newsfirstkannada.com

ಕ್ರಿಕೆಟರ್ಸ್‌ಗಳು ರಾಕ್‌ಸ್ಟಾರ್.. ಧೋನಿ, ಸೆಹ್ವಾಗ್​, ಹರ್ಭಜನ್, ಎಬಿಡಿ, ಬ್ರಾವೋ ಸಿಂಗಿಂಗ್ ಕ್ರೇಜ್ ಹೇಗಿದೆ ಗೊತ್ತಾ?

Share :

09-07-2023

  ​ನಾಯಕತ್ವದಲ್ಲಿ ಅಲ್ಲ, ಸಾಂಗ್​ ಹಾಡುವಲ್ಲೂ M.S ಧೋನಿ ಪಂಟರ್

  ಕೆರಿಬಿಯನ್ ಕ್ರಿಕೆಟರ್​ ಡ್ವೇನ್​​ ಬ್ರಾವೋ ತಮಿಳು ಸಾಂಗ್​ ಹಾಡುತ್ತಾರೆ

  ಹಾಡು ಹಾಡುತ್ತಾ ಎಂಜಾಯ್ ಮಾಡೋದರ ಜತೆ ಸಿಕ್ಸರ್ ಬಾರಿಸ್ತಾರೆ

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಗ್ರೇಟೆಸ್ಟ್​ ಕ್ಯಾಪ್ಟನ್. ಆನ್​​ಫೀಲ್ಡ್​ನಲ್ಲಿ ಪರಿಪೂರ್ಣ ಆಟಗಾರ. ಅವತಾರ ಪುರುಷ ಅನ್ನೋದು ಗೊತ್ತಿದೆ. ಆದರೆ, ಅದರ ಹೊರತಾಗಿ ನೀವು ನೋಡಿರದ ಒಂದು ಟ್ಯಾಲೆಂಟ್ ಮಾಹಿಯಲ್ಲಿದೆ. ಅದೇನು ಅನ್ನೋದನ್ನ ಇವತ್ತು ಇಲ್ಲಿದೆ.

ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಕಂಡ ಅತ್ಯದ್ಭುತ ನಾಯಕ. ವಿಕೆಟ್ ಹಿಂದೆ ಮ್ಯಾಜಿಕ್ ಮಾಡೋ ಈ ಮಾಟಗಾರ. ವಿಕೆಟ್ ಮುಂದೆ ಮಾಡೋ ಮೋಡಿ ಗೊತ್ತೇ ಇದೆ. ಅಸಾಧ್ಯವಾದದ್ದನ್ನೂ ಸಾಧಿಸಿ ತೋರಿಸಿರುವ ಮಹೇಂದ್ರ ಬಾಹುಬಲಿ. ನಿಜಕ್ಕೂ ಅವತಾರ ಪುರುಷ. ಕ್ರಿಕೆಟರ್ ಹೊರತಾಗಿ ಸೈನಿಕ, ನಟ, ರೈತ, ಬ್ಯುಸಿನೆಸ್ ಮ್ಯಾನ್. ಹೀಗೆ ಹಲವು ಅವತಾರಗಳಲ್ಲಿ ನಾವ್​ ನೋಡಿದ್ದೇವೆ. ಆದ್ರೆ, ನೀವು ನೋಡಿರದ ಧೋನಿ ಮತ್ತೊಬ್ಬ ಇದ್ದಾನೆ.

ಧೋನಿಯಲ್ಲಿದ್ದಾನೆ ಒಬ್ಬ ಸೂಪರ್ ಸಿಂಗರ್​..!

ಐಕಾನಿಕ್​​ ಧೋನಿ ಓರ್ವ ಸೂಪರ್ ಸಿಂಗರ್. ಬಾಲಿವುಡ್ ಖ್ಯಾತ ಗಾಯಕ ಕಿಶೋರ್ ಕುಮಾರ್​ರ ಕಟ್ಟಾ ಅಭಿಮಾನಿ. ಆದ್ರೀಗ ಧೋನಿ ಹಾಡಿರೋ ಒಂದು ಹಾಡನ್ನ ಸಿಎಸ್​ಕೆ ಮಾಜಿ ಆಟಗಾರ ಮೋಹಿತ್ ಶರ್ಮಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದಾರೆ.

ಬಾಲಿವುಡ್ ಸಲಾಮ್-ಇ-ಇಷ್ಕ್ ಮೇರಿ ಜಾನ್ ಎಂಬ ಹಾಡನ್ನ ಸುಮಧುರವಾಗಿ ಹಾಡುತ್ತಾ ಗಮನ ಸೆಳೆದಿರೋ ಧೋನಿ, ತಮ್ಮಲ್ಲಿರುವ ಪ್ರತಿಭೆಯನ್ನ ಹೊರ ಹಾಕಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಧೋನಿ ಹಾಡು ಹಾಡಿರೋದು ಇದೇ ಮೊದಲಲ್ಲ. 2010ರಲ್ಲಿ ಸಹರ ಅವಾರ್ಡ್ಸ್​ ಕಾರ್ಯಕ್ರಮದಲ್ಲೂ ಸುಮಧುರ ಕಂಠದಿಂದ ಅಭಿಮಾನಿಗಳ ಮನ ಗೆದ್ದಿದ್ದರು.

ಕೆರಿಬಿಯನ್ ರಾಕ್​ಸ್ಟಾರ್​ ಡ್ವೇನ್​​ ಬ್ರಾವೋ..!

ವಿಂಡೀಸ್​ನ ಡ್ವೇನ್ ಬ್ರಾವೋ ಬಗ್ಗೆ ಹೇಳೋ ಮಾತೇ ಇಲ್ಲ. ಆನ್​ಫೀಲ್ಡ್​ನಲ್ಲಿ ಮಸ್ತ್​ ಎಂಟರ್​ಟೈನ್ಮೆಂಟ್ ನೀಡೋ ಬ್ರಾವೋ ನಿಜಕ್ಕೂ ರಾಕ್​​ಸ್ಟಾರ್​. ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ತಮಿಳು ಹಾಡುಗಳನ್ನೂ ಹಾಡುವುದನ್ನ ಕರಗತ ಮಾಡಿಕೊಂಡಿದ್ದಾರೆ.​ ಇನ್ನೂ ಎಬಿ ಡಿವಿಲಿಯರ್ಸ್​ ಅತ್ಯುತ್ತಮ ಕ್ರೀಡಾಪಟು ಅನ್ನೋದು ನಮಗೆಲ್ಲ ಗೊತ್ತು. ಆದ್ರೆ, ಈ ವಿಧ್ವಂಸಕಾರಿ ಬ್ಯಾಟ್ಸ್​ಮನ್​ ಅದ್ಭುತ ಸಂಗೀತಗಾರ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಹಿಂದೆ ಹಲವು ಹಿಂದಿ ಹಾಡುಗಳನ್ನ ಹಾಡಿದ್ದಾರೆ.

ಆಫ್ ದಿ ಫೀಲ್ಡ್​ನಲ್ಲೂ ಸೆಹ್ವಾಗ್ ಹಾಡ್ತಾರೆ ಸಾಂಗ್.!

ಸೆಹ್ವಾಗ್ ಬ್ಯಾಟಿಂಗ್ ಮಾಡೋ ವೇಳೆ ವಿಶಲ್ ಹಾಕೋದು, ಸಾಂಗ್ ಹಾಡ್ತಾರೆ. ಆದ್ರೆ, ಆಫ್ ದಿ ಫೀಲ್ಡ್​ನಲ್ಲೂ ವಿರೇಂದ್ರ ಸೆಹ್ವಾಗ್ ಹಾಡು ಹೇಳೋದರಲ್ಲಿ ಪಂಟರ್​. ಬ್ರೆಟ್​ ಲೀ, ಹರ್ಭಜನ್ ಸಿಂಗ್, ಶೇನ್ ವಾಟ್ಸನ್​​, ಇರ್ಫಾನ್ ಪಠಾಣ್ ಕೂಡ ಮಲ್ಟಿ ಟ್ಯಾಲೆಂಟೆಟ್​​​ಗಳೇ ಆಗಿದ್ದಾರೆ. ನೀವು ಆನ್​ಫೀಲ್ಡ್​ನಲ್ಲಿ ನೋಡಿದ್ದ ಕ್ರಿಕೆಟರ್​ಗಳು, ಆಫ್ ದ ಫೀಲ್ಡ್​ನಲ್ಲೂ ಹೇಗೆ ಎಂಟರ್​​ಟೈನ್ಮೆಂಟ್ ನೀಡ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ರಿಕೆಟರ್ಸ್‌ಗಳು ರಾಕ್‌ಸ್ಟಾರ್.. ಧೋನಿ, ಸೆಹ್ವಾಗ್​, ಹರ್ಭಜನ್, ಎಬಿಡಿ, ಬ್ರಾವೋ ಸಿಂಗಿಂಗ್ ಕ್ರೇಜ್ ಹೇಗಿದೆ ಗೊತ್ತಾ?

https://newsfirstlive.com/wp-content/uploads/2023/07/DHONI_BAJJI.jpg

Load More