newsfirstkannada.com

ಧೋನಿ ಮ್ಯಾಜಿಕ್​ಗೆ ಗಿಲ್ ಮೌನ.. ತಲಾ ಸೆಕೆಂಡ್ಸ್​ ವೇಗ ಎಷ್ಟು ಸ್ಪೀಡ್​ ಇತ್ತು ಗೊತ್ತಾ..?

Share :

30-05-2023

  GT​ಗೆ ಬೆಲೆ ಕಟ್ಟಲಾಗದ ಇನ್ನಿಂಗ್ಸ್​ ಕೊಟ್ಟ ಸುದರ್ಶನ್

  47 ಬಾಲ್​ನಲ್ಲಿ 96 ರನ್ ಚಚ್ಚಿ ದಾಖಲೆ ಬರೆದ ಸ್ಟಾರ್​

  ನಾಯಕನ ಆಟವಾಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ

ಚಾಣಾಕ್ಷ ಕ್ಯಾಪ್ಟನ್​ ಧೋನಿ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಲೆಕ್ಕಾಚಾರ ನಿನ್ನೆ ಕಂಪ್ಲೀಟ್​ ಉಲ್ಟಾ ಆಯ್ತು. ಅಹಮದಾಬಾದ್​​ ಗ್ರೌಂಡ್​​ ಸಖತ್​ ಗೇಮ್​ ಪ್ಲಾನ್​ ಹಾಕಿಕೊಂಡು ಕಣಕ್ಕಿಳಿದ ಚೆನ್ನೈ, ಔಟ್​​ ಆಫ್​ ಸಿಲೆಬಸ್​​ ಆಟಗಾರನ ಚಮಕ್​ಗೆ ಬೆಸ್ತು ಬಿತ್ತು. ಹೋಂ​​ಗ್ರೌಂಡ್​ನಲ್ಲಿ ಗುಜರಾತ್​ ಬ್ಯಾಟಿಂಗ್​ ಹೇಗಿತ್ತು ಅನ್ನೋದ್ರ ವಿವರ ಇಲ್ಲಿದೆ.

ನಿನ್ನೆಯ ಪಂದ್ಯದಲ್ಲಿ ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಗುಜರಾತ್​ ಟೈಟನ್ಸ್​ ಡಿಸೆಂಟ್​ ​ ಓಪನಿಂಗ್​ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ ಹಾಗೂ ಜೀವದಾನ ಪಡೆದುಕೊಂಡ ಶುಭ್​ಮನ್​ ಗಿಲ್​ ಅರ್ಧಶತಕದ ಜೊತೆಯಾಟವಾಡಿದ್ರು.

ಮಾಂತ್ರಿಕ ಧೋನಿಯ ಮ್ಯಾಜಿಕ್​ಗೆ ಶುಭ್​ಮನ್ ಸ್ತಬ್ಧ
ಎರಡೆರಡು ಜೀವದಾನ ಪಡೆದುಕೊಂಡು ಆಡ್ತಿದ್ದ ಶುಭ್​ಮನ್​ ಗಿಲ್​, ಮಾಂತ್ರಿಕ ಧೋನಿಯ ಮೋಡಿಗೆ ಅಕ್ಷರಶಃ ಸ್ತಬ್ಧರಾದ್ರು. ಶುಭ್​ಮನ್​ ಜಸ್ಟ್​ 0.12 ಸೆಕೆಂಡ್​ ಯಾಮಾರಿದ್ದಷ್ಟೇ. ಧೋನಿ ಕೈ ಸೇರಿದ ಬಾಲ್​ ಬೆಲ್ಸ್​​​ ಎಗರಿಸಿಬಿಡ್ತು. ಶುಭ್ಮನ್​ ಪೆವಿಲಿಯನ್ ಸೇರಿದ ಬಳಿಕ ಜೊತೆಯಾದ ಸಾಹ, ಸಾಯ್​ ಸುದರ್ಶನ್​ ತಂಡಕ್ಕೆ ಚೇತರಿಕೆ ನೀಡಿದ್ರು. 2ನೇ ವಿಕೆಟ್​ಗೆ 64 ರನ್​ ಕಲೆ ಹಾಕಿದ್ರು. ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿದ ಸಾಹ ಹಾಫ್​ ಸೆಂಚುರಿ ಸಿಡಿಸಿ ಔಟಾದ್ರು.

ಚೆನ್ನೈಗೆ ಶಾಕ್​ ಕೊಟ್ಟ ಔಟ್​ ಆಫ್​ ಸಿಲೆಬಸ್​ ಸುದರ್ಶನ್​
ಚೆನ್ನೈ ಸೂಪರ್​ ಕಿಂಗ್ಸ್​ಗೆ ನಿನ್ನೆ ಸಾಯಿ​ ಸುದರ್ಶನ್​ ಸೈಲೆಂಟ್​ ಆಗೇ ಶಾಕ್​ ನೀಡಿದ್ರು. ಹೈ-ಪ್ರೆಶರ್​​ ಗೇಮ್​ನಲ್ಲಿ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ ಯಂಗ್​ ಬಾಯ್​ ಚೆನ್ನೈ ಕ್ಯಾಂಪ್​ ಅನ್ನ ನಡುಗಿಸಿ ಬಿಟ್ಟ.

47 ಎಸೆತಗಳಲ್ಲಿ ಸಿಡಿಸಿದ 96 ರನ್​​ ಚಚ್ಚಿ ಆರ್ಭಟಸಿದ ಸಾಯ್​ ಸುದರ್ಶನ್​, ನಮೋ ಮೈದಾನದಲ್ಲಿದ್ದ ಫ್ಯಾನ್ಸ್​ಗೆ ಜಬರ್ದಸ್ತ್​ ಎಂಟರ್​ಟೈನ್​ಮೆಂಟ್​ ನೀಡಿದ್ರು. ಅಂತಿಮವಾಗಿ ಸುದರ್ಶನ್​ ಆಟಕ್ಕೆ ಕೊನೆಗೂ ಮತಿಶಾ ಪತಿರಣ ಬ್ರೇಕ್​ ಹಾಕಿದ್ರು.

ಹಾರ್ದಿಕ್​ ನಾಯಕನ ಆಟ, ಚೆನ್ನೈಗೆ ಬಿಗ್​ ಟಾರ್ಗೆಟ್
ಅಂತಿಮ ಹಂತದಲ್ಲಿ ಬಿರುಸಿನ ಇನ್ನಿಂಗ್ಸ್​ ಕಟ್ಟಿದ ಹಾರ್ದಿಕ್​ ಪಾಂಡ್ಯ, 2 ಸಿಕ್ಸರ್​ ಸಹಿತ 21 ರನ್​ಗಳ ಕಾಣಿಕೆ ನೀಡಿದ್ರು. ಇದ್ರ ಪರಿಣಾಮ ಗುಜರಾತ್​ ಟೈಟನ್ಸ್​​ ನಿಗದಿತ 20 ಓವರ್​ಗಳಲ್ಲಿ, 214 ರನ್​ಗಳ ಸವಾಲಿನ ರನ್​ ಕಲೆ ಹಾಕ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧೋನಿ ಮ್ಯಾಜಿಕ್​ಗೆ ಗಿಲ್ ಮೌನ.. ತಲಾ ಸೆಕೆಂಡ್ಸ್​ ವೇಗ ಎಷ್ಟು ಸ್ಪೀಡ್​ ಇತ್ತು ಗೊತ್ತಾ..?

https://newsfirstlive.com/wp-content/uploads/2023/05/DHONI.jpg

Load More