newsfirstkannada.com

IPL ನಿವೃತ್ತಿ ಬಗ್ಗೆ ಭಾವನಾತ್ಮಕವಾಗಿ ಮಾತಾಡಿದ ಮಹೇಂದ್ರ ಸಿಂಗ್ ಧೋನಿ..! Video

Share :

30-05-2023

    ಸಿಎಸ್​​ಕೆಗೆ ಐದು IPL ಟ್ರೋಫಿ ತಂದ್ಕೊಟ್ಟ ಹೆಗ್ಗಳಿಕೆ ಧೋನಿಯದ್ದಾಗಿದೆ

    ಜನರ ಬೆಲೆಕಟ್ಟಲಾಗದ ಪ್ರೀತಿಗೆ ಭಾವುಕರಾಗಿ ಮಾತಾಡಿದ ತಲಾ

    ಪೆವಿಲಿಯನ್​ನಲ್ಲಿ ಕೂತಿದ್ದಾಗ ಕಣ್ಣುಗಳಲ್ಲಿ ನೀರು ಬರುತ್ತೆ ಎಂದ MSD

ಕೊನೆಗೂ ಎಂಎಸ್ ಧೋನಿ, ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಮತ್ತೊಂದು ಐಪಿಎಲ್​ ಕಿರೀಟವನ್ನು ತಂದುಕೊಟ್ಟಿದ್ದಾರೆ. ಧೋನಿ ಕಪ್ ಎತ್ತುತ್ತಿದ್ದಂತೆಯೇ ಸಿಎಸ್​ಕೆ ಅಭಿಮಾನಿಗಳು ದಿಲ್ ಖುಷ್ ಆಗಿದ್ದು, ದೇಶದ ತುಂಬೆಲ್ಲ ಇರುವ ಅಭಿಮಾನಿಗಳು ಸಂಭ್ರಮದಲ್ಲಿ ಮುಳುಗಿದ್ದಾರೆ.

ಅಭಿಮಾನಿಗಳ ದಿಲ್ ಖುಷ್
ಐಪಿಎಲ್​ 2023 ಟೋಫಿಯನ್ನು ತನ್ನದಾಗಿಸಿಕೊಳ್ತಿದ್ದಂತೆ, CSK ಅಭಿಮಾನಿಗಳಿಗೆ ಪ್ರಶ್ನೆಯೊಂದು ಕಾಡಿತ್ತು. ಅದು ಏನಂದರೆ, ಕಪ್ ಗೆದ್ದ ಖುಷಿಯಲ್ಲೇ ಧೋನಿ ಐಪಿಎಲ್​​ಗೆ ನಿವೃತ್ತಿ ಹೇಳ್ತಾರಾ ಅನ್ನೋದು. ಆದರೆ, ಧೋನಿಯವರು ಅಂತಹ ಯಾವುದೇ ದೃಢ ನಿರ್ಧಾರವನ್ನು ಪ್ರಕಟಿಸಿಲ್ಲ. ಸದ್ಯಕ್ಕೆ ತಾವು ಗುಡ್​ಬೈ ಹೇಳಲ್ಲ ಎಂದು ತಿಳಿಸಿದ್ದಾರೆ. ಧೋನಿಯ ಈ ನಿರ್ಧಾರ ತಿಳಿಯುತ್ತಿದ್ದಂತೆಯೇ ಚೆನ್ನೈ ಸೂಪರ್​ ಕಿಂಗ್ಸ್​ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ನನ್ನಿಂದ ನೀವು ನಿವೃತ್ತಿ (ರಿಟೈರ್ಮೆಂಟ್) ಉತ್ತರವನ್ನು ಹುಡುಕುತ್ತಿದ್ದೀರಿ. ನಾನು ರಿಟೈರ್ಮೆಂಟ್ ಘೋಷಣೆ ಮಾಡಲು ಇದು ಒಳ್ಳೆಯ ಸಂದರ್ಭ. ಆದರೆ, ಎಲ್ಲ ಕಡೆ ನನಗೆ ಬೆಲೆ ಕಟ್ಟಲಾಗದ ಪ್ರೀತಿ ಸಿಕ್ಕಿದೆ. ನಾನು ಸುಲಭವಾಗಿ ನಿವೃತ್ತಿ ಘೋಷಣೆ ಮಾಡಿ ಹೋಗಬಹುದು. ಇನ್ನೂ 9 ತಿಂಗಳ ಕಾಲ ಕಠಿಣ ಪರಿಶ್ರಮಪಟ್ಟು ಇನ್ನೊಂದು ಐಪಿಎಲ್ ಆಡಬೇಕು. ಮತ್ತೊಂದು ಐಪಿಎಲ್ ಕಪ್ ಗೆಲ್ಲಬೇಕು.

ಕಣ್ಣಾಲೆಗಳು ತೇವಗೊಳ್ಳುತ್ತವೆ
ಅಭಿಮಾನಿಗಳ ಪ್ರೀತಿ, ಅಭಿಮಾನ, ಎಮೋಷನ್​​ ನನಗೆ ಉಡುಗೊಡೆಯಾಗಿ ಸಿಕ್ಕಿದೆ. ಸಿಎಸ್​ಕೆಯ ಪ್ರತಿ ಪಂದ್ಯದಲ್ಲೂ ‘ಧೋನಿ ಧೋನಿ’ ಎಂಬ ಕೂಗು ಮೈದಾನದಲ್ಲಿ ಮುಳುಗುತ್ತದೆ. ನನ್ನ ಹೆಸರು ಕೇಳುತ್ತಿದ್ದಂತೆಯೇ ಕಣ್ಣಾಲೆಗಳು ತೇವಗೊಳ್ಳುತ್ತವೆ. ಅದಕ್ಕೆ ಪೆವಿಲಿಯನ್​ನಲ್ಲಿ ನನಗೆ ಒಂದಷ್ಟು ಸಮಯ ಬೇಕಾಗುತ್ತದೆ. ನಾನು ಇದನ್ನು ಅನುಭವಿಸಬೇಕು ಅಂತಾ ಅರಿವಿಗೆ ಬಂದಿದೆ. ಅವರು ನನ್ನನ್ನು ನಿಷ್ಕಲ್ಮಶವಾಗಿ ಪ್ರೀತಿ ಮಾಡುತ್ತಾರೆ. ನಾನು ಆಗಾಗ ಯೋಚಿಸುತ್ತೇನೆ.. ಏನಂದರೆ, ಅವರೆಲ್ಲ ಯಾಕೆ ನನ್ನನ್ನು ಇಷ್ಟಪಡುತ್ತಾರೆ ಎಂದು ಭಾವುಕರಾದರು.

ಮುಂಬೈ ಸಾಧನೆ ಸರಿಗಟ್ಟಿದ CSK
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ 20 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಲು ಸಿಎಸ್​ಕೆ ಬರ್ತಿದ್ದಂತೆ ಮಳೆರಾಯ ಅಡ್ಡಿಯಾದ. ಕೊನೆಗೆ ಡಿಎಲ್​ಎಸ್​ (Duckworth–Lewis–Stern method) ಪ್ರಕಾರ, ಚೆನ್ನೈಗೆ ಗೆಲ್ಲಲು 15 ಓವರ್​ನಲ್ಲಿ 171 ರನ್​ ಬೇಕಿತ್ತು. ಸಿಎಸ್​ಕೆ ಈ ಗುರಿಯನ್ನು 15ನೇ ಓವರ್​ನ ಕೊನೆಯ ಬಾಲ್​ನಲ್ಲಿ ಮುಟ್ಟಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​, ಐದನೇ ಐಪಿಎಲ್​​ ಕಪ್​ ಎತ್ತಿ ಹಿಡಿಯಿತು. ಇದುವರೆಗೆ ಮುಂಬೈ ಇಂಡಿಯನ್ಸ್​ ಮಾತ್ರ ಐದು ಬಾರಿ ಐಪಿಎಲ್​ ಟ್ರೋಫಿ ಗೆದ್ದಿತ್ತು. ಈ ದಾಖಲೆಯನ್ನು ಸಿಎಸ್​​ಕೆ ಸರಿಗಟ್ಟಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

IPL ನಿವೃತ್ತಿ ಬಗ್ಗೆ ಭಾವನಾತ್ಮಕವಾಗಿ ಮಾತಾಡಿದ ಮಹೇಂದ್ರ ಸಿಂಗ್ ಧೋನಿ..! Video

https://newsfirstlive.com/wp-content/uploads/2023/05/IPL2023-7.jpg

Load More