newsfirstkannada.com

2011ರಲ್ಲಿ M.S ಧೋನಿ ವಿಶ್ವಕಪ್​​ ಗೆಲ್ಲಿಸಲು ಈ ಡಿಶ್​​​​​ ಕೂಡ ಕಾರಣವಂತೆ! ಸಖತ್​ ಸ್ಟೋರಿ ಇಲ್ಲಿದೆ ನೋಡಿ

Share :

28-06-2023

    ಆ ಒಂದು ಡಿಶ್ ಎಂದರೆ ಮಾಜಿ ಕ್ಯಾಪ್ಟನ್​ಗೆ ತುಂಬಾ ಇಷ್ಟ

    ಧೋನಿ 3 ಐಸಿಸಿ ಮಾದರಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ

    ಇದನ್ನು ತಿಂದರೆ ವಿಶ್ವಕಪ್​ ಗೆಲ್ಲುತ್ತೇವೆ ಎಂಬ ನಂಬಿಕೆ- ಧೋನಿ

ಮಾಸ್ಟರ್​ಮೈಂಡ್​​​ ಧೋನಿಯ ಆನ್​​​ ಮತ್ತು ಆಫ್​​ ದಿ ಫೀಲ್ಡ್​ನಲ್ಲಿ ಹಲವು ವಿಚಾರಗಳು ಅಭಿಮಾನಿಗಳಿಗೆ ಗೊತ್ತಿದೆ. ಆದರೆ ಧೋನಿ, 2011ರ ವಿಶ್ವಕಪ್​​ ಗೆಲ್ಲಿಸಿಕೊಟ್ಟಿದ್ದು ಹೇಗೆ ಅನ್ನೋ ಇನ್​ಸೈಡ್​ ಸ್ಟೋರಿ ಯಾರಿಗೂ ಗೊತ್ತಿಲ್ಲ. ಮೈದಾನದಲ್ಲಿ ಆಡಿದ್ದು ಬಿಡಿ, ಆಫ್​ ದ ಫೀಲ್ಡ್​ನಲ್ಲಿ ಹೀಗೆ ಮಾಡಿದ್ದೇ ಕಪ್​ ಗೆಲ್ಲೋಕೆ ಕಾರಣವಾಯ್ತಂತೆ. ಇವತ್ತಿನ ಸಖತ್​ ಸ್ಟೋರಿಯಲ್ಲಿ ಏನಿದು ಕಥೆ..?

ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ 3 ಐಸಿಸಿ ಮಾದರಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಶ್ರೇಷ್ಠ ನಾಯಕ. ಆದ್ರಲ್ಲೂ 2011ರ ಏಕದಿನ ವಿಶ್ವಕಪ್​​​ ಗೆಲ್ಲಿಸಿದ್ದಂತೂ ಮಾಹಿ ಕ್ರಿಕೆಟ್ ಬದುಕಿನ ಎವರ್​​ಗ್ರೀನ್ ಮೂಮೆಂಟ್​​. ಪಂದ್ಯದಲ್ಲಿ ನಾಯಕನಾಗಿ ಬಡ್ತಿ ಪಡೆದು ಬಂದ ಧೋನಿ 91 ರನ್​ ಗಳಿಸಿ, 28 ವರ್ಷಗಳ ಬಳಿಕ ಭಾರತಕ್ಕೆ ಒನ್ಡೇ ವಿಶ್ವಕಪ್​​​ ಟ್ರೋಫಿ ಗೆಲ್ಲಿಸಿಕೊಟ್ಟಿದ್ರು. ಇಂತಹ ಐತಿಹಾಸಿಕ ಕ್ಷಣದ​ ಸೃಷ್ಟಿಗೆ ಮಾಹಿಯ ಆಟ ಎಷ್ಟು ಕಾರಣನೋ? ಈ ಡಿಶ್​​​​​ ಕೂಡ ಅಷ್ಟೇ ಕಾರಣವಂತೆ. ಇದು ಅಚ್ಚರಿ ಅನ್ನಿಸಿದ್ರೂ ಇದು ಸತ್ಯ.

ಇದನ್ನು ಓದಿ: ಕಷ್ಟದಲ್ಲಿ ಕೈ ಹಿಡಿದಿದ್ದ ಫ್ರೆಂಡ್​ನನ್ನು ಮರೆತ್ತಿಲ್ಲ ಕೂಲ್​ ಕ್ಯಾಪ್ಟನ್.. ಧೋನಿ ಗೆಳೆಯ ಚಿಟ್ಟು ಈಗ ಏನಾಗಿದ್ದಾರೆ?

ಧೋನಿ ಒಬ್ಬ ಸೂಪರ್​ಸ್ಟಿಶಿಯಸ್​​, ಮೂಢನಂಬಿಕೆಯನ್ನ ಸಿಕ್ಕಾಪಟ್ಟೆ ನಂಬುತ್ತಾರೆ. 2011ರ ಏಕದಿನ ವಿಶ್ವಕಪ್ ಪೂರ್ತಿ ಕ್ಯಾಪ್ಟನ್ ಧೋನಿ, ಬರೀ ಕಿಚಡಿಯನ್ನ ಸೇವಿಸಿದ್ರಂತೆ. ಕಿಚಡಿ ತಿಂದ್ರೆ ವಿಶ್ವಕಪ್​ ಗೆಲ್ತೀವಿ ಅಂತಾ ಧೋನಿ ಎಷ್ಟು ನಂಬಿದ್ದರು ಅಂದರೆ, ನಾನು ರನ್​ ಹೊಡೆಯದಿದ್ದರು ಪರವಾಗಿಲ್ಲ. ಆದರೆ ಮೂಢನಂಬಿಕೆ ವರ್ಕ್​ ಆಗುತ್ತೆ ಅಂತಿದ್ದರಂತೆ. ಈ ಬಗ್ಗೆ ಸೆಹ್ವಾಗ್​ ಮಾತನಾಡಿದ್ದು, ಕೊನೆಗೂ ಧೋನಿಯ ಮೂಢನಂಬಿಕೆಯೇ ನಿಜವಾಯಿತು. ನಾವು ಫೈನಲ್​​ ಪಂದ್ಯ ಗೆದ್ದು ಇತಿಹಾಸ ರಚಿಸಿದೆವು ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2011ರಲ್ಲಿ M.S ಧೋನಿ ವಿಶ್ವಕಪ್​​ ಗೆಲ್ಲಿಸಲು ಈ ಡಿಶ್​​​​​ ಕೂಡ ಕಾರಣವಂತೆ! ಸಖತ್​ ಸ್ಟೋರಿ ಇಲ್ಲಿದೆ ನೋಡಿ

https://newsfirstlive.com/wp-content/uploads/2023/06/DHONI_RAINA_RUN-1.jpg

Load More