Happy Birthday ಮಹೇಂದ್ರ ಸಿಂಗ್ ಧೋನಿ
ಯಾರಿಗೂ ಗೊತ್ತಿರದ 7 ಇಂಟರೆಸ್ಟಿಂಗ್ ವಿಚಾರಗಳು
ಆ ಎರಡು ಕಾರಣಗಳಿಂದ ಸಿಗಲಿಲ್ಲ ಮೊದಲ ಪ್ರೀತಿ..!
ಮಹೇಂದ್ರ ಸಿಂಗ್ ಧೋನಿ! 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಏಕೈಕ ಕ್ಯಾಪ್ಟನ್. ಹೀಗೆ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿರುವ ಮಾಜಿ ನಾಯಕನಿಗೆ, ಇಂದು ಹುಟ್ಟುಹಬ್ಬದ ಸಂಭ್ರಮ. ಈ ಬರ್ತ್ಡೇಗೆ ಸ್ಪೆಷಲ್ ವಿಶ್ ಹೇಳ್ತಾ.. ಧೋನಿ ಬಗ್ಗೆ ನಿಮಗೆ ಗೊತ್ತಿಲ್ದೇ ಇರೋ 7 ಇಂಟ್ರೆಸ್ಟಿಂಗ್ ವಿಚಾರ ಈ ಸ್ಟೋರಿಯಲ್ಲಿದೆ.
ಮಹೇಂದ್ರ ಸಿಂಗ್ ಧೋನಿ.. ವಿಶ್ವ ಕ್ರಿಕೆಟ್ನ ಗ್ರೇಟ್ ಲೀಡರ್ಗಳಲ್ಲಿ ಒಬ್ರು.. ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ.. ಭಾರತೀಯ ಕ್ರಿಕೆಟ್ಗೆ ಹೊಸ ರೂಪ ಕೊಟ್ಟ ಮಹಾನ್ ನಾಯಕ. ದಶಕಗಳ ಕಾಲ ವಿಶ್ವ ಕ್ರಿಕೆಟ್ ಆಳಿದ ದಿಗ್ಗಜ.. ಅಭಿಮಾನಿಗಳ ಪಾಲಿಗೆ, ಪಕ್ಕಾ ಎಂಟರ್ಟೈನರ್. ಎದುರಾಳಿ ತಂಡಗಳಿಗೆ ಗ್ಯಾಂಬ್ಲರ್. ಕ್ಲಾಸಿಗೂ ಸೈ, ಮಾಸಿಗೂ ಜೈ ಅನ್ನೋ ರಾಂಚಿ ರಾಂಬೋಗೆ ಇಂದು ಜನುಮ ದಿನದ ಸಂಭ್ರಮ.
ಜಾರ್ಖಂಡ್‌ನ ರಾಂಚಿಯಲ್ಲಿ ಜುಲೈ 7, 1981 ರಂದು ಜನಿಸಿದ ಧೋನಿ, ಇಂದು 42ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಕ್ಸಸ್ಫುಲ್ ನಾಯಕನ ಹುಟ್ಟುಹಬ್ಬಕ್ಕೆ ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಸ್ಪೆಷಲ್ ಡೇ ಅನ್ನ ಫ್ಯಾನ್ಸ್, ಅದ್ದೂರಿಯಾಗೇ ಸೆಲೆಬ್ರೇಟ್ ಮಾಡ್ತಿದ್ದಾರೆ. ಆದ್ರೆ ಈ ಅದ್ಭುತ ನಾಯಕನ ಕುರಿತು ಗೊತ್ತೇ ಇಲ್ಲದ ಕೆಲ ಸೀಕ್ರೆಟ್ಗಳನ್ನು ನಾವು ಇವತ್ತು ರಿವೀಲ್ ಮಾಡ್ತಿದ್ದೇವೆ.
ಮನೆಗೆ ಹೋಗೋಕೆ ಧೋನಿ ಕೈಯಲ್ಲಿ ಹಣ ಇರ್ತಿಲಿಲ್ಲ
ಧೋನಿ ಹೋಮ್ ಟೌನ್ ರಾಂಚಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ನಿಮಗೆ ಗೊತ್ತಿಲ್ಲದ ವಿಚಾರ ಏನಂದ್ರೆ ಧೋನಿ ಟೀಮ್ ಇಂಡಿಯಾಗೆ ಆಡೋಕೂ ಮುನ್ನ ರಾಂಚಿಯಲ್ಲಿ ಸ್ಟೇಡಿಯಂ ಇರಲಿಲ್ಲ. ಹೀಗಾಗಿ ನಿತ್ಯ ಪ್ರ್ಯಾಕ್ಟೀಸ್ಗಾಗಿ ಧೋನಿ ಜಮ್ಶೆಡ್ಪುರಕ್ಕೆ ತೆರಳುತ್ತಿದ್ದರು. ಸಂಜೆವರೆಗೂ ಫ್ರಾಕ್ಟೀಸ್ ಮಾಡ್ತಿದ್ದರು. ಮನೆಗೆ ವಾಪಸ್ ಆಗುವಾಗ ಧೋನಿ ಕೈಯಲ್ಲಿ ಹಣ ಇರ್ತಿಲಿಲ್ಲ. ಆಗ ಬೇರೆಯವರಿಂದ ಹಣ ಪಡೆದು ಪ್ರಯಾಣಿಸುತ್ತಿದ್ದರು.
ಧೋನಿ ಸಹ ಆಟಗಾರರ ಪಾಲಿಗೆ ಲಕ್ಕಿ ಸ್ಟಾರ್
ಕ್ರಿಕೆಟ್ನಲ್ಲಿ ಅದೆಷ್ಟೋ ದಾಖಲೆಗಳು ನಿರ್ಮಾಣವಾಗಿವೆ. ಆದ್ರೆ ಮರೆಯಲಾಗ ಹಾಗೂ ಅಸಾಧ್ಯದ ರೆಕಾರ್ಡ್ಸ್ಗೆ ಸಾಕ್ಷಿಯಾಗಿದ್ದು ಮಾತ್ರ ಎಂ.ಎಸ್. ಧೋನಿ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಹೇಳ್ತೀವಿ. ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ಸ್.. ಸಚಿನ್ ತೆಂಡುಲ್ಕರ್ ಡಬಲ್ ಸೆಂಚೂರಿ, ರೋಹಿತ್ ಶರ್ಮಾರ ಡಬಲ್ ಸೆಂಚೂರಿ, ಸುರೇಶ್ ರೈನಾರ ಚೊಚ್ಚಲ ಟಿ20 ಶತಕ. ಅಷ್ಟೇ ಯಾಕೆ, ಸಚಿನ್ ಸಿಡಿಸಿದ 50ನೇ ಟೆಸ್ಟ್ ಶತಕದ ವೇಳೆಯೂ, ಧೋನಿ ನಾನ್ ಸ್ಟ್ರೈಕರ್ ಬ್ಯಾಟ್ಸ್ಮನ್ ಆಗಿದ್ದರು. ಧೋನಿ ಸಹ ಆಟಗಾರರ ಪಾಲಿಗೆ ಲಕ್ಕಿ ಸ್ಟಾರ್ ಆಗಿದ್ದರು.
ಬೈಕ್ ತೆಗೆದುಕೊಳ್ಳಲು ಧೋನಿ ಮಾಡಿದ್ದ ಸಾಲ ಎಷ್ಟು ಗೊತ್ತಾ?
ಧೋನಿ ಬೈಕ್ ಖರೀದಿಸಲು ಸಾಲ ಮಾಡಿದ್ದರು ಅಂದ್ರೆ ನಿಮಗೆ ಅಶ್ಚರ್ಯವಾಗಬಹುದು. ಆದ್ರೆ ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಬೈಕ್ಗಾಗಿ ಮಾತ್ರವೇ ಅಲ್ಲ. ಗೃಹ ಸಾಲಕ್ಕೂ ಮಾಹಿ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದರು. ಬೈಕ್ ಖರೀದಿಗಾಗಿ 25 ಸಾವಿರ ಸಾಲ ಪಡೆದಿದ್ದರು. ಧೋನಿಯ ಹೋಂ ಲೋನ್ ರಿಜೆಕ್ಟ್ ಕೂಡ ಆಗಿತ್ತು.

ಮಾಹಿ ಫಸ್ಟ್ ಲವ್ ಸಕ್ಸಸ್ ಆಗಿಲ್ಲ. ಆದ್ರೆ ಯಾಕೆ ಸಕ್ಸಸ್ ಆಗಲಿಲ್ಲ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಇದಕ್ಕೆ ಕಾರಣ ಧೋನಿಯ ಆರ್ಥಿಕ ಪರಿಸ್ಥಿತಿ. ಧೋನಿ ಪ್ರೀತಿಸುತ್ತಿದ್ದ ಪ್ರಿಯಾಂಕಾ ಜಾ, ಜಾರ್ಖಂಡ್ ಮೂಲದ ಆಗರ್ಭ ಶ್ರೀಮಂತೆ. ಧೋನಿ ಮಿಡಲ್ ಕ್ಲಾಸ್ ಆಗಿದ್ರಿಂದ ಆಕೆಯ ತಂದೆ ಧೋನಿಯನ್ನ ಒಪ್ಪಲಿಲ್ಲ. ಇದ್ರಿಂದ ಇಬ್ಬರ ಪ್ರೀತಿ ಮುರಿದುಬಿತ್ತು.
NOCಗಾಗಿ ಲಂಚ ನೀಡಿದ್ದ ಧೋನಿ ಸ್ನೇಹಿತರು
ಧೋನಿ ತಂಡ ಸೇರಿಕೊಳ್ಳಲು ಲಂಚ ನೀಡಬೇಕಾಯ್ತಾ? ಹೌದು.. ಪೂರ್ವ ವಲಯಕ್ಕೆ ಆಯ್ಕೆಯಾಗಿದ್ದ ಮಾಹಿ, ಆಡುವ ಸಲುವಾಗಿ ಎನ್ಒಸಿ ಪಡೆಯಬೇಕಿತ್ತು. ಆದ್ರೆ ದುಸ್ಥಿತಿಯಲ್ಲಿದ್ದ ಮಾಹಿ ಕುಟುಂಬ, ಲಕ್ಷ ಲಕ್ಷ ನೀಡುವ ಸ್ಥಿತಿಯಲ್ಲಿರಲಿಲ್ಲ. ಈ ವೇಳೆ ಧೋನಿ, ಸಹೋದರಿಯರ ಪತಿ ಮತ್ತು ಧೋನಿ ಸ್ನೇಹಿತರು ಲಂಚ ಕಟ್ಟುತ್ತಾರೆ. ಇದು ಧೋನಿಯಲ್ಲಿ ಟ್ಯಾಲೆಂಟ್ ಇಲ್ಲ ಎಂಬ ಕಾರಣಕ್ಕೆ ಅಲ್ಲ. ಟ್ಯಾಲೆಂಟ್ ಇದ್ದರೂ ಭವಿಷ್ಯಕ್ಕಾಗಿ ಲಂಚ ನೀಡೋ ಅನಿವಾರ್ಯವಾಗಿತ್ತು.
ಫೋನ್ ಸ್ವಿಚ್ ಆಫ್.. ಇದು ಧೋನಿ ಕಮಿಟ್ಮೆಂಟ್ಗೆ ಸಾಕ್ಷಿ!
ಅತಿ ಕೆಟ್ಟ ದಿನಗಳನ್ನ ಎಣಿಸುತ್ತಿದ್ದ ಧೋನಿ ಲೈಫ್, ಬದಲಾಗುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಆದ್ರೆ ಈ ಲೈಫ್ ಬದಲಾವಣೆಗೆ ಕಾರಣ, ಮಾಹಿ ಬದ್ಧತೆ. ಯಾಕಂದ್ರೆ ಕರಿಯರ್ನ ಸಿರೀಯಸ್ ಆಗಿ ತೆಗೆದುಕೊಂಡಿದ್ದ ಮಾಹಿ, ಕ್ರಿಕೆಟ್ನತ್ತಲೇ ಹೆಚ್ಚು ಫೋಕಸ್ ಮಾಡುತ್ತಿದ್ದರು. ಇದಕ್ಕಾಗಿ ಫೋನ್ ಸ್ವಿಚ್ ಆಫ್ ಮಾಡ್ತಿದ್ದ ಮಾಹಿ, ಹೊರಗಿನ ಸುದ್ದಿಗಳ ಬಗ್ಗೆ ಗಮನ ಹರಿಸ್ತಿರಲಿಲ್ಲ. ಈ ಒಂದು ಹವ್ಯಾಸವೇ, ಧೋನಿ ಸಕ್ಸಸ್ಗೆ ಕಾರಣ.
ಕಾರ್ ಕೆಟ್ಟೋಯ್ತು, ಧೋನಿ ಪಂದ್ಯ ಆಡಲೇ ಇಲ್ಲ
2001ರಲ್ಲಿ ಮಹೇಂದ್ರ ಸಿಂಗ್ ಧೋನಿ, ದುಲೀಪ್ ಟ್ರೋಫಿಗೆ ಸೆಲೆಕ್ಟ್ ಆಗಿದ್ದರು. ಆದ್ರೆ ಬಿಹಾರ್ ಕ್ರಿಕೆಟ್ ಸಂಸ್ಥೆ, ತಡವಾಗಿ ಧೋನಿಗೆ ಸಂದೇಶ ಕಳುಹಿಸಿತ್ತು. ಮ್ಯಾಚ್ ಟೈಮ್ಗೆ ತೆರಳಲು ಧೋನಿ ಸ್ನೇಹಿತ ಪರಮ್ಜಿತ್ ಸಿಂಗ್, ಒಂದಿಷ್ಟು ಹಣ ಕಲೆಕ್ಟ್ ಮಾಡ್ತಾರೆ. ಟಾಟಾ ಸುಮೋದಲ್ಲಿ ಧೋನಿಯನ್ನು ಕರೆದುಕೊಂಡು ಹೋಗೋಕೆ ಮುಂದಾಗ್ತಾರೆ.
ಬ್ಯಾಡ್ಲಕ್ ಅಂದ್ರೆ ಟಾಟಾ ಸುಮೋ ಬ್ರೇಕ್ ಡೌನ್ ಆಗುತ್ತೆ. ಧೋನಿ ಪಂದ್ಯದ ವೇಳೆಗೆ ತಲುಪಲು ಸಾಧ್ಯವಾಗಲ್ಲ. ಆಗ ಧೋನಿ ಬದಲಿಗೆ ದೀಪ್ ದಾಸ್ ಗುಪ್ತಾ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸ್ತಾರೆ. ಇದ್ರಿಂದ ಧೋನಿ ಡೆಬ್ಯೂ ಕನಸು ಛಿದ್ರವಾಗುತ್ತೆ. ಕಷ್ಟಗಳಿಗೆ ಎದೆಗುಂದದೆ ಮುನ್ನಡೆದ ಧೋನಿ ಮುಂದೆ ವಿಶ್ವಶ್ರೇಷ್ಠ ನಾಯಕನಾಗಿ ಬೆಳೆದಿದ್ದು ಎಲ್ಲರಿಗೂ ಮಾದರಿಯೇ ಸರಿ.
ವಿಶೇಷ ವರದಿ: ಸಂತೋಷ್, ಸ್ಪೋರ್ಟ್ಸ್ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ