ಧೋನಿ ಸರಳತೆಗೆ ಫ್ಯಾನ್ ಆಗೋದು ಗ್ಯಾರಂಟಿ
ಮಾಹಿಯ ಹೃದಯ ವೈಶಾಲ್ಯತೆಗೆ ಅಧಿಕಾರಿ ಫಿದಾ
ಎಂಥವರಿಗೂ ಧೋನಿ ಸ್ಫೂರ್ತಿ, ಮಾದರಿ ಯಾಕೆ..?
ಮಹೇಂದ್ರ ಸಿಂಗ್ ಧೋನಿ. ಟೀಮ್ ಇಂಡಿಯಾದ ಸಕ್ಸಸ್ಫುಲ್ ಕ್ಯಾಪ್ಟನ್ ಮಾತ್ರವಲ್ಲ. ವಿಶ್ವದ ಶ್ರೇಷ್ಠ ಕ್ಯಾಪ್ಟನ್ ಅನ್ನೋದು ಎಲ್ಲರಿಗೂ ಗೊತ್ತಿದೆ. ದಾಖಲೆಗಳ ಮೇಲೆ ದಾಖಲೆ ಬರೆದು ವಿಶ್ವವನ್ನೇ ಗೆದ್ದಿರುವ ಮಾಹಿ, ಸರಳತೆಯ ಸರದಾರ. ಈ ಹಿಂದೆ ಸಾಕಷ್ಟು ಸಲ ಧೋನಿಯ ಸರಳತೆಯನ್ನ ನಾವು ನೋಡಿದ್ದೇವೆ. ನೀವು ಕೇಳಿದ್ದೀರಿ.. ಈಗ ಹೊಸದಾಗಿ 2 ಘಟನೆಗಳು ಮತ್ತೆ ಮಾಹಿಯ ಮಹಿಮೆ ತಿಳಿಸಿವೆ.
ಮಹೇಂದ್ರ ಸಿಂಗ್ ಧೋನಿ.. ದಿ ಗ್ರೇಟ್ ಲೀಡರ್.. ಹೆಸರಿಗೆ ಇರೋ ಕ್ರೇಜ್. ಇರೋ ಫ್ಯಾನ್ ಫಾಲೋಯಿಂಗ್.. ಊಹಿಸಲೂ ಅಸಾಧ್ಯ.. ಧೋನಿಯನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕು.. ಆಟೋಗ್ರಾಫ್ ಪಡೀಬೇಕು, ಒಮ್ಮೆ ಮೀಟ್ ಮಾಡಿದ್ರೆ ಸಾಕು, ಜನ್ಮ ಸಾರ್ಥಕ ಅಂತಾನೇ ಹವಣಿಸುವ ಫ್ಯಾನ್ಸ್ಗೆ ಲೆಕ್ಕವೇ ಇಲ್ಲ.
ನಮ್ಮ ದೇಶದಲ್ಲೇ ಅಲ್ಲ. ವಿಶ್ವದಾದ್ಯಂತ ಧೋನಿಯ ಜಪ ಮಾಡೋ ಅಭಿಮಾನಿಗಳ ದಂಡೇ ಇದೆ. ಒಂದರ್ಥದಲ್ಲಿ ಮಾಹಿ ವಿಶ್ವಮಾನವ ಆಗಿ ಬಿಟ್ಟಿದ್ದಾರೆ. ಕ್ರಿಕೆಟ್ ಮಾತ್ರವಲ್ಲ.. ಧೋನಿಯ ನಡೆ ನುಡಿ ಕೂಡ ಅಪಾರ ಪ್ರೀತಿಯ ಸೀಕ್ರೆಟ್. ಫ್ಯಾನ್ಸ್ ಮಾಹಿಯನ್ನು ಎಷ್ಟು ಪ್ರೀತಿಸಿ, ಆರಾಧಿಸ್ತಾರೋ ಧೋನಿ ಕೂಡ ಅಷ್ಟೇ ಅಭಿಮಾನದಿಂದ ಫ್ಯಾನ್ಸ್ನ ಕಾಣ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಈ ಎರಡು ಘಟನೆಗಳು.
ನಾನೇ ಧನ್ಯ.. ಧೋನಿ ಆಶೀರ್ವಾದ ಪಡೆದ ಅಭಿಮಾನಿ
ಮಹಿಳಾ ಅಭಿಮಾನಿಯೊಬ್ಬರು ಧೋನಿಯನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ. ಧೋನಿ ಮೇಲೆ ಗೌರವ ತೋರಿಸಲು ಧೋನಿ ಅವರ ಕಾಲುಗಳನ್ನು ಸ್ಪರ್ಶಿಸುತ್ತಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಧೋನಿ ಅವರು ಎಲ್ಲಾ ಅಭಿಮಾನಿಗಳಿಗೆ ಮಾಡುವಂತೆ ಹಸ್ತಲಾಘವ ಮಾಡಿ ನಗುವಿನೊಂದಿಗೆ ಉತ್ತರಿಸುವ ಹಾಗೆ ಈ ಅಭಿಮಾನಿಗೂ ಪ್ರತಿಕ್ರಿಯಿಸಿದರು. ಭಾರತೀಯ ಕ್ರಿಕೆಟ್ನ ಈ ಮೇರು ಶಿಖರ ಧೋನಿ ಸರಳತೆಯ ಸರದಾರ.. ಮಾಹಿಯ ಸಿಂಪ್ಲಿಸಿಟಿಗೆ ಹಲವು ನಿದರ್ಶನಗಳು ನಮ್ಮ ಮುಂದಿವೆ. ಈಗ ಹೇಳ್ತಿರೋದು ಸಿಂಪ್ಲಿಸಿಟಿಯಿಂದ ಹಲವರನ್ನ ಮಂತ್ರ ಮುಗ್ದಗೊಳಿಸಿರುವ ಮಾಹಿಯ ಮತ್ತೊಂದು ಕಥೆ. ಇದು ಜಸ್ಟ್ ಕಥೆಯಲ್ಲ ಇತರರಿಗೆ ಸ್ಪೂರ್ತಿ ಚಿಲುಮೆ ಹಾಗೂ ಜೀವನದ ಪಾಠ.
ಎಮ್.ಎಸ್.ಧೋನಿ ನಡೆಗೆ ಯೋಧನ ಬಹುಪರಾಕ್
ಧೋನಿಯ ಸಿಂಪ್ಲಿಸಿಟಿಗೆ ಸಿಕ್ಕಿರೋ ಹೊಸ ಉದಾಹರಣೆಯಿದು. ರಾಂಚಿ ವಿಮಾನ ನಿಲ್ದಾಣದಲ್ಲಿ ಯೋಧರೊಬ್ಬರು ಧೋನಿಯನ್ನ ಭೇಟಿಯಾಗಿದ್ರು. ಆ ಒಂದು ಭೇಟಿಯಲ್ಲೇ ಮಾಹಿ ವ್ಯಕ್ತಿತ್ವಕ್ಕೆ ಸಿಐಎಸ್ಎಫ್ ಅಧಿಕಾರಿ ಸತೀಶ್ ಪಾಂಡೆ, ಮಾರು ಹೋಗಿದ್ದಾರೆ. ಆ ಭೇಟಿಯ ಕ್ಷಣವನ್ನ ಪದಗಳಲ್ಲಿ ಬಣ್ಣಿಸಿದ್ದಾರೆ.
ಯೋಧನ ಪತ್ರ
ದಿನಾಂಕ: ಆಗಸ್ಟ್ 26, 2023
ಸಮಯ: ಸಂಜೆ 04:45
ಸ್ಥಳ: ವಿಐಪಿ ಲೌಂಜ್
ರಾಂಚಿ ವಿಮಾನ ನಿಲ್ದಾಣ
ರಾಂಚಿ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಧೋನಿ ಜೊತೆಗಿನ ಭೇಟಿ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವ ಅನುಭವ. ಈ ಭೇಟಿ ಸ್ಫೂರ್ತಿದಾಯಕ ಹಾಗೂ ಮರೆಯಲಾಗದ ಕ್ಷಣ. ಈ ಅವಕಾಶ ಸಿಕ್ಕಿದ್ದಕ್ಕೆ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಾನು ರೂಮ್ಗೆ ಪ್ರವೇಶಿಸುತ್ತಿದ್ದಂತೆ, ಒಂದು ಕ್ಷಣ ದಂಗಾಗಿದ್ದೆ. ಧೋನಿ ಮುಖದಲ್ಲಿನ ಮಂದಹಾಸ. ನಗು ಮುಖದ ಸ್ವಾಗತ ನಂಬಲು ಅಸಾಧ್ಯವಾಗಿತ್ತು. ನನಗೆ ನೀಡಿದ ಆತಿಥ್ಯ ನಿಜಕ್ಕೂ ಅಸಾಧಾರಣ. ಇದು ವಿಭಿನ್ನ ಅನುಭವ. ಈ ಅತಿಥ್ಯ ಅಕ್ಷರಶಃ ರೋಮಾಂಚನಗೊಳಿಸಿತ್ತು. ಧೋನಿ ಕೇವಲ ಲೆಜೆಂಡರಿ ಕ್ರಿಕೆಟಿಗನಲ್ಲ. ಶ್ರೀಮಂತಿಕೆಯ ಹೃದಯವಂತ.
ನಾನು ಜೀವನದ ಕೌಶಲ್ಯಗಳ ಬಗೆಗಿನ ಪ್ರಶ್ನೆ ಕೇಳಿದಾಗ, ಅವರ ಪ್ರತಿಕ್ರಿಯೆ ನನ್ನೊಂದಿಗೆ ಆಳವಾಗಿ ನೆಲೆಯೂರಿತು. ನನ್ನ ಮೊದಲ ಪ್ರಶ್ನೆ ಗೆಲುವು, ಸೋಲು ಮತ್ತು ಜೀವನದ ಸವಾಲುಗಳ ನಡುವೆ ಶಾಂತವಾಗಿರುವುದು ಹೇಗೆ ಎಂಬುವುದಾಗಿತ್ತು. ಧೋನಿಯ ಉತ್ತರ ಆಳ ಮತ್ತು ಸರಳವಾಗಿತ್ತು. ನಾನು ಆ ಕ್ಷಣ ಆನಂದಿಸಲು ಬಯಸುತ್ತೇನೆ. ಏಕೆಂದರೆ ಈ ಕ್ಷಣವು ಜೀವನದಲ್ಲಿ ಮತ್ತೆ ಬರುವುದಿಲ್ಲ. ಅವರ ಉತ್ತರ ಬುದ್ಧಿವಂತಿಕೆಯನ್ನ ಪ್ರತಿಬಿಂಬಿಸುತ್ತಿತ್ತು. ನೀವು ನಿಮ್ಮ ಜೀವನವನ್ನ ಹೇಗೆ ಬದುಕಲು ಬಯಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ನಿಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳನ್ನು ಬಿಟ್ಟುಬಿಡಿ. ಅವು ನಿಮಗೆ ನೋವುಂಟು ಮಾಡುತ್ತದೆ. ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತೆ. ನೀವು ಈಗ ಇರುವ ಕೆಲಸವನ್ನು ಅತ್ಯುತ್ತಮವಾಗಿ ಮಾಡಿ. ಆಂತರಿಕ ಶಾಂತಿ ಕಾಪಾಡಿಕೊಳ್ಳಲು ವೈಯಕ್ತಿಕ ಬೆಳವಣಿಗೆ ಬಗ್ಗೆ ಹೆಚ್ಚು ಮಹತ್ವ ನೀಡಬೇಕು.
ತನ್ನನ್ನು ತಾನು ವೃದ್ಧಿಸಿಕೊಳ್ಳಬೇಕು. ಕ್ರೀಡಾಪಟುವಾಗಿ ಈ ವಿಚಾರ ನನ್ನಲ್ಲಿ ಅಂತರ್ಗತವಾಗಿದೆ. ಈ ಹೇಳಿಕೆ ಧೋನಿಯ ಸಂಕಲ್ಪವನ್ನ ಸೂಚಿಸಿತ್ತು. ನಮ್ಮ ಸಂಭಾಷಣೆ ಕೊನೆಗೊಳ್ಳುತ್ತಿದ್ದಂತೆ, ಅವರ ಅಮೂಲ್ಯ ಸಲಹೆಗಾಗಿ ನಾನು ಕೃತಜ್ಞತೆ ವ್ಯಕ್ತಪಡಿಸಿದೆ. ನನ್ನ ಮೇಲೆ ಅದರ ಪ್ರಭಾವವು ಅಳೆಯಲಾಗದು. ಧೋನಿ ಸರ್, ಬುದ್ಧಿವಂತಿಕೆ ಮತ್ತು ನಿಜವಾದ ನಡವಳಿಕೆ. ನನ್ನ ಜೀವನದ ದೃಷ್ಟಿಕೋನದ ಮೇಲೆ ಅಳಿಸಲಾಗದ ಹೆಜ್ಜೆ ಗುರುತು. ಆ ಕ್ಷಣ ಅವರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ನಾನು ಸ್ಫೂರ್ತಿ ಮತ್ತು ಆಶೀರ್ವಾದ ಎರಡನ್ನೂ ಅನುಭವಿಸಿದೆ. ಥ್ಯಾಂಕ್ಸ್ ಮಿಲಿಯನ್ ಮಾಹಿ–ಸತೀಶ್ ಪಾಂಡೆ, SI CISF
ಮಾತಲ್ಲಿ ಆಡಲಾಗದ ಭಾವನೆಯನ್ನ ಯೋಧ ಬರಹದಲ್ಲಿ ತಿಳಿಸಿರುವ ರೀತಿಯಿದು. ಈ ಪತ್ರ, ಇದರಲ್ಲಿ ಬಳಸಿರುವ ಪದಗಳು, ಇದ ಸಾರಾಂಶವೇ ಧೋನಿ ಆ ಯೋಧನೊಂದಿಗೆ ನಡೆದುಕೊಂಡ ಕ್ಷಣವನ್ನ ಕಣ್ಮುಂದೆ ಬರುವಂತೆ ಮಾಡುತ್ತವೆ. ಧೋನಿಯ ಸರಳ ವ್ಯಕ್ತಿತ್ವ ಹಾಗೂ ಜೀವನ ಸೂತ್ರವನ್ನೂ ಇದೇ ಪತ್ರ ತಿಳಿಸ್ತಾಯಿದೆ. ಸರಳವಾಗಿ ಬದುಕೋದು ಅಷ್ಟು ಸುಲಭದ ವಿಚಾರದಲ್ಲ. ಅದ್ರಲ್ಲೂ ಯಶಸ್ಸಿನ ಉತ್ತುಂಗವನ್ನ ನೋಡಿ, ವಿಶ್ವಾದ್ಯಂತ ಕೀರ್ತಿ ಸಂಪಾದಿಸಿ, ಅಪಾರ ಅಭಿಮಾನಿಗಳನ್ನ ಹೊಂದಿ, ಆರ್ಥಿಕವಾಗಿಯೋ ಕೋಟಿ ಒಡೆಯನಾದ ಮೇಲೂ ಸರಳವಾಗಿ ಬದೋಕೋದು ಇದ್ಯಲ್ಲ. ಅದು ತಪಸ್ಸು ಮಾಡಿದಂತೆ. ಈ ವಿಚಾರದಲ್ಲಿ ಧೋನಿಗೆ ಧೋನಿಯೇ ಸಾಟಿ.
A fan touched MS Dhoni's feet upon meeting her idol.
An icon – MS…!! pic.twitter.com/RPaqFZv8xm
— Mufaddal Vohra (@mufaddal_vohra) August 27, 2023
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್