ಪಾರ್ವತಿ ಸಿದ್ದರಾಮಯ್ಯ ಅವರ ಮೇಲೆ ಕೇಳಿ ಬಂದಿರುವ ಆರೋಪ
ಸಿಎಂ ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನ ಹುಂಡಿಯಲ್ಲಿ ಆಕ್ರೋಶ
ಸಂಕಷ್ಟದಿಂದ ಪಾರು ಮಾಡಲು ಮಹದೇಶ್ವರ ಬೆಟ್ಟಕ್ಕೆ ಹೊರಟ ಮಹಿಳೆಯರು
ಮೈಸೂರು: ಮುಡಾ ಸೈಟುಗಳ ಅಕ್ರಮ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾ ಅಕ್ರಮದ ಆರೋಪಕ್ಕೆ ಮನನೊಂದು ಸೈಟುಗಳನ್ನ ವಾಪಸ್ ನೀಡಲು ತೀರ್ಮಾನಿಸಿದ್ದಾರೆ. ಈ ನಿವೇಶನಗಳು ನನಗೆ ತೃಣಕ್ಕೆ ಸಮ. ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು 14 ಸೈಟ್ಗಳನ್ನ ಮುಡಾಗೆ ವಾಪಸ್ ನೀಡೋದಾಗಿ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬರೆದ ಈ ಪತ್ರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಾರ್ವತಿ ಸಿದ್ದರಾಮಯ್ಯ ಅವರ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಿಎಂ ತವರು ಸಿದ್ದರಾಮನ ಹುಂಡಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಿದ್ದರಾಮನ ಹುಂಡಿ ಜನ ಈ ಪ್ರಕರಣದಲ್ಲಿ ಸಿಎಂ ಪತ್ನಿ ಹೆಸರು ಎಳೆದು ತಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮನನೊಂದು ಸೈಟ್ ವಾಪಸ್ ಕೊಟ್ಟಿದ್ದು; ನನ್ನ ಹೆಂಡತಿ ಮಾಡಿದ್ದು ತಪ್ಪಲ್ಲ.. ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಪಾರ್ವತಮ್ಮನ ವಿಷಯವಾಗಿ ಯಾರು ಮಾತನಾಡಲು ಆಗಲ್ಲ. ಅವರು ಅವರ ಮಕ್ಕಳನ್ನು ಮನೆಯಲ್ಲಿ ಮಾತನಾಡಿಸುತ್ತಾರೆ. ಹೊರಗೆ ಬರಲ್ಲ. ಎಲ್ಲೂ ಕಾಣಿಸಿಕೊಳ್ಳಲ್ಲ. ಹೆಂಗಸರನ್ನು ಮನೆ ಒಳಗೆ ಕರೆದು ಮಾತನಾಡಿಸುತ್ತಾರೆ. ಅಂತಹವರ ಹೆಸರನ್ನು ಹೊರಗೆ ತಂದು ಬಳಸಿಕೊಳ್ಳಲಾಗಿದೆ.
ನಾವೆಲ್ಲಾ ಮಹದೇಶ್ವರ ಬೆಟ್ಟಕ್ಕೆ ಹೋಗಿ ಸಿಎಂ ಪತ್ನಿ ಪಾರ್ವತಮ್ಮನವರು ದೋಷ ಮುಕ್ತರಾಗಲು ಮಾದಪ್ಪನಿಗೆ ಪ್ರಾರ್ಥನೆ ಮಾಡುತ್ತೇವೆ. ಇವತ್ತೇ ಒಂದು ಹರಕೆ ಕಟ್ಟಿಕೊಳ್ಳುತ್ತೇವೆ. ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡದೇ ದೋಷ ಮುಕ್ತರಾದ್ರೆ ಮಹಿಳೆಯರೆಲ್ಲಾ ಮಾದಪ್ಪನ ಬೆಟ್ಟಕ್ಕೆ ವಿಶೇಷ ಪೂಜೆ ಸಲ್ಲಿಸುತ್ತೇವೆ ಎಂದು ಮಹಿಳೆಯರು ಹೇಳಿದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ.. ಪತ್ನಿಗೆ CM ಏನಂದ್ರು?
ರಾಜೀನಾಮೆ ಕೊಡದಿರಲು ಗ್ರಾಮಸ್ಥರ ಪಟ್ಟು!
ಸಿದ್ದರಾಮನ ಹುಂಡಿ ಗ್ರಾಮಸ್ಥರು ಸಿಎಂ ಸಿದ್ದರಾಮಯ್ಯನ ವಿರುದ್ಧ ರಾಜಕೀಯ ಪ್ರೇರಿತ ಆರೋಪ ಮಾಡಿದ್ದಾರೆ. ಇದೀಗ ಸಿಎಂ ಪತ್ನಿ ಅವರು ಮುಡಾ ಸೈಟುಗಳನ್ನು ವಾಪಸ್ ಕೊಟ್ಟು ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಹೆಣ್ಮಕ್ಕಳ ಮಾನ ಬೀದಿಗೆ ಇಟ್ಟವರು ರಾಜೀನಾಮೆ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಯಾಕೆ ಕೊಡ್ಬೇಕು ಎಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ