ್ರವಲ್ಲ. ಆಫ್​ ದಿ ಫೀಲ್ಡ್​ನಲ್ಲೂ ಪರ್ಫೆಕ್ಟ್​ ಜಂಟಲ್​ಮನ್​. ಕೂಲ್ & ಕಾಮ್​ ಅಟಿಟ್ಯೂಡ್​​ನಿಂದಲೇ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನ ಸಂಪಾದಿಸಿರುವ ಮಾಹಿ, ರಿಯಲ್ ಜಂಟಲ್​ ಮನ್​. ಆನ್​ಫೀಲ್ಡ್​ನ ಆಟದ ಹೊರತಾಗಿ ಆಫ್​ ದ ಫೀಲ್ಡ್​ನಲ್ಲೂ ಮಾದರಿ ನಡೆಯ ಮೂಲಕ ಗಮನಸೆಳೆದಿದ್ದಾರೆ. ಫ್ಯಾನ್ಸ್​ ಜೊತೆಗಿನ ಒಡನಾಟದ ಹೊರತಾಗಿ ​ಪಕ್ಕಾ ಫ್ಯಾಮಿಲಿಮ್ಯಾ​ನ್​​ ಅನ್ನೋದನ್ನೂ ಆಗಾಗ ನಿರೂಪಿಸಿದ್ದಾರೆ.

ಇದನ್ನೂ ಓದಿ: ಅಪಾರ್ಟ್​​ಮೆಂಟ್​ನಲ್ಲಿ ಭೀಕರ ಅಗ್ನಿ.. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯರು ಸಜೀವ ದಹನ

ಫ್ಯಾರಿಸ್​ನಲ್ಲಿ ಫ್ಯಾಮಿಲಿ ಜೊತೆ ಫ್ಯಾಮಿಲಿಮ್ಯಾನ್ ಮಾಹಿ​..!

ಐಪಿಎಲ್​ ಸೀಸನ್​​-17ರಲ್ಲಿ ಅಭಿಮಾನಿಗಳನ್ನ ರಂಜಿಸಿದ್ದ ಮಾಹಿ, ಈಗ ಕಂಪ್ಲೀಟ್ ಬದಲಾಗಿದ್ದಾರೆ. ಕ್ರಿಕೆಟ್​ನಿಂದ ಸಂಪೂರ್ಣ ದೂರ ಉಳಿದಿರುವ ಧೋನಿ, ಆಫ್​​ ದಿ ಫೀಲ್ಡ್​ನಲ್ಲಿ ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಜಂಟಲ್​ಮನ್ ಮಾಹಿ, ಈಗ ಮಡದಿ ಸಾಕ್ಷಿ​ ಹಾಗೂ ಪುತ್ರಿ ಝೀವಾ ಜೊತೆಗೆ ಬಿಂದಾಸ್ ಆಗಿ ಟೈಮ್ ಸ್ಪೆಂಡ್​ ಮಾಡ್ತಿದ್ದಾರೆ.

ಐಪಿಎಲ್​ ಬಳಿಕ ಅಂಬಾನಿ ಮಗನ 2ನೇ ಪ್ರೀ ವೆಡ್ಡಿಂಗ್​ ಇವೆಂಟ್​​​​ಗಾಗಿ ಇಟಲಿಗೆ ಹಾರಿದ್ದ ಧೋನಿ, ಪತ್ನಿ ಸಾಕ್ಷಿ ಹಾಗೂ ಮಗಳು ಝೀವಾ ಜೊತೆ ಕಾಲಕಳೆದಿದ್ರು. ಇಟಲಿಯ ಸಣ್ಣ ಸಣ್ಣ ಸ್ಟ್ರೀಟ್​​ಗಳಲ್ಲಿ ಸುತ್ತಾಡಿ ಗಮನ ಸೆಳೆದಿದ್ರು. ಇದೀಗ ಇಟಲಿ ಪ್ರವಾಸ ಮುಗಿಸಿರುವ ಮಾಹಿ ಕುಟುಂಬ, ಫ್ಯಾರಿಸ್​​ನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಐಫೆಲ್ ಟವರ್ ಬಳಿ ಕುಟುಂಬದ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳಂತೂ ಕಣ್ಮನ ಸೆಳೆಯುತ್ತಿದೆ.

ವಿದೇಶದಲ್ಲೂ ಧೋನಿಗೆ ತಪ್ಪಿಲ್ಲ ಫ್ಯಾನ್ಸ್ ಕಾಟ..!

ಧೋನಿ ಏನೋ ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮಾಡ್ತಿದ್ದಾರೆ. ಆದ್ರೆ, ಈ ವಿದೇಶದಲ್ಲೂ ಅಭಿಮಾನಿಗಳ ಕಾಟ ತಪ್ಪಿದಿಲ್ಲ. ಮಿಸ್ಟರ್​ ಕೂಲ್​​​ ಜೊತೆ ಸೆಲ್ಫಿಗಾಗಿ ಮುಗಿಬೀಳ್ತಿರುವ ಫ್ಯಾನ್ಸ್​, ಧೋನಿಯ ಆಶೀರ್ವಾದ ಪಡೆಯುತ್ತಿದ್ದಾರೆ. ಸದ್ಯ ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗ್ತಿವೆ.

ಫ್ರೀ ಟೈಮ್​ನಲ್ಲಿ ಫ್ಯಾಮಿಲಿ ಜೊತೆ ಮಿಸ್ ಆಗಲ್ಲ ಟ್ರಿಪ್​..!

ಧೋನಿ ಕ್ರಿಕೆಟ್​​ಗೆ ಎಷ್ಟು ಇಂಪಾರ್ಟೆಂಟ್​ ಕೊಡ್ತಾರೆ ಎಲ್ಲರಿಗೂ ಗೊತ್ತೇ ಇದೆ. ಟೀಮ್ ಇಂಡಿಯಾ ನಾಯಕನಾಗಿದ್ದಾಗ ರಾಷ್ಟ್ರೀಯ ಸೇವೆಯ ಫಸ್ಟ್ ಎಂದಿದ್ದ ಮಾಹಿ, ನಂತರವೇ ಫ್ಯಾಮಿಲಿಗೆ ಪ್ರಿಫರೆನ್ಸ್​ ನೀಡಿದ್ದಿದೆ. ಮಗಳು ಝೀವಾ ಹುಟ್ಟಿದಾಗಲೂ ಕೂಡ ತಂಡವನ್ನ ಬಿಟ್ಟು, ಮಗಳನ್ನ ನೋಡಲು ಮಾಹಿ ಬರಲಿಲ್ಲ. ಇಂತಾ ಧೋನಿ, ಬ್ರೇಕ್​ ಸಿಕ್ಕಾಗ ಫ್ಯಾಮಿಲಿಗೆ ಟೈಮ್ ನೀಡೋದನ್ನ ಮಿಸ್ ಮಾಡಿಲ್ಲ. ಆಗ ಸದಾ ದೇಶವೇ ಫಸ್ಟ್​ ಅಂತಿದ್ದ ಧೋನಿ, ನಿವೃತ್ತಿಯ ಬಳಿಕ ಫ್ಯಾಮಿಲಿಗೆ ಹೆಚ್ಚು ಸಮಯ ನೀಡ್ತಿದ್ದಾರೆ. ಟೈಮ್ ಸಿಕ್ಕರೆ ಸಾಕು, ಫ್ಯಾಮಿಲಿ ಜೊತೆ ಟೈಮ್​ ಸ್ಪೆಂಡ್​​ ಮಾಡ್ತಿದ್ದಾರೆ. ಐಪಿಎಲ್​ ಟೈಮ್​ ಬಿಟ್ಟು, ವರ್ಷಪೂರ್ತಿ ಒಂದಿಲ್ಲೊಂದು ಪ್ರವಾಸದಲ್ಲಿ ಫ್ಯಾಮಿಲಿ ಜೊತೆ ಬ್ಯುಸಿಯಾಗಿರ್ತಾರೆ.

ಇದನ್ನೂ ಓದಿ:IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

ಸಾಕ್ಷಿಗೆ ಧೋನಿನೇ ಸರ್ವಸ್ವ.. ಧೋನಿಗೆ ಸಾಕ್ಷಿಯೇ ಪ್ರಪಂಚ..!

ಮಹೇಂದ್ರ ಸಿಂಗ್ ಧೋನಿ, ಶಾಂತ ಸ್ವಭಾವದವರು. ಅಕಸ್ಮಾತ್​ ಸಿಟ್ಟಾದ್ರೆ, ಧೋನಿಯ ಉಗ್ರವಾತಾರ ನಿಜಕ್ಕೂ ಭಯನಕ. ಆನ್​ಫೀಲ್ಡ್​ನಲ್ಲಿ ಒಂದೆರೆಡು ಬಾರಿ ಕೋಪತಾಪ ತೋರಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಅತಿ ಹೆಚ್ಚು ಬಾರಿ ಧೋನಿ ಸಿಟ್ಟಿಗೆ ಗುರಿಯಾಗಿರುವುದು ಮಾತ್ರ, ಪತ್ನಿ ಸಾಕ್ಷಿಯೇ ಆಗಿದ್ದಾರೆ. ಇದನ್ನ ಸ್ವತಃ ಧೋನಿಯೇ ಹೇಳಿಕೊಂಡಿದ್ದಿದೆ. ಅಷ್ಟೇ ಅಲ್ಲ.! ಪತ್ನಿ ಸಾಕ್ಷಿಗೂ ಮಾಹಿಯೇ ಸರ್ವಸ್ವ.

ಕ್ರಿಕೆಟ್​​ನಲ್ಲಿ ಪರ್ಫೆಕ್ಟ್​ ಕ್ಯಾಪ್ಟನ್, ಲೀಡರ್ ಎನಿಸಿಕೊಂಡಿರುವ ಮಾಹಿ, ಆಫ್​ ದಿ ಫೀಲ್ಡ್​ನ ನಡೆಗಳೂ ಕೂಡ ಅನುಕರಣೀಯ. ಪತ್ನಿಗೆ ಒಳ್ಳೆ ಗಂಡನಾಗಿ, ಪುತ್ರಿಗೆ ಹೀರೋ ಆಗಿ, ಫ್ಯಾನ್ಸ್​ ಪಾಲಿಗೆ ಮಾದರಿ ವ್ಯಕ್ತಿಯಾಗಿರೋ ಮಾಹಿ, ನಿಜಕ್ಕೂ ಆದರ್ಶ ವ್ಯಕ್ತಿ ಅಂದ್ರೆ ತಪ್ಪಾಗಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪತ್ನಿ ಮೇಲೆ ಕೋಪ ಮಾಡಿಕೊಂಡ್ರಾ ಧೋನಿ.. ಫಾರಿನ್ ಟ್ರಿಪ್​ಗೆ ಹೋದ್ರೂ ತಪ್ಪುತ್ತಿಲ್ಲ ಆಭಿಮಾನಿಗಳ ಅಭಿಮಾನ

https://newsfirstlive.com/wp-content/uploads/2024/06/DHONI_FAMILY-1.jpg

Load More