newsfirstkannada.com

ಪಾಂಡ್ಯ ಮೈಂಡ್​​ ಜೊತೆ ಆಟವಾಡಿದ ಧೋನಿ.. ವಿಕೆಟ್ ಕೀಳಲು MSD ಮಾಡಿದ ಮ್ಯಾಜಿಕ್ ಏನು ಗೊತ್ತಾ..? Video

Share :

Published May 24, 2023 at 3:09pm

Update September 25, 2023 at 10:34pm

    ಪಾಂಡ್ಯ ಮೈಂಡ್​​ ಜೊತೆ ಆಟವಾಡಿದ ಧೋನಿ!

    ವಿಕೆಟ್ ಕೀಳಲು MSD ಮಾಡಿದ ಮ್ಯಾಜಿಕ್ ಏನು?

    ಗುಜರಾತ್ ಟೈಟನ್ಸ್​ ತಂಡವನ್ನು ಬಗ್ಗು ಬಡಿದ ಚೆನ್ನೈ

ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ತಂಡವನ್ನು ಬಗ್ಗು ಬಡಿದು ಚೆನ್ನೈ ಸೂಪರ್ ಕಿಂಗ್ಸ್​ ಫೈನಲ್ ಪ್ರವೇಶ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಸಿಎಸ್​ಕೆ 172 ರನ್​ಗಳನ್ನು ಬಾರಿಸಿತ್ತು. 173 ರನ್​​ಗಳ ಗುರಿಯನ್ನು ಬೆನ್ನು ಹತ್ತಿದ್ದ ಗುಜರಾತ್ ಟೈಟನ್ಸ್​ 20 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 157 ರನ್​ಗಳಿಸಿ ಸೋಲಿಗೆ ಶರಣಾಯ್ತು.

ಸಿಎಸ್​ಕೆ ಫೈನಲ್ ಪ್ರವೇಶ ಬೆನ್ನಲ್ಲೇ, ಸೋಶಿಯಲ್ ಮೀಡಿಯಾದಲ್ಲಿ ಧೋನಿ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯರನ್ನು ಔಟ್​ ಮಾಡಿದ ವಿಡಿಯೋ ವೈರಲ್ ಆಗ್ತಿದೆ. 8 ರನ್​ಗಳನ್ನು ಬಾರಿಸಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸೂಚನೆಯನ್ನು ಪಾಂಡ್ಯ ನೀಡಿದ್ದರು. ಹೇಗಾದರೂ ಮಾಡಿ ವಿಕೆಟ್ ಕೀಳಬೇಕು ಎಂದು ಯೋಚಿಸುತ್ತಿದ್ದ ಧೋನಿ, ಪಾಂಡ್ಯ ಕ್ರೀಸ್​ಗೆ ಬರ್ತಿದ್ದಂತೆ ಫೀಲ್ಡಿಂಗ್​​ನಲ್ಲಿ ಬದಲಾವಣೆ ಮಾಡ್ತಾರೆ. ಪಾಂಡ್ಯ ಯಾವ ಕಡೆ ಹೊಡೆಯುತ್ತಾರೆ ಅನ್ನೋದನ್ನು ಅರ್ಥೈಸಿಕೊಂಡ ಧೋನಿ, ಜಡೇಜಾ ಅವರ ಫೀಲ್ಡ್ ಬದಲಾಯಿಸುತ್ತಾರೆ.

backward-square ನಿಂದ backward-pointಗೆ ಜಡೇಜಾರನ್ನು ತಂದು ನಿಲ್ಲಿಸುತ್ತಾರೆ. ಧೋನಿ ಪ್ಲಾನ್​ನಂತೆಯೇ ತೀಕ್ಷಣ ಎಸೆದ ಬಾಲ್​​ಗೆ ಹೊಡೆಯುವ ಪ್ರಯತ್ನದಲ್ಲಿದ್ದ ಪಾಂಡ್ಯ, ಜಡೇಜಾಗೆ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿದರು. ಪವರ್​ ಪ್ಲೇ ಕೊನೆಯ ಓವರ್​ನಲ್ಲಿ ಧೋನಿ ಈ ಮ್ಯಾಜಿಕ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಂಡ್ಯ ಮೈಂಡ್​​ ಜೊತೆ ಆಟವಾಡಿದ ಧೋನಿ.. ವಿಕೆಟ್ ಕೀಳಲು MSD ಮಾಡಿದ ಮ್ಯಾಜಿಕ್ ಏನು ಗೊತ್ತಾ..? Video

https://newsfirstlive.com/wp-content/uploads/2023/05/MS_DHONI.jpg

Load More