newsfirstkannada.com

ವಿಶ್ವಕಪ್​ ಗೆಲ್ಲಲು ಟೀಮ್​ ಇಂಡಿಯಾಗೆ ಮೆಂಟರ್​ ಆಗ್ತಾರಾ ಮಹೇಂದ್ರ ಸಿಂಗ್​ ಧೋನಿ.. BCCI ನೂತನ ಪ್ಲಾನ್​ ಏನು?

Share :

01-07-2023

  ಧೋನಿ ಬಂದ್ರೆ ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲುವುದು ಪಕ್ಕಾ

  ತಂಡಕ್ಕೆ ಧೋನಿ ಬಂದರೆ ಕೋಚ್​ ದ್ರಾವಿಡ್​ ಭಾರ ಕಡಿಮೆ ಆಗುತ್ತೆ

  ಹೆಚ್ಚಿದ ಒತ್ತಡ, ಕೂಲ್​ ಕ್ಯಾಪ್ಟನ್ ಧೋನಿಯೆ​ ಭಾರತಕ್ಕೆ ಪರಿಹಾರ

ವಿಶ್ವಕಪ್​ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ತವರಿನಲ್ಲಿ ನಡೆಯಲಿರುವ ಈ ಟೂರ್ನಿ ಪ್ರತಿಷ್ಟೆಯ ಕಣ. ಶತಾಯಗತಾಯ ಚಾಂಪಿಯನ್​ ಆಗಲೆಬೇಕು ಎಂದು ಬಿಸಿಸಿಐ ಪಣ ತೊಟ್ಟಿದೆ. ಇದಕ್ಕಾಗಿ ಮಾಸ್ಟರ್​ ಧೋನಿಯ ಮೊರೆ ಹೋಗಿದೆ.

ಏಕದಿನ ವಿಶ್ವಕಪ್​ ಟೂರ್ನಿಗೆ ಇನ್ನು 96 ದಿನ ಮಾತ್ರ ಬಾಕಿ. ತವರಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಐಸಿಸಿ ಟ್ರೋಫಿ ಗೆಲುವಿನ ಬರಕ್ಕೆ ಬ್ರೇಕ್​ ಹಾಕಲು ಟೀಮ್​ ಇಂಡಿಯಾ ಪಣ ತೊಟ್ಟಿದೆ. ಆದ್ರೆ, ಅದು ಅಷ್ಟು ಸುಲಭಕ್ಕಿಲ್ಲ.. ವೇಳಾಪಟ್ಟಿಯನ್ನ ನೋಡಿದ್ರೆ, ಸೆಮಿಸ್​​ ತಲುಪುವುದು ಕಷ್ಟದ ಹಾದಿಯಾಗಿದೆ.

ಪ್ರತಿಷ್ಠೆಯ ವಿಶ್ವಕಪ್​ ಗೆಲ್ಲಲು ಬಿಸಿಸಿಐ ಮಾಸ್ಟರ್​ ಪ್ಲಾನ್​.!

ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಸಿದ್ಧತೆ ಜೋರಾಗಿವೆ. ಟೂರ್ನಿ ಆಯೋಜನೆಗಿಂತ, ಕಪ್​ ಗೆಲುವಿನ ಹಂಬಲ ಹೆಚ್ಚಾಗಿದೆ. ಐಸಿಸಿ ಟೂರ್ನಿಗಳಲ್ಲಿ 10 ವರ್ಷಗಳಿಂದಾದ ಸೋಲು, ಅವಮಾನಗಳಿಗೆ ಉತ್ತರ ಕೊಡೋಕೆ ಇದೇ ಬೆಸ್ಟ್​ ವೇದಿಕೆ. ತವರಿನಲ್ಲೇ ಟೂರ್ನಿ ನಡೆತ್ತಿರುವುದರಿಂದ ಇದು ಬಿಸಿಸಿಐ ಬಾಸ್​ಗಳ ಪಾಲಿಗೆ ಪ್ರತಿಷ್ಟೆಯ ಕಣವಾಗಿದೆ. ಹೀಗಾಗಿ ಟ್ರೋಫಿ ಗೆಲುವಿಗೆ ಬ್ಲ್ಯೂಪ್ರಿಂಟ್​​ ರೂಪಿಸ್ತಿರೋ ಬಿಸಿಸಿಐ, ಮಾಸ್ಟರ್​ ಪ್ಲಾನ್ ಒಂದನ್ನ ರೂಪಿಸಿದೆ.

ಮಹೇಂದ್ರನ ಮೊರೆ ಹೋಗಲು ಮುಂದಾದ ಬಾಸ್​​ಗಳು.!

12 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವಕಪ್​ ಟೂರ್ನಿ ನಡೆಯುತ್ತಿದೆ. ಇದು ಸಹಜವಾಗಿ ಅಭಿಮಾನಿಗಳ ಎಕ್ಸೈಟ್​​ಮೆಂಟ್​​ ಹೆಚ್ಚಿಸಿದೆ. ಅಂದು ಧೋನಿ ನೇತೃತ್ವದ ತಂಡ ಇತಿಹಾಸ ಜಯಿಸಿದಂತೆ, ಇಂದು ರೋಹಿತ್​ ಪಡೆ ಗೆದ್ದು ಬೀಗುತ್ತೆ ಎಂಬ ನಿರೀಕ್ಷೆ ಫ್ಯಾನ್ಸ್​ದ್ದಾಗಿದೆ. ಈ ನಿರೀಕ್ಷೆಯ ಭಾರವೇ ಆಟಗಾರರನ್ನ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಪರಿಹಾರ ಹುಡುಕ್ತಿರೋ ಬಿಸಿಸಿಐ, ಮಾಜಿ ನಾಯಕನ ಎಮ್​.ಎಸ್​ ಧೋನಿಯ ಮೊರೆ ಹೋಗಲು ಚಿಂತನೆ ನಡೆಸಿದೆ.

ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾಗೆ ಮಾಹಿ ಮೆಂಟರ್​​.?

ಹೌದು.. ಬಿಸಿಸಿಐ ಪಡಸಾಲೆಯಲ್ಲಿ ಹೀಗೊಂದು ಸುದ್ದಿ ಓಡಾಡ್ತಿದೆ. ​ ಐಸಿಸಿ ಟೂರ್ನಿಯ ಇತಿಹಾಸದಲ್ಲೇ ಸಕ್ಸಸ್​​ಫುಲ್​ ಕ್ಯಾಪ್ಟನ್​ ಆಗಿರೋ ಧೋನಿಯನ್ನ, ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾಗೆ ಮೆಂಟರ್​​ ಆಗಿ ಕರೆತರುವ ಕಸರತ್ತು ಶುರುವಾಗಿದೆ. ಬಿಸಿಸಿಐ ಬಾಸ್​​ಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಶೀಘ್ರದಲ್ಲೇ ಧೋನಿಗೆ ಮುಂದೆ ಇದನ್ನ ಪ್ರಸ್ತಾಪಿಸುವ ಸಾಧ್ಯತೆಯಿದೆ.

ಈ ಬಾರಿಯ ವಿಶ್ವಕಪ್​ ಭಾರತದಲ್ಲೇ ನಡೀತಾ ಇರೋದು ತಂಡಕ್ಕೆ ಅಡ್ವಾಂಟೇಜ್​ ಆಗಿದೆ. ಆಟಗಾರರಿಗೆಲ್ಲ ತವರಿನ ಪಿಚ್​ಗಳು, ಕಂಡೀಷನ್​ ಬಗ್ಗೆ ಸ್ಪಷ್ಟ ಅರಿವಿದೆ. ಇದ್ರಿಂದ ಟೀಮ್​ ಇಂಡಿಯಾಗೆ ಗೆಲುವಿನ ಅವಕಾಶ ಹೆಚ್ಚಿದೆ. ಹಾರ್ಡ್​ ವರ್ಕ್​​, ಎಫರ್ಟ್​​​​ ಜೊತೆಗೆ ಸ್ಮಾರ್ಟ್​​ ಗೇಮ್​ ಸೇರಿದ್ರೆ, ಟ್ರೋಫಿ ಪಕ್ಕಾ ನಮ್ದೇ. ಸ್ಮಾರ್ಟ್​​ ಗೇಮ್​ ಆಡೋದ್ರಲ್ಲಿ ಧೋನಿಗಿಂತ ಪಂಟರ್​ ಯಾರಾದ್ರೂ ಇದಾರಾ ಹಾಗಾಗಿಯೇ ಬಿಸಿಸಿಐ ಮಹೇಂದ್ರ ಮೊರೆ ಹೋಗಲು ಮುಂದಾಗಿದೆ.

ಇದನ್ನು ಓದಿ: ಚಿನ್ನದ ಹುಡುಗನಿಗೆ ಮತ್ತೊಂದು ‘ಚಿನ್ನ’; ಜಾವೆಲಿನ್​ ಸ್ಟಾರ್ ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆ..!

ಕಡಿಮೆಯಾಗಲಿದೆ ದ್ರಾವಿಡ್​ ಭಾರ, ಹೆಚ್ಚಲಿದೆ ಒಗ್ಗಟ್ಟು .!​

ಒಂದು ವೇಳೆ ಧೋನಿ ಮೆಂಟರ್​ ಆಗಿ ಎಂಟ್ರಿ ಕೊಟ್ರೆ, ಹೆಡ್​ ಕೋಚ್​ ದ್ರಾವಿಡ್​ ಭಾರ ಕಡಿಮೆಯಾಗಲಿದೆ. ಗೇಮ್​ಪ್ಲಾನ್​, ಸ್ಟ್ರಾಟಜಿಗಳನ್ನ ಮಾಡಲು ನೆರವಾಗಲಿದ್ದಾರೆ. ಜೊತೆಗೆ ಈಗಾಗಲೇ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗೂ ಅದಕ್ಕೂ ಮದ್ದಾಗಲಿದ್ದಾರೆ. ಧೋನಿ ಡ್ರೆಸ್ಸಿಂಗ್​ ರೂಮ್​ನಲ್ಲಿದ್ರೆ, ರೋಹಿತ್​- ಕೊಹ್ಲಿಯಂತಹ ಸೀನಿಯರ್​ ಪ್ಲೇಯರ್​​ಗಳ ನಡುವೆ ಒಗ್ಗಟ್ಟು ಹೆಚ್ಚಾಗಲಿದೆ.

2021ರ ಟಿ20 ವಿಶ್ವಕಪ್​ ಟೂರ್ನಿ ವೇಳೆ ದಿಢೀರ್​ ಎಂಬಂತೆ ಧೋನಿ ಟೀಮ್​ ಇಂಡಿಯಾದ ಮೆಂಟರ್​ ಆಗಿ ನೇಮಕವಾಗಿದ್ರು. ಯುಎಇ & ದುಬೈನಲ್ಲಿ ನಡೆದ ಆ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಗ್ರೂಪ್​ ಸ್ಟೇಜ್​ನಲ್ಲೇ ಹೊರ ಬಿದ್ದಿತ್ತು. ಆದ್ರೆ, ಈಗ ವಿಶ್ವಕಪ್​​ ನಡೀತಾ ಇರೋದು ತವರಿನಲ್ಲಿ. ಭಾರತದ ಪಿಚ್​​ಗಳು, ಪ್ಲೇಯಿಂಗ್​ ಕಂಡಿಷನ್​.. ಎಲ್ಲದರ ಬಗ್ಗೆ ಮಾಜಿ ಕ್ಯಾಪ್ಟನ್​ ಮಾಹಿಗೆ ಇಂಚಿಚೂ ಮಾಹಿತಿ ಗೊತ್ತಿದೆ. ಹೀಗಾಗಿ ಧೋನಿ ಬಂದ್ರೆ, ಟೀಮ್​ ಇಂಡಿಯಾ ಬಲ ಹೆಚ್ಚೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಬಿಸಿಸಿಐ ಮನವಿಯನ್ನ ಮಾಹಿ ಒಪ್ತಾರಾ.? ಅನ್ನೋದೆ ಈಗ ಮಿಲಿಯನ್​ ಡಾಲರ್​ ಪ್ರಶ್ನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಗೆಲ್ಲಲು ಟೀಮ್​ ಇಂಡಿಯಾಗೆ ಮೆಂಟರ್​ ಆಗ್ತಾರಾ ಮಹೇಂದ್ರ ಸಿಂಗ್​ ಧೋನಿ.. BCCI ನೂತನ ಪ್ಲಾನ್​ ಏನು?

https://newsfirstlive.com/wp-content/uploads/2023/07/DHONI_CRICKET.jpg

Load More