ಐಪಿಎಲ್ನಲ್ಲಿ ಎಂಎಸ್ ಧೋನಿ ಬ್ಯಾಟ್ ಬೀಸೋದು ಪಕ್ಕಾ
ಧೋನಿ ಅನ್‌ಕ್ಯಾಪ್ಡ್ ಮಾಡುವ ಬಗ್ಗೆ ದೊಡ್ಡ ಅಪ್‌ಡೇಟ್ ಸಿಕ್ಕಿದೆ
ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಬಿಗ್ ಪ್ಲಾನ್
ಇತ್ತೀಚೆಗೆ ಬಿಸಿಸಿಐ ಮತ್ತು ಐಪಿಎಲ್ ತಂಡದ ಮಾಲೀಕರೊಂದಿಗೆ ಸಭೆ ನಡೆದಿತ್ತು. ಆ ಸಭೆಯಲ್ಲಿ ಎಂಎಸ್ ಧೋನಿ ಅವರನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಘೋಷಿಸುವ ಕುರಿತು ಚರ್ಚಿಸಲಾಗಿದೆ. ಆಗ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಮಾಲೀಕ ಕಾವ್ಯಾ ಮಾರನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಧೋನಿಯನ್ನು ಅನ್‌ಕ್ಯಾಪ್ಡ್ ಆಟಗಾರನನ್ನಾಗಿ ಮಾಡುವ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ.
ಧೋನಿ ಸಂಭಾವನೆ ಕಡಿಮೆ ಆಗುತ್ತಾ?
ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ವರದಿಗಳ ಪ್ರಕಾರ.. ಬಿಸಿಸಿಐ ಹಳೆಯ ನಿಯಮವನ್ನು ಮರಳಿ ತರಬಹುದು. ಈ ನಿಯಮದ ಪ್ರಕಾರ ಎಂಎಸ್ ಧೋನಿ ಅನ್ ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಯುತ್ತಾರೆ. ಐಪಿಎಲ್ 2025ರಲ್ಲಿ ಧೋನಿ ಖಂಡಿತವಾಗಿಯೂ ಆಡುವುದನ್ನು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ:ಗಗನಚುಂಬಿ ಸಿಕ್ಸರ್ ಬಾರಿಸಿದ ದ್ರಾವಿಡ್ ಪುತ್ರ; ಅದ್ಭುತ ಸಿಕ್ಸರ್ನ ವಿಡಿಯೋ ಇಲ್ಲಿದೆ..!
ಈ ನಿಯಮ ಹಿಂದೆಯೂ ಅಸ್ತಿತ್ವದಲ್ಲಿತ್ತು. ಆದರೆ ಈಗ ಅದನ್ನು ಮರಳಿ ತರುವ ಬಗ್ಗೆ ಚರ್ಚೆ ಆರಂಭವಾಗಿದೆ. ಕ್ಯಾಪ್ಡ್ ಆಟಗಾರನಾಗಿದ್ದಾಗ ಧೋನಿ ಸಿಎಸ್‌ಕೆಯಿಂದ ಪ್ರತಿ ಸೀಸನ್‌ಗೆ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಅವರನ್ನು ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಇರಿಸಿದರೆ ಅವರ ಸಂಭಾವನೆಯು 4 ಕೋಟಿ ರೂಪಾಯಿಗೆ ಇಳಿಯಬಹುದು.
ಅನ್‌ಕ್ಯಾಪ್ಡ್ ಪ್ಲೇಯರ್ ನಿಯಮ ಏನು?
ಒಬ್ಬ ಆಟಗಾರ ನಿವೃತ್ತಿಯಾಗಿ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳು ಕಳೆದಿದ್ದರೆ, ನಂತರ ಅವನನ್ನು ಕ್ಯಾಪ್ಡ್ ಆಟಗಾರನಿಂದ ಅನ್‌ಕ್ಯಾಪ್ಡ್ ಆಟಗಾರನಾಗಿ ಪರಿವರ್ತಿಸಬಹುದು. ಈ ನಿಯಮವು ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನಿಂದ 2021 ರವರೆಗೆ ಜಾರಿಯಲ್ಲಿತ್ತು. ಯಾವುದೇ ತಂಡವು ಇದನ್ನು ಬಳಸದ ಕಾರಣ 2022ರಲ್ಲಿ ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ:ಪಾಂಡ್ಯಗೆ ಇಲ್ಲ ಎಕ್ಸ್ಕ್ಯೂಸ್.. ರೋಹಿತ್ ಇಟ್ಟ ಷರತ್ತು ಒಪ್ಪಿಕೊಂಡ MI..? ಭಾರೀ ಬದಲಾವಣೆ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್