newsfirstkannada.com

‘ಧೋನಿ ಆ ರಾತ್ರಿ ಕಣ್ಣೀರು ಹಾಕಿದ್ರು..‘ ಮಾಹಿ ಭಾವುಕರಾದ ಘಟನೆ ನೆನೆದ ಹರ್ಭಜನ್​ ಸಿಂಗ್​

Share :

24-05-2023

    ಆ ರಾತ್ರಿ ಅಕ್ಷರಶಃ ಎಂಎಸ್ ಧೋನಿ ಅಳುತ್ತಿದ್ದರು

    ಮಾಹಿ ಭಾವುಕರಾಗಿ ಕಣ್ಣೀರು ಸುರಿಸಿದ ಘಟನೆ

    ಕಾಮೆಂಟರಿಯಲ್ಲಿ ಹರ್ಭಜನ್​ ಸಿಂಗ್ ಬಿಚ್ಚಿಟ್ಟ ನೋವು

ಮಹೇಂದ್ರ ಸಿಂಗ್​ ಧೋನಿ ನಾಯಕತ್ವದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಕೂಲ್​ ಕ್ಯಾಪ್ಟನ್​ ಎಂದೆನಿಸಿಕೊಂಡಿರುವ ಮಾಹಿ ತಂಡದ ಎಲ್ಲಾ ಸದಸ್ಯರನ್ನು ಉತ್ತಮವಾಗಿ ಭಾಂದವ್ಯ ಹೊಂದಿದ್ದಾರೆ. ತಮ್ಮ ತಂಡ ಗೆಲುವಿಗಾಗಿ ಏನೆಲ್ಲಾ ಬೇಕು ಅದೆಲ್ಲದರ ಕುರಿತಾಗಿ ಸರಿಯಾದ ಚರ್ಚೆ ಮಾಡುತ್ತಾರೆ. ಅಷ್ಟೇ ಏಕೆ ತಂಡದಲ್ಲಿರುವವರಿಗೆ ಮೊದಲ ಅದ್ಯತೆ ನೀಡುವ ಮೂಲಕ ಬ್ಯಾಟಿಂಗ್​ ವಿಚಾರದಲ್ಲಿ ಕೊನೆಗೆ ಬರುತ್ತಾರೆ. ಹೀಗೆ ಧೋನಿ ಈ ಎಲ್ಲಾ ಕಾರಣಕ್ಕೆ ತುಂಬಾ ಇಷ್ಟವಾಗುತ್ತಾರೆ. ಮಾತ್ರವಲ್ಲದೆ ಬಹುಸಂಖ್ಯಾ ಅಭಿಮಾನಿಗಳನ್ನು ಮಾಹಿ ಹೊಂದಿದ್ದಾರೆ. ಧೋನಿ ಕೂಲ್​ ಕ್ಯಾಪ್ಟನ್​ ಮಾತ್ರವಲ್ಲ, ಅಷ್ಟೇ ಭಾವುಕ ವ್ಯಕ್ತಿ ಕೂಡ. ಹಿಂದೊಮ್ಮೆ ಮಾಹಿ ತಂಡಕ್ಕಾಗಿ ಕಣ್ಣೀರು ಹಾಕಿದ ಪ್ರಸಂಗ ಬಹುತೇಕರಿಗೆ ಗೊತ್ತೇ ಇಲ್ಲ. ಆದರೆ ಇದೀಗ ಆ ಸುದ್ದಿ ಮತ್ತೆ ಮುನ್ನಲೆಗೆ ಬಂದಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.

ಹಿಂದೊಮ್ಮೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಐಪಿಎಲ್​ ಬೆಟ್ಟಿಂಗ್​ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ತಂಡವನ್ನು ಅಮಾನತ್ತು ಮಾಡಲಾಗಿತ್ತು. ಬಳಿಕ 2018ರಲ್ಲಿ ಸಿಎಸ್​ಕೆ ತಂಡ ಮತ್ತೆ ಪುನರಾಗಮನ ಮಾಡಿತು. ಈ ಸಂಧರ್ಭದಲ್ಲಿ ಮಾಹಿ ಭಾವುಕರಾಗಿ ಕಣ್ಣೀರು ಸುರಿಸಿದ ಘಟನೆ ನಡೆದಿತ್ತು.

ಐಪಿಎಲ್ ಕಾಮೆಂಟರಿ ಸಂದರ್ಭದಲ್ಲಿ ಹರ್ಭಜನ್​ ಸಿಂಗ್​ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ನಾನು ಹೇಳಿಕೊಳ್ಳಲು ಬಯಸುವ ಕಥೆಯೊಂದು ಇದೆ. 2018ರಲ್ಲಿ, 2 ವರ್ಷಗಳ ನಿಷೇಧದ ನಂತರ CSK ಮತ್ತೆ ಐಪಿಎಲ್​ಗೆ ಮರಳಿತು. ಈ ವೇಳೆ ತಂಡದವರಿಗಾಗಿ ಒಂದು ಭೋಜನ ವ್ಯವಸ್ಥೆ ಮಾಡಲಾಗಿತ್ತು. ‘ಪುರುಷರು ಅಳುವುದಿಲ್ಲ’ ಎಂಬ ಮಾತನ್ನು ನಾನು ಕೇಳಿದ್ದೇನೆ, ಆದರೆ ಆ ರಾತ್ರಿ ಎಂಎಸ್ ಧೋನಿ ಅಳುತ್ತಿದ್ದರು. ಅವರು ಭಾವುಕರಾಗಿದ್ದರು. ಈ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ’’ ಎಂದು ಹೇಳಿದ್ದಾರೆ.

ಇದಕ್ಕೆ ಅಲ್ಲೇ ಇದ್ದ ಇಮ್ರಾನ್​ ತಾಹಿರ್​, ‘‘ಹೌದು. ನಾನು ಕೂಡ ಅಲ್ಲೇ ಇದ್ದೆ. ಅದು ಭಾವನಾತ್ಮಕ ಕ್ಷಣವಾಗಿತ್ತು. ಇದನ್ನು ಕಂಡಾಗ ಈ ತಂಡ ಅವರಿಗೆ ಎಷ್ಟು ಹತ್ತಿರದಲ್ಲಿದೆ ಎಂದು ನನಗೆ ತಿಳಿಯಿತು. ಅವರು ತಮ್ಮ ತಂಡವನ್ನು ಕುಟುಂಬವೆಂದು ಪರಿಗಣಿಸುತ್ತಾರೆ’’ ಎಂದು ಹೇಳಿದರು.

ಅಂದಹಾಗೆಯೇ ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ಧೋನಿ ಪಡೆ ಸೋಲಿಸಿದೆ. 15 ರನ್​ಗಳ ಭರ್ಜರಿ ಜಯದೊಂದಿಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಫೈನಲ್​ಗೆ ಪ್ರವೇಶಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಧೋನಿ ಆ ರಾತ್ರಿ ಕಣ್ಣೀರು ಹಾಕಿದ್ರು..‘ ಮಾಹಿ ಭಾವುಕರಾದ ಘಟನೆ ನೆನೆದ ಹರ್ಭಜನ್​ ಸಿಂಗ್​

https://newsfirstlive.com/wp-content/uploads/2023/05/MS-Dhoni-2.jpg

Load More