newsfirstkannada.com

×

ಇಂದು ಮುಡಾ ಕೇಸ್​ ವಿಚಾರಣೆ.. ಹೈಕೋರ್ಟ್​​ ತೀರ್ಪಿನ ಮೇಲೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯ

Share :

Published September 12, 2024 at 8:04am

Update September 12, 2024 at 8:07am

    ರಾಜ್ಯಪಾಲರ ಕ್ರಮ ಸರಿ ಅಂತ ಕೋರ್ಟ್​ ತೀರ್ಪು ಎತ್ತಿ ಹಿಡಿಯುತ್ತಾ?

    ಸಿದ್ದು ಪರ ವಕೀಲ ಅಭಿಷೇಕ್‌ ಮನುಸಿಂಘ್ವಿ ವಾದ ಮಂಡಿಸಲಿದ್ದಾರೆ

    ಸಂಕಷ್ಟ ಎದುರಾದ್ರೆ ಸಿಎಂ ಸಿದ್ದರಾಮಯ್ಯ ಸುಪ್ರೀಂ ಮೊರೆ ಹೋಗ್ತಾರಾ?

ಇವತ್ತು ಮುಡಾ ಸೈಟ್​​​ನಲ್ಲಿ ಫೈನಲ್​​​ ಮ್ಯಾಚ್​​ ಇದೆ. ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಮುಗಿದು ರಾಜ್ಯಪಾಲರ ಕ್ರಮದ ಕುರಿತು ಹೈಕೋರ್ಟ್‌ ತನ್ನ ತೀರ್ಪು ನೀಡಲಿದೆ. ಈ ತೀರ್ಪು ಕರ್ನಾಟಕದಲ್ಲಿ ಕಾಂಗ್ರೆಸ್‌‍ ನೇತೃತ್ವದ ಸರ್ಕಾರಕ್ಕೆ ನಿರ್ಣಾಯಕವಾಗಲಿದೆ. ಹೈಕೋರ್ಟ್‌ ಏನಾದ್ರೂ ರಾಜ್ಯಪಾಲರ ಕ್ರಮ ಸರಿ ಅಂತ ಎತ್ತಿ ಹಿಡಿದರೆ ಸಿದ್ದರಾಮಯ್ಯಗೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ.

ರಾಜ್ಯ ರಾಜಕಾರಣ ಸದ್ಯ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಮುಡಾ ಕೇಸ್​​ ಏನಾಗಲಿದೆ ಅನ್ನೋದು ಕೆಲವೇ ಘಂಟೆಗಳಲ್ಲಿ ನಿರ್ಧಾರ ಆಗಲಿದೆ. ಕಳೆದ ಬಾರಿ ಅರ್ಜಿ ವಿಚಾರಣೆ ವೇಳೆ ನ್ಯಾ. ನಾಗಪ್ರಸನ್ನ ಗುರುವಾರ ಅರ್ಜಿ ವಿಚಾರಣೆ ಮುಗಿಸೋಣ ಅಂತ ಅರ್ಜಿದಾರರಿಗೆ ಮೌಖಿಕವಾಗಿ ತಿಳಿಸಿದ್ದರು. ಹೀಗಾಗಿ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ತೀರ್ಮಾನ ಆಗಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ‘ಮುಡಾ ಕಳಂಕ’ ಅಂಟಿದ್ದು ಹೇಗೆ..? ನ್ಯೂಸ್​ಫಸ್ಟ್​ EXCLUSIVE ಸಂದರ್ಶನ

ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ

ಇವತ್ತು ಏನಾಗಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ?

ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಪರವಾಗಿ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ ವಾದ ಮಂಡಿಸಲಿದ್ದಾರೆ. ಇವರ ವಾದ ಮುಗಿದ ಬಳಿಕ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರವಾಗಿ ಸುಪ್ರೀಂಕೋರ್ಟ್‌ನ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಮ್ಮ ಅಂತಿಮ ವಾದ ಮಂಡಿಸಲಿದ್ದಾರೆ. ಈ ವಾದ ಸರಣಿಯ ಮೇಲೆ ಸಿಎಂ ಸಿದ್ದರಾಮಯ್ಯ ಭವಿಷ್ಯ ನಿಂತಿದೆ.

ಸಿದ್ದು ಪ್ರಾಸಿಕ್ಯೂಷನ್​ ಭವಿಷ್ಯ!

  • ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ ವಿಚಾರ
  • ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ
  • ಒಂದ್ವೇಳೆ ಇವತ್ತು ಸಾಧ್ಯವಾಗದಿದ್ದರೆ ತೀರ್ಪು ಕಾಯ್ದಿರಿಸಬಹುದು
  • ತೀರ್ಪುನ್ನ ಹೈಕೋರ್ಟ್​​ ಏಕಸದಸ್ಯ ಪೀಠ ಕಾಯ್ದಿರಿಸಬಹುದು
  • ಪ್ರಾಸಿಕ್ಯೂಷನ್‌ ಕ್ರಮ ಎತ್ತಿಹಿಡಿದ್ರೆ ಸಿದ್ದುಗೆ ಕಾನೂನು ಸಂಕಷ್ಟ
  • ಪ್ರಾಸಿಕ್ಯೂಷನ್​​​ ಅನೂರ್ಜಿತವಾದ್ರೆ, ಗೆಹ್ಲೋಟ್‌ಗೆ ಮುಖಭಂಗ
  • ಈ ಬೆಳವಣಿಗೆ ಬಿಜೆಪಿ ಸಹಿತ ಕೇಂದ್ರ ಸರ್ಕಾರಕ್ಕೆ ಮುಜುಗರ

ಇದನ್ನೂ ಓದಿ: ಸಿಎಂ ಪತ್ನಿಗೆ ಮುಡಾ ಸೈಟ್‌ ಹಂಚಿಕೆ.. ಮಹತ್ವದ ದಾಖಲೆ ಬಿಡುಗಡೆ ಮಾಡಿದ ಹೆಚ್‌.ಸಿ ಮಹದೇವಪ್ಪ; ಹೇಳಿದ್ದೇನು?

ಇನ್ನು, ಸಿದ್ದು ವಿರುದ್ಧ ತೀರ್ಪು ಬಂದಲ್ಲಿ ತಕ್ಷಣವೇ ತನಿಖಾ ಸಂಸ್ಥೆಗಳು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಆಗ ಸಿದ್ದರಾಮಯ್ಯ ಸುಪ್ರೀಂಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ತರಬೇಕು. ಇಲ್ಲವೇ ಕಾನೂನು ಕ್ರಮ ಎದುರಿಸಬೇಕು. ಹೈಕೋರ್ಟ್‌ ನೀಡಲಿರುವ ತೀರ್ಪು ಸಿದ್ದರಾಮಯ್ಯ ರಾಜಕೀಯ ಅಳಿವು-ಉಳಿವಿನ ತೀರ್ಮಾನ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಮುಡಾ ಕೇಸ್​ ವಿಚಾರಣೆ.. ಹೈಕೋರ್ಟ್​​ ತೀರ್ಪಿನ ಮೇಲೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯ

https://newsfirstlive.com/wp-content/uploads/2024/09/CM_SIDDU_MUDA.jpg

Load More