newsfirstkannada.com

ಸ್ಟಾರ್​ಗಿರಿ ತಲೆಗೇರಿಲ್ಲ, ಹಮ್ಮು-ಬಿಮ್ಮು ಇಲ್ಲವೇ ಇಲ್ಲ.. ಮನೆ ದೇವರ ಸನ್ನಿಧಿಯಲ್ಲಿ ಪೂರ್ವಜರ ಭೇಟಿಯಾಗಿ ದಿಲ್ ಗೆದ್ದ ಮಾಹಿ

Share :

17-11-2023

    ಅಂದು-ಇಂದು ಎಂದೆಂದೂ ಸರಳತೆಯ ಸಾಹುಕಾರ

    ಪತ್ನಿ ಸಾಕ್ಷಿಯೊಂದಿಗೆ ಇಷ್ಟದೇವತೆಗೆ ಪೂಜೆ ಸಲ್ಲಿಕೆ

    ಹಿರಿಯರೊಬ್ಬರ​ ಕಾಲಿ ಬಿದ್ದು ನಮಸ್ಕರಿಸಿದ ಮಾಹಿ

ಎಂಎಸ್ ಧೋನಿಯನ್ನು ಸರಳತೆಯ ಸರದಾರ ಅಂತ ಸುಮ್ಮನೆ ಕರೆಯಲ್ಲ. ಅವರ ಮೇರು ವ್ಯಕ್ತಿತ್ವ ಅದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಿಂಪ್ಲಿಸಿಟಿಯಲ್ಲಿ ಕೂಲ್​​​ ಮಾಹಿಯನ್ನು ಮೀರಿಸೋರೆ ಇಲ್ಲ. ಕೋಟಿ ಕುಬೇರನಾದ್ರು ಸ್ವಲ್ಪವೂ ಹಮ್ಮು-ಬಿಮ್ಮಿಲ್ಲ. ಸ್ಟಾರ್​ಗಿರಿ ತಲೆಗೆ ಏರಿಲ್ಲ.
ಕ್ರಿಕೆಟ್​​ ಬರೀ ಶ್ರೀಮಂತ ಕ್ರೀಡೆಯಲ್ಲ. ಇದನ್ನಾಡುವ ಆಟಗಾರರು ಕೂಡ ಶ್ರೀಮಂತರೇ. ಪಂದ್ಯವೊಂದರಿಂದಲೇ ಲಕ್ಷ ಲಕ್ಷ ಬಾಚಿಕೊಳ್ಳುವ ಇವರ ಪ್ರಪಂಚನೇ ಬೇರೆ. ಅದ್ಧೂರಿ ಲೈಫ್​ಸ್ಟೈಲ್​ ಎಂತವರ ಕಣ್ಣನ್ನು ಕುಕ್ಕುತ್ತೆ. ಸ್ಟಾರ್​ಗಿರಿ ಅಮಲಿನಲ್ಲಿ ಸರಳತೆಯನ್ನೇ ಮರೆತು ಬಿಟ್ಟಿರ್ತಾರೆ. ಆದರೆ ಆಲ್​ಟೈಮ್ ಗ್ರೇಟೆಸ್ಟ್​​​​ ಕ್ಯಾಪ್ಟನ್ ಎಂಎಸ್ ಧೋನಿ ಮಾತ್ರ ಇವರೆಲ್ಲಗಿಂತ ಭಿನ್ನ.

ಅಂದು-ಇಂದು ಎಂದೆಂದೂ ಧೋನಿ ಸರಳತೆಯ ಸಾಹುಕಾರ

ಎಂಎಸ್ ಧೋನಿ..! ಮಾಡದ ಸಾಧನೆಗಳಿಲ್ಲ.. ಮುಟ್ಟದ ಗುರಿಗಳಿಲ್ಲ.. ಓರ್ವ ಕ್ರಿಕೆಟರ್​​ ಎಷ್ಟು ಎತ್ತರಕ್ಕೆ ಬೆಳಿಬೇಕೋ ಅಷ್ಟು ಎತ್ತರಕ್ಕೆ ಮಾಹಿ ಬೆಳೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ 4 ವರ್ಷವಾದರೂ ಈಗಲೂ ಅಭಿಮಾನಿಗಳ ದಿಲ್ ಕಾ ಬಾಸ್​​​. ಅದೇ ಕ್ರೇಜ್​​ ಇದೆ. ಇಂತಹ ಮಾಸ್ ಮಹಾರಾಜ ಹ್ಯೂಜ್ ಸಕ್ಸಸ್ ಕಂಡ್ರೂ ಈಗಲೂ ಡೌನ್ ಟು ಅರ್ಥ್. ಹುಟ್ಟಿದ ಬೆಳೆದ ಊರು, ಜನರು ಹಾಗೂ ಮನೆದೇವರನ್ನ ಎಂದೂ ಮರೆಯಲ್ಲ. ಎಷ್ಟೇ ಬ್ಯುಸಿ ಇದ್ದರೂ ಪೂರ್ವಿಕರ ಮನೆಗೆ ಭೇಟಿ ಕೊಟ್ಟು ಖುಷಿಪಟ್ಟಿದ್ದಾರೆ.

ಉತ್ತರಾಖಂಡನ ಲ್ವಾಲಿ ಗ್ರಾಮಕ್ಕೆ ಮಾಹಿ ಭೇಟಿ

ರಾಂಚಿಯಲ್ಲಿ ಹುಟ್ಟಿ, ಅಪಾರ ಖ್ಯಾತಿ ಗಳಿಸಿದ ಧೋನಿ ತಮ್ಮ ಪೂರ್ವಿಕರ ನೆಲೆಯಾದ ಉತ್ತರಾಖಂಡಕ್ಕೆ ಭೇಟಿಕೊಟ್ಟಿದ್ದಾರೆ. ಅಲ್ಮೋರಾದ ಲ್ವಾಲಿ ಲಮಗಡ ಗ್ರಾಮದಲ್ಲಿ ಮಾಹಿ ಪೂರ್ವಜರು ನೆಲೆಸಿದ್ರು. ಇಲ್ಲಿಗೆ ಭೇಟಿ ನೀಡಿರೋ ಧೋನಿ, ಗ್ರಾಮಸ್ಥರ ಸಮ್ಮುಖದಲ್ಲಿ ಮನೆದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಹಲವು ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮನ..!

ಮಾಹಿ ಲ್ವಾಲಿ ಗ್ರಾಮಕ್ಕೆ ಎಂಟ್ರಿಕೊಡ್ತಿದ್ದಂತೆ ಗ್ರಾಮಸ್ಥರಿಂದ ಧಾರ್ಮಿಕ ವೆಲ್​​​​​ಕಮ್​ ದೊರಕಿತು. ಇದೇ ಖುಷಿಯಲ್ಲಿ ಗ್ರಾಮದ ಮಂದಿರಗಳಿಗೆ ಭೇಟಿ ನೀಡಿ, ಭಗವಂತನ ಆಶೀರ್ವಾದ ಪಡೆದ್ರು. ಇಲ್ಲಿಂದ ಮಹೇಂದ್ರ ಸಿಂಗ್ ಧೋನಿ ನೇರವಾಗಿ ಹೋಗಿದ್ದು ತನ್ನ ಪೂರ್ವಜರು ವಾಸಿಸುತ್ತಿದ್ದ ಮನೆಗೆ. ಇಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ರು.

ಮಾಹಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಗ್ರಾಮಸ್ಥರು

ಮಾಹಿ ಉತ್ತರಾಖಂಡನ ಲ್ವಾಲಿಗೆ ಎಂಟ್ರಿಕೊಡ್ತಿದ್ದಂತೆ ಗ್ರಾಮದಲ್ಲಿ ಸಂಭ್ರಮ ಮನೆಮಾಡಿತ್ತು. ಧೋನಿಯನ್ನ ನೋಡಲು ಗ್ರಾಮಸ್ಥರು ಮುಗಿಬಿದ್ದರು. ಯಾರಿನ್ನೂ ನಿರಾಸೆ ಗೊಳಿಸಲಿಲ್ಲ. ಎಲ್ಲರೊಂದಿಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಇನ್ನೇನು ಧೋನಿಯ ಉತ್ತರಾಖಂಡನ ಲ್ವಾಲಿ ಗ್ರಾಮದ ರೌಂಡ್ಸ್​ಗೆ ಬ್ರೇಕ್ ಬೀಳಬೇಕಿತ್ತು. ಅಷ್ಟರಲ್ಲಿ ಲೇಡಿ ಫ್ಯಾನ್​ ಒಬ್ಬಳು ಮಾಹಿ ಹತ್ತಿರಕ್ಕೆ ಬರ್ತಾಳೆ. ಅವರೊಂದಿಗೆ ನಗುತ್ತಲೇ ಮಾತನಾಡಿದ ಧೋನಿ, ಅವರು ಕಾಲಿಗೆ ಮುಟ್ಟಿ ನಮಸ್ಕರಿಸುತ್ತಾರೆ.

ಇಷ್ಟೇ ಸಾಕಲ್ವೆ ? ಧೋನಿ ಸರಳತೆಯ ಸಾಹುಕಾರ, ಅಭಿಮಾನದ ಮಹಾರಾಜ, ವಿಶಾಲ ಹೃದಯವಂತ ಅನ್ನೋದಕ್ಕೆ. ಅಷ್ಟಕ್ಕೂ ಸುಮ್ಮನೇ ಹೇಳ್ತಾರಾ ಲೆಜೆಂಡ್ರಿ ಧೋನಿ ನಡೆ ಎಂದಿಗೂ ಡಿಫರೆಂಟ್​​​ ನಡೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸ್ಟಾರ್​ಗಿರಿ ತಲೆಗೇರಿಲ್ಲ, ಹಮ್ಮು-ಬಿಮ್ಮು ಇಲ್ಲವೇ ಇಲ್ಲ.. ಮನೆ ದೇವರ ಸನ್ನಿಧಿಯಲ್ಲಿ ಪೂರ್ವಜರ ಭೇಟಿಯಾಗಿ ದಿಲ್ ಗೆದ್ದ ಮಾಹಿ

https://newsfirstlive.com/wp-content/uploads/2023/11/DHONI-7.jpg

Load More