ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸೋಲು
'ನನ್ನ ಸೋಲಿಗೆ ಬಿಜೆಪಿಯೇ ಕಾರಣ' ಎಂದ ಎಂಟಿಬಿ
ಬಿಜೆಪಿ ನಾಯಕರ ಮುಂದೆಯೇ ಎಂಟಿಬಿ ಅಳಲು
ಬೆಂಗಳೂರು: ಇಂದು ನಡೆದ ಪರಾರ್ಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ತನ್ನ ಸೋಲಿಗೆ ಬಿಜೆಪಿಯೇ ಕಾರಣ ಎಂದಿದ್ದಾರೆ ಎಂಟಿಬಿ ನಾಗರಾಜ್.
ನಾನು ಕಾಂಗ್ರೆಸ್ಸಿನಲ್ಲಿದ್ದಾಗ ಮೂರು ಬಾರಿ ಗೆದ್ದಿದ್ದೆ. ಬಿಜೆಪಿಗೆ ಬಂದ ಮೇಲೆ 2 ಬಾರಿ ಸೋತಿದ್ದೇನೆ. ನನ್ನ ಸೋಲಿಗೆ ಬಿಜೆಪಿಯೇ ಕಾರಣ. ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ಮರ್ಯಾದೆ ಕೊಟ್ಟು ಬಿಜೆಪಿಗೆ ಬಂದಿದ್ದೇನೆ. ಇದರಿಂದಲೇ ನನಗೆ ಸೋಲಾಗಿದೆ ಎಂದು ರಾಜ್ಯ ಬಿಜೆಪಿ ನಾಯಕರ ಮುಂದೆ ಎಂಟಿಬಿ ನಾಗರಾಜ್ ಅಳಲು ತೋಡಿಕೊಂಡಿದ್ದಾರೆ.
ಡಾ. ಸುಧಾಕರ್ಗೆ ಉಸ್ತುವಾರಿ ನೀಡಿದ್ರಿ. ಆತ ಕೂಡ ಸೋತ, ನಮ್ಮನ್ನು ಸೋಲಿಸಿದ. ಡಾ. ಸುಧಾಕರ್ ಉಸ್ತುವಾರಿಯಾಗಿ ಸರಿಯಾಗಿ ಕೆಲಸ ಮಾಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕಡಿಮೆ ಅಕ್ಕಿ ಕೊಟ್ಟಿದ್ದು, 40 ಪರ್ಸೆಂಟ್ ಆರೋಪಕ್ಕೆ ಕೌಂಟರ್ ನೀಡದಿರುವುದು ನಮ್ಮ ಸೋಲಿಗೆ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ