newsfirstkannada.com

ಧೋನಿಯೇ ದೇವರು.. ಅವರೊಬ್ಬ ‘ದೇವತಾ ಮನುಷ್ಯ’ ಅಂದ್ಬಿಟ್ರು ಸ್ಟಾರ್​ ಆಲ್​ರೌಂಡರ್​! ಯಾಕಂತೆ ಗೊತ್ತಾ?

Share :

13-09-2023

  ಧೋನಿಯನ್ನು ದೇವರಿಗೆ ಹೋಲಿಸಿ ಹೇಳಿದ್ದೇನು ಗೊತ್ತಾ..?

  ಫ್ಯಾನ್ಸ್​ ಮನ ಗೆದ್ದ ಕ್ರಿಕೆಟರ್​ಗಳಲ್ಲಿ ಧೋನಿ ಸ್ಪೆಷಲ್..!

ಸಚಿನ್​ ತೆಂಡುಲ್ಕರ್​, ಕ್ರಿಕೆಟ್​ ದೇವರು ಅನ್ನೋದನ್ನ ಇಡೀ ವಿಶ್ವವೇ ಒಪ್ಪಿದೆ. ಇಷ್ಟು ದಿನ ತೆಂಡುಲ್ಕರ್​​ರನ್ನ ಮಾತ್ರ ಕ್ರಿಕೆಟ್​ ದೇವರು ಎಂದು ಹೇಳಲಾಗ್ತಿತ್ತು. ಈಗ ಎಮ್​.ಎಸ್​ ಧೋನಿ ಕೂಡ ಕ್ರಿಕೆಟ್​ ದೇವರ ಪಟ್ಟವನ್ನ ಗಿಟ್ಟಿಸಿಕೊಂಡಿದ್ದಾರೆ.

ವಿಶ್ವದಾದ್ಯಂತ ಹಲವು ಲೆಜೆಂಡರಿ ಕ್ರಿಕೆಟಿಗರಿದ್ದಾರೆ. ಟನ್​​ಗಟ್ಟಲೇ ರನ್​ ಸಿಡಿಸಿ, ವಿಕೆಟ್ ಉರುಳಿಸಿ, ಸೆಂಚೂರಿ ಮೇಲೆ ಸೆಂಚೂರಿ ಬಾರಿಸಿ ಅಭಿಮಾನಿಗಳ ಮನ ಗೆದ್ದ ಹಲವರಿದ್ದಾರೆ. ಕ್ರಿಕೆಟ್​​ಗೆ ಗುಡ್​ ಬೈ ಹೇಳಿ 10 ಉರುಳಿದ್ರೂ, ಜನ ಮಾನಸದಲ್ಲಿ ಇಂದಿಗೂ ಅಚ್ಚಾಗಿರೋದು, ಸಚಿನ್​ ಎಂಬ ಹೆಸರಿನ ಮಾಂತ್ರಿಕ ಮಾತ್ರ.

ಮಾಸ್ಟರ್​ ಬ್ಲಾಸ್ಟರ್​ ಆಟಕ್ಕೆ ಮರುಳಾದ ಅಭಿಮಾನಿಗಳು ದೇವರಂತೆ ಆರಾಧಿಸಿದ್ದಾರೆ. ಕ್ರಿಕೆಟ್​​ ದೇವರು ಎಂದು ಕರೆದು ಕೊಂಡಾಡಿದ್ದಾರೆ. ಸಚಿನ್​ ತೆಂಡುಲ್ಕರ್​​ಗಿರೋ ಕ್ರೇಜ್​ ನೆಕ್ಸ್ಟ್​​ ಲೆವೆಲ್​ನಲ್ಲಿದೆ. ಸಚಿನ್​​ ರನ್ನ ಆರಾಧಿಸೋ ಅಭಿಮಾನಿಗಳಿಗೆ ಬರವೇ ಇಲ್ಲ.. ಇದೀಗ ಸಚಿನ್​ರಂತೆ ಮತ್ತೊಬ್ಬ ಕ್ರಿಕೆಟ್​ ದೇವರು ರೂಪುಗೊಂಡಿದ್ದಾಗಿದೆ. ಆ ದೇವತಾ ಮನುಷ್ಯನೇ ಮಹೇಂದ್ರ ಸಿಂಗ್​ ಧೋನಿ…

ದೇವತಾ ಮನುಷ್ಯ ಧೋನಿ..!

28 ವರ್ಷಗಳ ಬಳಿಕ ಕೋಟ್ಯಾಂತರ ಭಾರತೀಯರು ಕನಸು ನನಸು ಮಾಡಿದ ಕ್ಯಾಪ್ಟನ್​ MS ಧೋನಿಗೆ ಅಭಿಮಾನಿಗಳ ಮನದಲ್ಲಿ ವಿಶೇಷವಾದ ಸ್ಥಾನವಿದೆ. ಧೋನಿಯ ಆಟಕ್ಕೆ, ನಾಯಕತ್ವಕ್ಕೆ, ಸರಳತೆಗೆ, ಜೀವನಶೈಲಿಗೆ ಮಂತ್ರಮಗ್ದರಾದ ಅಭಿಮಾನಿಗಳ ಸಂಖ್ಯೆ ಲೆಕ್ಕಕ್ಕಿಲ್ಲ. ಧೋನಿ ನಡೆ, ನುಡಿಗೆ ಮಾರು ಹೋಗಿರುವ ಫ್ಯಾನ್ಸ್​, ಇದೀಗ ದೇವರ ಪಟ್ಟವನ್ನೂ ಕೊಟ್ಟಿದ್ದಾರೆ. ಇದು ನಾವು ಹೇಳ್ತಿರೋ ಮಾತಲ್ಲ.. ಅಥವಾ ಭಾರತದ ಮಾಜಿ ಕ್ರಿಕೆಟರೋ, ಅಥವಾ ಕ್ರಿಕೆಟ್​ ಎಕ್ಸ್​​ಪರ್ಟ್​​ಗಳು ಹೇಳಿರೋ ಮಾತಲ್ಲ. ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಮನದ ಮಾತು.

ಎಮ್​.ಎಸ್.ಧೋನಿ ದೇವರಿದ್ದಂತೆ. ಚೆನ್ನೈ ಸ್ಟೇಡಿಯಂನಲ್ಲಿ ಧೋನಿ ನಡೆದುಕೊಂಡು ಬರುತ್ತಿದ್ದಾಗ, ಅಭಿಮಾನಿಗಳ ಚಿಯರ್ಸ್​ಗೆ ನಾನು ಮಂತ್ರಮುಗ್ಧಗೊಂಡಿದ್ದೆ. ಆತ ನಿಜಕ್ಕೂ ಅತ್ಯುತ್ತಮ ವ್ಯಕ್ತಿ-ಕ್ಯಾಮರೂನ್​ ಗ್ರೀನ್

ಕ್ಯಾಮರೂನ್​ ಗ್ರೀನ್​ ಹೇಳಿದ ಮಾತು ಅಕ್ಷರಶಃ ಸತ್ಯ. ಹುಟ್ಟಿದ್ದು ರಾಂಚಿಯಲ್ಲಾದ್ರೂ, ಧೋನಿ ತಮಿಳು ನಾಡಿನ ಮನೆ ಮಗನಾಗಿ ಬಿಟ್ಟಿದ್ದಾರೆ. ಚೆಪಾಕ್​ ಮೈದಾನದಲ್ಲಿ ಧೋನಿ ಪ್ಯಾಡ್​ ಕಟ್ಟಿ ಮೈದಾನಕ್ಕಿಳಿದ್ರೆ, ಅಲ್ಲಿ ಸಿಗೋ ಸ್ವಾಗತ ನಿಜಕ್ಕೂ ನೆಕ್ಸ್ಟ್​ ಲೆವೆಲ್​. ಚೆನ್ನೈ ಸ್ಟೇಡಿಯಂನಲ್ಲಿ ಮಾತ್ರವಲ್ಲ.. ಇಡೀ ದೇಶದ ಯಾವುದೇ ಮೂಲೆಗೂ ಹೋದರೂ ದೇವ ಮಾನವ ಧೋನಿಗೆ ಅದ್ದೂರಿ ಸ್ವಾಗತ ಸಿಕ್ಕಿತ್ತು.

ಐಪಿಎಲ್ ಸೀಸನ್​-16ರಲ್ಲಿ ಧೋನಿಗೆ ಸಿಕ್ಕ ಬೆಂಬಲ ನಿಜಕ್ಕೂ ಅದ್ಭುತ. ಯಾಕಂದ್ರೆ ಇದು ಕೇವಲ ಬೆಂಬಲ ಮಾತ್ರವೇ ಆಗಿರಲಿಲ್ಲ. ಧೋನಿ ಮೇಲಿನ ಪ್ರೀತಿ, ಅಭಿಮಾನ, ಅಪ್ಯಾಯತೆಯನ್ನೂ ತೋರುವಂತಿತ್ತು. ಧೋನಿಯ ಸಾಧನೆಗೆ ಅಭಿಮಾನಿಗಳು ಕೊಟ್ಟ ಪ್ರೀತಿಯ ಕೊಡುಗೆ ಅಂದ್ರೂ ತಪ್ಪಾಗಲ್ಲ. ಈಗ ಕ್ಯಾಮರೂನ್​ ಗ್ರೀನ್​ ಧೋನಿ ದೇವರಿದ್ದಂತೆ ಎಂದು ಹೇಳಿದ್ದರಲ್ಲಿ ಆಶ್ಚರ್ಯ ಪಡುವಂತದ್ದೂ ಏನು ಇಲ್ಲ.

ಯಾಕಂದ್ರೆ, 15 ವರ್ಷಗಳ ಕಾಲ ಟೀಮ್ ಇಂಡಿಯಾ ಪರ ಆಟಗಾರನಾಗಿ, ನಾಯಕನಾಗಿ ಆಡಿದ್ದ ಧೋನಿ ಎಂದೂ ಅಂಕಿಸಂಖ್ಯೆಗಳ ಹಿಂದೆ ಬಿದ್ದ ಆಟಗಾರನಲ್ಲ. ನಿಸ್ವಾರ್ಥ ಸೇವಕನಾಗಿ ದುಡಿದ ಮಾಹಿ, ಹಲವು ಅವಿಸ್ಮರಣೀಯ ಗೆಲವುಗಳ ರೂವಾರಿ. ಆಟಗಾರನಾಗಿ, ನಾಯಕನಾಗಿ ಮಾಹಿ ಮಾಡಿದ ಸಾಧನೆಗಳು, ಭಾರತದ ಗರಿಮೆಯನ್ನ ಮತ್ತಷ್ಟು ಎತ್ತರಕ್ಕೇರಿಸಿದೆ. ಇಂಥಹ ಮಾಹಿ, ಭಾರತೀಯ ಕ್ರಿಕೆಟ್​ನ 2ನೇ ಗಾಡ್ ಎನ್ನೋದ್ರಲ್ಲಿ ತಪ್ಪೇನಿದೆ.

ಮಹೇಂದ್ರ ಸಿಂಗ್ ಧೋನಿ ಗ್ರೇಟ್​​​​ ಫಿನಿಷರ್​​, ಕ್ವಿಕ್ಕೆಸ್ಟ್​ ವಿಕೆಟ್​ ಕೀಪರ್​, ಚಾಣಾಕ್ಷ ಕ್ಯಾಪ್ಟನ್​​. ಒಟ್ಟಾರೆಯಾಗಿ ದಿ ಬೆಸ್ಟ್​ ಕ್ರಿಕೆಟರ್ ಅನ್ನೋದ್ರಲ್ಲಿ ನೋ ಡೌಟ್​.! ಆದ್ರೆ, ಕ್ರಿಕೆಟ್​ನ ಹೊರತಾಗಿ ಧೋನಿಯ ತನ್ನ ನಡೆ, ನುಡಿ ನಿಜಕ್ಕೂ ಅನುಕರಣೀಯ. ಈ ಎರಡೂ ಕಾರಣದಿಂದಲೇ ಮಹೇಂದ್ರ ಇಂದು ದೇವಮಾನವನಾಗಿರೋದು.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧೋನಿಯೇ ದೇವರು.. ಅವರೊಬ್ಬ ‘ದೇವತಾ ಮನುಷ್ಯ’ ಅಂದ್ಬಿಟ್ರು ಸ್ಟಾರ್​ ಆಲ್​ರೌಂಡರ್​! ಯಾಕಂತೆ ಗೊತ್ತಾ?

https://newsfirstlive.com/wp-content/uploads/2023/06/IPL_DHONI.jpg

Load More