/newsfirstlive-kannada/media/post_attachments/wp-content/uploads/2024/09/SIDDARAMAIAH-4.jpg)
ಮುಡಾ ಕಾನೂನು ಕದನ ಇವತ್ತು ಮತ್ತೆ ಕಂಟಿನ್ಯೂ ಆಗಲಿದೆ. ಪ್ರಾಸಿಕ್ಯೂಷನ್ ಅನುಮತಿ ವಿಚಾರವನ್ನ ಹೈಕೋರ್ಟ್ ಕೈಗೆತ್ತಿಕೊಳ್ಳಲಿದ್ದು, ಎರಡು ದಿನಗಳ ರಿಲೀಫ್ ಬಳಿಕ ಮತ್ತೆ ಸಿಎಂ ಸಿದ್ದರಾಮಯ್ಯಗೆ ಟೆನ್ಷನ್​ ಶುರುವಾಗಿದೆ.
ಮುಡಾ ಪ್ರಕರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ರಿಟ್​ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪೀಠದಲ್ಲಿ ಈಗಾಗಲೇ ವಾದ-ಪ್ರತಿವಾದ ನಡೆದಿದೆ. ಆಗಸ್ಟ್ 31ರಂದು ದೀರ್ಘ ವಿಚಾರಣೆಯನ್ನು ನಡೆಸಿದ ಕರ್ನಾಟಕ ಹೈಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಇವತ್ತಿಗೆ ನಿಗದಿ ಮಾಡಿತ್ತು.. ಇಂದು ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!
ಶನಿವಾದ ನಡೆದ ವಿಚಾರಣೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಮುಡಾ ಪ್ರಕರಣದಲ್ಲಿ 6ನೇ ಪ್ರತಿವಾದಿ ಪಿ ಎಸ್ ಪ್ರದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಮೈಸೂರಿನ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಮಣೀಂದರ್ ಸಿಂಗ್ ವಾದ ಮಂಡಿಸಿದರು. ಟಿ ಜೆ ಅಬ್ರಾಹಂ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿದ್ದರು.
ಸಿಂಘ್ವಿ ವಾದದ ಮೇಲೆ ನಿಂತಿದೆ ಸಿಎಂ ಸಿದ್ದು ಭವಿಷ್ಯ
ಸಿಎಂ ಪರವಾಗಿ ಅಭಿಷೇಕ್​ ಮನು ಸಿಂಘ್ವಿ ಕೌಂಟರ್​​ ಆರ್ಗ್ಯುಮೆಂಟ್​ ಬಾಕಿ ಇದ್ದು, ಇವತ್ತು ತುಷಾರ್​ ಮೆಹ್ತಾ ಮತ್ತು ಇತರೆ ಪ್ರತಿವಾದಿಗಳ ವಾದಕ್ಕೆ ಪ್ರತಿವಾದ ಮಂಡಿಸಲಿದ್ದಾರೆ. ಹೀಗಾಗಿ ಅಭಿಷೇಕ್​ ಮನು ಸಿಂಘ್ವಿ ವಾದದ ಮೇಲೆ ಸಿಎಂ ಸಿದ್ದರಾಮಯ್ಯ ಮುಂದಿನ ರಾಜಕೀಯ ಭವಿಷ್ಯ ನಿಂತಿದೆ. ಒಂದ್ವೇಳೆ ಹೈಕೋರ್ಟ್​ನಲ್ಲಿ ಇವತ್ತು ಏನಾದ್ರೂ ವ್ಯತಿರಿಕ್ತ ತೀರ್ಪು ಬಂದ್ರೆ, ಸಿಎಂ ಸಿದ್ದರಾಮಯ್ಯನವರು ಸುಪ್ರೀಂಕೋರ್ಟ್​ ಕದತಟ್ಟುಲು ಸಿದ್ಧತೆ ಇದೆ. ಈ ಮೂಲಕ ಗೆಲುವು ಸಿಗುವವರೆಗೂ ಕಾನೂನಾತ್ಮಕ ಹೋರಾಟಕ್ಕೆ ಮುಖ್ಯಮಂತ್ರಿಗಳು ಸಜ್ಜಾಗಿದ್ದಾರೆ.
ಕಾನೂನು ಸಮರ ಮಧ್ಯೆ ಚಾಮುಂಡಿ ದರ್ಶನಕ್ಕೆ ಮುಂದಾದ ಸಿಎಂ
ಮೂಡಾ ಅಕ್ರಮ ಸೈಟ್​ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಿದ್ದಾರೆ. ಇವತ್ತು ಹೈಕೋರ್ಟ್​ನಲ್ಲಿ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆಯೇ ಮೈಸೂರಿಗೆ ಹೋಗಿ ನಾಳೆ ಬೆಳಗ್ಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯಲಿದ್ದಾರೆ.
ಒಟ್ಟಾರೆ.. ಹೈಕೋರ್ಟ್​ನಲ್ಲಿ ಪ್ರಾಸಿಕ್ಯೂಷನ್​ ಫೈಟ್​ನ ಕಾನೂನು ಸಮರ ಅಂತಿಮ ಘಟಕ್ಕೆ ಬಂದಿದೆ. ಇವತ್ತು ಹೈಕೋರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಕ್​ ಆಗುತ್ತಾ.. ಅಥವಾ ರಿಲೀಫ್​ ಸಿಗುತ್ತಾ ಅನ್ನೋ ಕುತೂಹಲ ರಾಜ್ಯದಲ್ಲಿ ಮೂಡಿದೆ.
ಇದನ್ನೂ ಓದಿ:ಬಿಜೆಪಿ ವಿರುದ್ಧ ಸರ್ಕಾರಕ್ಕೆ ಸಿಕ್ತು ಬ್ರಹ್ಮಾಸ್ತ್ರ.. 2 ಸಾವಿರ ಕೋಟಿ ರೂಪಾಯಿ ಹಗರಣ ಬಹಿರಂಗಕ್ಕೆ ಪ್ಲಾನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us