newsfirstkannada.com

ಧೋನಿ ಗರಡಿಯಲ್ಲಿವೆ ನೂರಾರು ಬೈಕ್​ಗಳು.. ಫಾರ್ಮ್​ಹೌಸ್​ನಲ್ಲಿದ್ದ ಐಷಾರಾಮಿ ಕಾರು, ಬೈಕ್​ ನೋಡಿ ಬೆಚ್ಚಿಬಿದ್ದ ಮಾಜಿ ಕ್ರಿಕೆಟರ್​

Share :

19-07-2023

    ಧೋನಿಯವರ ಬೈಕ್​ಗಳನ್ನ ನೋಡಿದರೆ ಶಾಕ್​ ಆಗೋದು ಪಕ್ಕಾ

    ಬೈಕ್​ಗಳ ಶೋರೂಮ್ ರೀತಿಯಿದೆ ಧೋನಿಯ ಫಾರ್ಮ್​ಹೌಸ್..!

    ಒಂದಾ, ಎರಡಾ.. ಫಾರ್ಮ್​ಹೌಸ್​ನ​ ಫುಲ್ ಇವೆ ಬೈಕ್​, ಕಾರುಗಳು

ಬೈಕ್​, ಕಾರು ಎಂದರೆ ಸಿನಿಮಾ ಸ್ಟಾರ್​ಗಳು, ಕ್ರಿಕೆಟರ್ಸ್​ಗೆ ಸಖತ್ ಕ್ರೇಜ್ ಇರುತ್ತದೆ. ಅದು ಯಾವ ಮಟ್ಟಿಗೆ ಎಂದರೆ ಅವುಗಳಿಗಾಗಿ ಪ್ರತ್ಯೇಕ ಫಾರ್ಮ್​ಹೌಸ್​ ನಿರ್ಮಾಣ ಮಾಡಿರುತ್ತಾರೆ. ಅವುಗಳನ್ನು ತಮ್ಮ ಮನೆಯ ಸದಸ್ಯನಂತೆ ನೋಡಿಕೊಳ್ಳುವುದು ಇದೆ. ಅದರಲ್ಲಿ ಭಾರತ ತಂಡದ ಮಾಜಿ ಕೂಲ್​ ಕ್ಯಾಪ್ಟನ್​ ಎಂಎಸ್​ ಧೋನಿಗೆ ಬೈಕ್​ಗಳೆಂದರೆ ಸಖತ್ ಕ್ರೇಜ್​. ಕಾಲೇಜು ದಿನಗಳಿಂದಲೂ ಬೈಕ್​ ಮೇಲೆ ಪ್ರೀತಿ ಬೆಳೆಸಿಕೊಂಡ ಚೆನ್ನೈ ಕ್ಯಾಪ್ಟನ್​ ಫಾರ್ಮ್​ಹೌಸ್ ಫುಲ್​ ಬೈಕ್​ಗಳನ್ನೇ ಕಲೆಕ್ಟ್​ ಮಾಡಿದ್ದಾರೆ.

ಜಾರ್ಖಂಡ್​ನ ರಾಂಚಿಯಲ್ಲಿರುವ ತಮ್ಮ ಫಾರ್ಮ್​ಹೌಸ್​ನಲ್ಲಿ ಧೋನಿ ಅವರು ಸುಮಾರು 100ಕ್ಕೂ ಹೆಚ್ಚು ಬೈಕ್​ಗಳನ್ನು ಪಾರ್ಕ್​ ಮಾಡಿದ್ದಾರೆ. ಅಲ್ಲದೇ ಇವುಗಳ ಜೊತೆ ಐಷಾರಾಮಿ ಕಾರುಗಳು ಕೂಡ ಆ ಫಾರ್ಮ್​ಹೌಸ್​ನಲ್ಲಿವೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋವನ್ನು ನೋಡಿದರೆ ನೀವು ಶಾಕ್​ ಆಗುವುದಂತೂ ಗ್ಯಾರಂಟಿ. ಏಕೆಂದರೆ ಧೋನಿಯವರ ಬೈಕ್​ ಮೇಲಿನ ಪ್ರೀತಿ ಎಂದರೆ ಇದು ಒಂದು ರೀತಿ ಹುಚ್ಚುತನ ಎಂದು ಅನಿಸಬಹುದು. ಆ ರೀತಿಯಲ್ಲಿ ಕೂಲ್ ಕ್ಯಾಪ್ಟನ್​ ಬೈಕ್​ಗಳನ್ನು ಖರೀದಿ ಮಾಡಿದ್ದಾರೆ.

ಸದ್ಯ ಟ್ವಿಟರ್​ನಲ್ಲಿ ವೈರಲ್​ ಆಗಿರೋ ಬೈಕ್​ಗಳ ವಿಡಿಯೋದಲ್ಲಿ ಧೋನಿಯವರ ಧರ್ಮಪತ್ನಿ ಸಾಕ್ಷಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಮಾಜಿ ಕ್ರಿಕೆಟರ್​ ವೆಂಕಟೇಶ್ ಪ್ರಸಾದ್​ ಅವರು, ಸೂಪರ್​ ಇದೊಂದು ಅಮೆಜಿಂಗ್​ ಆಗಿದೆ. ಧೋನಿ ಫಾರ್ಮ್​ಹೌಸ್​ಗೆ ಬರುತ್ತಿರುವುದು ಇದು 4ನೇ ಬಾರಿ. ಈ ರೀತಿ ಬೈಕ್​ಗಳನ್ನು ಕಲೆಕ್ಟ್​ ಮಾಡುವುದು ಒಂದು ರೀತಿ ಮ್ಯಾಡ್ನೇಸ್​ ಆಗಿದ್ದು ಇಂತವರು ಇರುತ್ತಾರಾ ಎನಿಸುತ್ತಿದೆ. ಇದೊಂದು ಸಾಧನೆ, ಇದನ್ನು ನಂಬಲು ಆಗುತ್ತಿಲ್ಲ. ನಾನು ಏನು ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಇದು ಬೈಕ್​ ಶೋರೂಮ್​ ರೀತಿ ಕಾಣುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಬಳಿಕ ಸಾಕ್ಷಿ ಅವರು ಧೋನಿಯವರಿಗೆ ಯಾಕೆ ಮಾಹಿ ಈ ರೀತಿ ಕಲೆಕ್ಟ್​ ಮಾಡಿದ್ದು ಇವುಗಳ ಅವಶ್ಯಕತೆ ಏನಿತ್ತು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಧೋನಿ, ವೆಂಕಟೇಶ್​ ಪ್ರಸಾದ್ ಮಾತನಾಡುವಾಗ ನಡುವೆ ಮಾತನಾಡಿ, ಇಲ್ಲಿಗೆ ನಾನು ಬರುತ್ತಿರುವುದು ಇದೇ ಮೊದಲು ಎಂದು ತಮಾಷೆ ಮಾಡಿದರು. ನನ್ನ ಮನೆಯಲ್ಲಿ ಏನಾದರೂ ಇರಬೇಕು ಎಂದು ಆಸೆ ಪಡುತ್ತಿದ್ದೆ. ನನ್ನದೇ ಆದ ಏನಾದರೂ ಒಂದು ಇರಬೇಕು ಎಂದುಕೊಂಡಿದ್ದೆ. ಹೀಗಾಗಿ ಬೈಕ್​ಗಳನ್ನು ನಾನು ಆಯ್ಕೆ ಮಾಡಿಕೊಂಡೆ. ಈ ಫಾರ್ಮ್​ಹೌಸ್​ ಹಿಂದೆ ಬಾಡ್ಮಿಂಟನ್​ ಕೋರ್ಟ್​ ಇದೆ ಎಂದು ಧೋನಿ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ ಗರಡಿಯಲ್ಲಿವೆ ನೂರಾರು ಬೈಕ್​ಗಳು.. ಫಾರ್ಮ್​ಹೌಸ್​ನಲ್ಲಿದ್ದ ಐಷಾರಾಮಿ ಕಾರು, ಬೈಕ್​ ನೋಡಿ ಬೆಚ್ಚಿಬಿದ್ದ ಮಾಜಿ ಕ್ರಿಕೆಟರ್​

https://newsfirstlive.com/wp-content/uploads/2023/07/DONI_BIKE_CRAZY.jpg

Load More