ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಕೋಚ್ ಇಟ್ಟ ನಿಕ್ ನೇಮ್
ಧೋನಿ ಕರೆದ್ರೆ ಸುಮ್ಮನಿರ್ತಾರೆ, ಬೇರೆಯವರು ಕರೆದ್ರೆ ಫುಲ್ ಗರಂ
ಆ ನಿಕ್ ನೇಮ್ ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿ ಈಗ ವೈರಲ್..!
ಟೀಮ್ ಇಂಡಿಯಾ ಬ್ಯಾಟ್ಸ್ಮನ್, ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಚೀಕು ಎಂಬ ನಿಕ್ ನೇಮ್ ಬಂದಿದ್ದೇಗೆ ಎನ್ನುವುದೇ ಇವತ್ತಿನ ಸಖತ್ ಸ್ಟೋರಿಯ ಎಳೆ.
ಕಿಂಗ್ ಕೊಹ್ಲಿ, ರನ್ಮಷೀನ್, ಚೇಸ್ ಮಾಸ್ಟರ್, ಡೆಲ್ಲಿ ಡ್ಯಾಶರ್… ಒಂದಾ..? ಎರಡಾ.? ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನ ಕ್ರಿಕೆಟ್ ಜಗತ್ತು ಹಲವು ಹೆಸರಿಂದ ಕರೆಯುತ್ತೆ. ಆದ್ರೆ, ಇವೆಲ್ಲವುಕ್ಕಿಂತ ವಿರಾಟ್ ಕೊಹ್ಲಿಗೆ ಆಪ್ತವಾದ ಒಂದು ಹೆಸರಿದೆ. ಅದೇ ಚೀಕು. ಧೋನಿ ಟೀಮ್ ಇಂಡಿಯಾದಲ್ಲಿ ಕೊಹ್ಲಿಯನ್ನ ಚೀಕು ಎಂದೇ ಕರೆಯುತ್ತಿದ್ದರು. ಧೋನಿ ಕರೆಯುತ್ತಿದ್ದ ಹೆಸರು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆದ ಮೇಲೆ ಈ ಹೆಸರು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅಸಲಿಗೆ ವಿರಾಟ್ ಕೊಹ್ಲಿಗೆ ಈ ಹೆಸರನ್ನ ಇಟ್ಟಿದ್ದು ಯಾರು?.
ವಿರಾಟ್ ಕೊಹ್ಲಿಯ ಕರಿಯರ್ ಆರಂಭದ ದಿನಗಳಲ್ಲಿ ಅಜಿತ್ ಚೌಧರಿ ದೆಹಲಿ ರಣಜಿ ತಂಡಕ್ಕೆ ಕೋಚ್ ಆಗಿದ್ರು. ಆಗ ಹೊಸದಾಗಿ ತಂಡಕ್ಕೆ ಎಂಟ್ರಿ ಕೊಟ್ಟ ವಿರಾಟ್ ಕೊಹ್ಲಿ ನೋಡೋಕೆ ಛಬ್ಬಿ ಛಬ್ಬಿಯಾಗಿ, ಡಿಫರೆಂಟ್ ಹೇರ್ಸ್ಟೈಲ್ ಒಳ್ಳೆಯ ಲುಕ್ನಲ್ಲಿದ್ದರು. ಇದನ್ನ ಗಮನಿಸಿದ ಚೌಧರಿ, ಕೊಹ್ಲಿಗೆ ಚೀಕು ಎಂದು ಕರೆಯಲು ಶುರು ಮಾಡಿದ್ರಂತೆ. ಈಗ ಅಭಿಮಾನಿಗಳು ಕೊಹ್ಲಿಯನ್ನ ಹಾಗೇ ಕರೆಯೋಕೆ ಶುರುವಿಟ್ಟುಕೊಂಡಿದ್ದು, ಇದು ಕೊಹ್ಲಿಯನ್ನ ಕೆರಳಿಸಿದೆ. ಹಲವು ಬಾರಿ ಫ್ಯಾನ್ಸ್ ಹಾಗೇ ಕರೆದಾಗ ಕೊಹ್ಲಿ ತನ್ನ ಕೋಪವನ್ನು ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ