newsfirstkannada.com

30 ವರ್ಷದ ಬಳಿಕ ಅಣ್ಣನನ್ನು ಕೂಡಿಕೊಂಡ MS​ ಧೋನಿ.. ನೆಚ್ಚಿನ ತಮ್ಮನ ಬಗ್ಗೆ ನರೇಂದ್ರ ಸಿಂಗ್ ಹೇಳಿದ್ದೇನು?

Share :

17-06-2023

    ವಿಶ್ವ ಮೆಚ್ಚಿದ ನಾಯಕನಿಗೆ ಆ ಒಂದು ಕೊರಗು ಕೊನೆಗೂ ನೆರವೇರಿತು

    ಮೂರು ದಶಕಗಳ ಬಳಿಕ ಒಂದಾದ ರಾಂಚಿಯ ಸಹೋದರರು ಇವರು

    'ಧೋನಿ ಬ್ಯಾಟ್​ ಬೀಸಿದ ಯಶಸ್ಸಿನಲ್ಲಿ ನನ್ನ ಕೊಡುಗೆ ಏನು ಇಲ್ಲ'

ಧೋನಿಗೆ ಎಲ್ಲಾ ಸಿಕ್ಕಿದೆ. ಮಾಸ್​ ಮಹಾರಾಜ ಮಾಡದ ಸಾಧನೆಗಳಿಲ್ಲ. ಇವರನ್ನ ಬಣ್ಣಿಸದವರಿಲ್ಲ. ದಿ ಲೆಜೆಂಡ್ ಅಂದ್ರೆ​​ ಎಲ್ಲರಿಗೂ ಅಚ್ಚುಮೆಚ್ಚು. ಇಷ್ಟೆಲ್ಲ ಅಪಾರ ಪ್ರೀತಿ, ಖ್ಯಾತಿ ಗಳಿಸಿದ ಮಿಸ್ಟರ್ ಕೂಲ್​​​​ಗೆ ಒಂದು ಕೊರಗಿತ್ತು. ಅದು 30 ವರ್ಷದ ಕೊರಗು. ಕೊನೆಗೂ ಆ ದೊಡ್ಡ ಕೊರಗೂ ಈಗ ನೀಗಿದೆ. ಮಾಹಿ ಮೊಗದಲ್ಲಿ ಮಂದಹಾಸ ಮೂಡಿದೆ.

ಎಂ.ಎಸ್ ಧೋನಿ ದಿ ಅನ್​ಟೋಲ್ಡ್ ಸ್ಟೋರಿ. ವಿಶ್ವ ಮೆಚ್ಚಿದ ನಾಯಕ ಧೋನಿ ಜೀವನಾಧಾರಿತ ಚಿತ್ರ. 2016 ರಲ್ಲಿ ತೆರೆಕಂಡು ಸೂಪರ್​ಡೂಪರ್ ಹಿಟ್ ಆಗಿತ್ತು. ಬಾಕ್ಸ್​ ಆಫೀಸ್​​ನಲ್ಲಿ 216 ಕೋಟಿ ರೂ ಬಾಚಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತ್ತು. ದಿವಂಗತ ಶುಶಾಂತ್ ಸಿಂಗ್ ರಜಪೂತ್​​ ಮಾಹಿಯ ಪಾತ್ರಕ್ಕೆ ಜೀವ ತುಂಬಿ ಶಹಬ್ಬಾಸ್​ ಗಿರಿ ಗಿಟ್ಟಿಸಿಕೊಂಡಿದ್ರು.

5 ವರ್ಷಗಳ ಹಿಂದೆ ತೆರೆಕಂಡ ಈ ಬ್ಲಾಕ್​ಬಸ್ಟ್​​​​ ಈ ಮೂವಿ ಒಂದು ಕಂಪ್ಲೀಟ್ ಪ್ಯಾಕೇಜ್ ಆಗಿತ್ತು. ಧೋನಿ ಬಾಲ್ಯ ಜೀವನ, ಸ್ಟ್ರಗಲಿಂಗ್​​, ಲವ್​​​​​​, ಕ್ರಿಕೆಟ್ ಸಾಧನೆ, ಫ್ರೆಂಡ್ಸ್​​​ ಮತ್ತು ಧೋನಿ ಯಶಸ್ಸಿನಲ್ಲಿ ಫ್ಯಾಮಿಲಿ ಪಾತ್ರವನ್ನ ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಬಟ್​​ ಇಷ್ಟೆಲ್ಲ ಕಂಪ್ಲೀಟ್​ ಬಯೋಪಿಕ್​​ನಲ್ಲಿ ಒಂದು ಟಾಪಿಕ್ ಮಿಸ್ಸಾಗಿತ್ತು. ಒಡ ಹುಟ್ಟಿದ ಅಣ್ಣನ ಬಗ್ಗೆ ಎಲ್ಲೂ ತೋರಿಸಿರಲಿಲ್ಲ.

ಚಿತ್ರದಲ್ಲಿ ಧೋನಿ ಅಣ್ಣ ನರೇಂದ್ರ ಸಿಂಗ್​​ ಧೋನಿ ಹೆಸರು ಮಿಸ್ಸಿಂಗ್​​​​​ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. ಬಯೋಪಿಕ್​​ನಲ್ಲಿ ಯಾಕೆ ಮಾಹಿಯ ಅಣ್ಣನನ್ನ ತೋರಿಸಿಲಿಲ್ಲ?. ಚಿತ್ರತಂಡ ಉದ್ದೇಶಪೂರ್ವಕವಾಗಿ ಅವರನ್ನ ಕಡೆಗಣನೆ ಮಾಡಿತ್ತಾ?. ಇಲ್ಲ ಸ್ವತಃ ಧೋನಿಯೇ ಅಣ್ಣನ ವಿಷಯ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರಲಿಲ್ವ?. ಇಂತಹ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳನ್ನ ಇಂದಿಗೂ ಕಾಡ್ತಿವೆ.

ಒಡಹುಟ್ಟಿದ ಅಣ್ಣನ ಕಂಡು ಧೋನಿ ಫುಲ್​ ಖುಷ್​​​

ನರೇಂದ್ರ ಸಿಂಗ್ ಧೋನಿ ಅವರು ಧೋನಿಯ ದೊಡ್ಡಣ್ಣ. ಮಾಹಿ ಜಗತ್ತಿನಲ್ಲೆಡೆ ಅಪರಿಮಿತ ಪ್ರೀತಿ ಸಂಪಾದಿಸಿದ್ದಾರೆ. ಆದ್ರೆ ಒಡ ಹುಟ್ಟಿದ ಅಣ್ಣನ ಪ್ರೀತಿಯನ್ನ ಮಾತ್ರ ಕಳೆದುಕೊಂಡ್ರು. ಎಲ್ಲವನ್ನ ಗೆದ್ದ ದಿ ಲೆಜೆಂಡ್​​ಗೆ ಅಣ್ಣನ ಅಲಭ್ಯತೆ ಕೊರಗು ಕಾಡ್ತಿತ್ತು. ಅದು ಒಂದಲ್ಲ, ಎರಡಲ್ಲ, ಬರೋಬ್ಬರಿ 30ಕ್ಕೂ ಅಧಿಕ ವರ್ಷ. ಈ ಅವಧಿಯಲ್ಲಿ ರಕ್ತ ಹಂಚಿಕೊಂಡ ಹುಟ್ಟಿದ ಅಣ್ಣನಿಗಾಗಿ ಮಾಹಿ ಮನಸ್ಸು ಎಷ್ಟು ಚಡಪಡಿಸಿರಬೇಕು ಅಲ್ವಾ?. ಆದ್ರೆ ಇನ್ಮುಂದೆ ಅದಕ್ಕೆ ಅವಕಾಶವಿಲ್ಲ. ಯಾಕಂದ್ರೆ ರಾಮ -ಲಕ್ಷ್ಮಣರಂತಿದ್ದ ನರೇಂದ್ರ ಸಿಂಗ್ ಧೋನಿ ಹಾಗೂ ಮಹೇಂದ್ರ ಸಿಂಗ್ ಧೋನಿ ಮತ್ತೆ ಒಂದಾಗಿದ್ದಾರೆ.

ಮಿಸ್ಟರ್ ಕೂಲ್ ಧೋನಿಯ ಸಂತಸಕ್ಕೆ ಸದ್ಯ ಪಾರವೇ ಇಲ್ಲ. ಯಾಕಂದ್ರೆ ಕೌಟುಂಬಿಕ ಕಲಹದಿಂದ ಮನೆ ಬಿಟ್ಟು ಹೋಗಿದ್ದ ಧೋನಿ ಹಿರಿಯಣ್ಣ ಮತ್ತೆ ಮುದ್ದಿನ ತಮ್ಮಣ್ಣನ್ನ ಸೇರಿಕೊಂಡಿದ್ದಾರೆ. ಸದ್ಯ ರಾಜಕೀಯ ರಂಗದಲ್ಲಿರುವ ನರೇಂದ್ರ ಸಿಂಗ್​ ಧೋನಿ, ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಹಿಂದೆ ಬಿಜೆಪಿ ಪಕ್ಷದಲ್ಲಿದ್ದರು. ಇವರನ್ನ ಧೋನಿ ಬಯೋಪಿಕ್​​ನಲ್ಲಿ ಸಿನಿಮಾದಲ್ಲಿ ತೋರಿಸದ್ದೇ ಇದ್ದಿದ್ದು ಗುಟ್ಟಾಗಿ ಉಳಿದಿತ್ತು. ಈಗ ಆ ಗುಟ್ಟು ರಟ್ಟಾಗಿದೆ.

‘ಧೋನಿ ಬ್ಯಾಟ್​ ಹಿಡಿದಾಗ ನಾನು ಮನೆ ತೊರೆದೆ ‘

ಸದ್ಯ ರಾಂಚಿಯಲ್ಲಿರುವ ತಮ್ಮ ಮನೆಗೆ ಧೋನಿ ಅಣ್ಣ ನರೇಂದ್ರ ಸಿಂಗ್​​​ ಧೋನಿ ವಾಪಾಸಾಗಿದ್ದಾರೆ. ಇದೇ ವೇಳೆ ತಾವೇಕೆ ತಮ್ಮನ ಬಯೋಪಿಕ್​​ನಲ್ಲಿ ಕಾಣಿಸಿಕೊಳ್ಳಲಿಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ.

ಧೋನಿ ಸಕ್ಸಸ್​​ನಲ್ಲಿ ನನ್ನ ಪಾತ್ರವಿಲ್ಲ

”ನಾನು ಧೋನಿಗಿಂತ 10 ವರ್ಷ ದೊಡ್ಡವನು. ಆತ ಮೊದಲ ಬಾರಿ ಬ್ಯಾಟ್ ಹಿಡಿದಾಗ ನಾನು ಮನೆ ತೊರೆದೆ. 1991 ರಿಂದ ಕುಟುಂಬದ ಜೊತೆಗಿಲ್ಲ. ಧೋನಿ ಜೀವನಾಧಾರಿತ ಚಿತ್ರ ಅವನ ಬಾಲ್ಯ ಜೀವನ, ಹೋರಾಟ ಮತ್ತು ಕ್ರಿಕೆಟ್ ಸಾಧನೆಯ ಕುರಿತು ಮೂಡಿ ಬಂದಿದೆ. ಇದು ಸಂಪೂರ್ಣ ಮಾಹಿ ಕುರಿತ ಚಿತ್ರ. ತಮ್ಮನ ಯಶಸ್ಸಿನಲ್ಲಿ ತನ್ನ ಪಾತ್ರ ಏನು ಇಲ್ಲ. ಹಾಗಾಗಿ ಧೋನಿ ಚಿತ್ರದಲ್ಲಿ ನನ್ನನ್ನ ತೋರಿಸಲಾಗಿಲ್ಲ.

ನರೇಂದ್ರ ಸಿಂಗ್ ಧೋನಿ, ಧೋನಿ ಅಣ್ಣ.

ಫೈನಲಿ ತಾನೇಕೆ ತಮ್ಮನ ಬಯೋಫಿಕ್​​​ ಸಿನಿಮಾದಲ್ಲಿ ಮಿಸ್ ಆದೆ ಅನ್ನೋದಕ್ಕೆ ಮಾಹಿ ಅಣ್ಣ ಆನ್ಸರ್ ನೀಡಿದ್ದಾರೆ. ಜೊತೆಗೆ ವಿಶ್ವವಿಖ್ಯಾತ, ಅಭಿಮಾನಿಗಳ ಆರಾಧ್ಯದೈವ, ಕ್ರೇಜ್​ ಕಾ ಬಾಪ್​​​ ಎಂದೆಲ್ಲ ಕರೆಸಿಕೊಳ್ಳುವ ನೆಚ್ಚಿನ ತಮ್ಮನನ್ನ ಸೇರಿಕೊಂಡಿದ್ದಾರೆ. ಇದಕ್ಕಿಂತ ದೊಡ್ಡ ಖುಷಿ ಏನಿದೆ ಹೇಳಿ?. ಇಬ್ಬರು ಇನ್ಮುಂದೆ ರಾಮ-ಲಕ್ಷ್ಮಣರಂತೆ ಕೂಡಿ ಬಾಳಲಿ. ಅಣ್ಣ-ತಮ್ಮನ ಸಹೋದರತ್ವ ಎಲ್ಲರಿಗೂ ಮಾದರಿಯಾಗಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

30 ವರ್ಷದ ಬಳಿಕ ಅಣ್ಣನನ್ನು ಕೂಡಿಕೊಂಡ MS​ ಧೋನಿ.. ನೆಚ್ಚಿನ ತಮ್ಮನ ಬಗ್ಗೆ ನರೇಂದ್ರ ಸಿಂಗ್ ಹೇಳಿದ್ದೇನು?

https://newsfirstlive.com/wp-content/uploads/2023/06/MS_DHONI_BROTHER_1.jpg

Load More