ಬಿಜೆಪಿಯೇತರ ಸರ್ಕಾರಗಳಿರುವ ಕಡೆ ಸಿಬಿಐ ದುರ್ಬಳಕೆ ಆರೋಪ
ಯಾವುದೇ ಕೇಸ್ನೊಂದಿಗೆ ಸಿಬಿಐ ನೇರ ಪ್ರವೇಶ ಮಾಡುವಂತಿಲ್ವಾ?
ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲೂ ಸಿಬಿಐಗೆ ನೇರ ಪ್ರವೇಶ ಇಲ್ಲ
ಅಕ್ರಮವಾಗಿ ಮುಡಾ ಸೈಟು ಪಡೆದ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅತಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಸಿಎಂ ಸಿದ್ದರಾಮಯ್ಯಗೆ ಸಿಬಿಐ ಭಯ ಶುರುವಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಸಿಬಿಐಗೆ ಇದ್ದ ಮುಕ್ತ ಅಧಿಕಾರಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ.
ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ವಿರುದ್ಧ FIR ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. 40 ವರ್ಷದ ರಾಜಕೀಯ ಬದುಕಿನಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ತನಿಖೆಯ ತೂಗುಗತ್ತಿಗೆ ಸಿಲುಕಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಅವರ ರಾಜಕೀಯ ವಿರೋಧಿಗಳಿಗೆ ಬ್ರಹ್ಮಾಸ್ತ್ರವಾಗಿದೆ. ಇದರ ನಡುವೆ ರಾಜ್ಯ ಸರ್ಕಾರಕ್ಕೆ ಸಿಬಿಐ ಭಯ ಶುರುವಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಮುಡಾ ಕೇಸ್; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್ ಏನ್ ಹೇಳುತ್ತೆ?
ಸಿಬಿಐ ತನಿಖೆಯಿಂದ ಪಾರಾಗಲು ಮಾಸ್ಟರ್ ಪ್ಲಾನ್
ಮುಡಾ ಕೇಸ್ ತನಿಖೆಗೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕಾನೂನು ತಜ್ಞರು, ಕಾಂಗ್ರೆಸ್ ಹೈಕಮಾಂಡ್ ಜೊತೆ ಮಹತ್ವದ ಚರ್ಚೆ ನಡೆಸಿದ್ದರು. ಲೋಕಾಯುಕ್ತ ಸಂಸ್ಥೆ ಸರ್ಕಾರದ ಅಡಿಯಲ್ಲೇ ಬರಲಿದ್ದು, ನಿಷ್ಪಕ್ಷಪಾತ ತನಿಖೆ ಅನುಮಾನ. ಹೀಗಾಗಿ ಸಿಬಿಐಗೆ ತನಿಖೆ ನೀಡುವಂತೆ ದೂರುದಾರರು ಆಗ್ರಹಿಸಿದ್ದಾರೆ. ಒಂದು ವೇಳೆ ಸಿಬಿಐ ಎಂಟ್ರಿಕೊಟ್ಟರೆ, ಸರ್ಕಾರಕ್ಕೆ ಗಂಡಾಂತರ ಎದುರಾದ್ರೂ ಆಗಬಹುದು ಅನ್ನೋದನ್ನ ಅರಿತ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರ ಸಿಬಿಐ ನೇರ ಪ್ರವೇಶಕ್ಕೆ ಬ್ರೇಕ್ ಹಾಕಿದೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಸಿಬಿಐ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ಈ ಮೂಲಕ ಸಿಬಿಐಗೆ ಇದ್ದ ಮುಕ್ತ ಅವಕಾಶವನ್ನ ವಾಪಸ್ ಪಡೆದ 11ನೇ ರಾಜ್ಯವಾಗಿದೆ ಕರ್ನಾಟಕ
‘ಮುಕ್ತ ಅವಕಾಶ ವಾಪಸ್ ಪಡೆದಿದ್ದೇವೆ’
ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳನ್ನು ತನಿಖೆ ಮಾಡೋದಕ್ಕೆ ಡೆಲ್ಲಿ ಪೊಲೀಸ್ ಎಸ್ಟಾಬ್ಲೀಷ್ ಆ್ಯಕ್ಟ್ 1946ರಲ್ಲಿ ಸಿಬಿಐ ತನಿಖಾ ದಳಕ್ಕೆ ಮುಕ್ತ ಅನುಮತಿ ನೀಡಿದ್ದನ್ನು ಈಗ ವಾಪಸ್ ಪಡೆದುಕೊಂಡಿದ್ದೇವೆ.
ಹೆಚ್.ಕೆ.ಪಾಟೀಲ್, ಸಚಿವ
ಸಿಬಿಐ ನೇರ ಪ್ರವೇಶಕ್ಕೆ ಸರ್ಕಾರ ಬ್ರೇಕ್ ಹಾಕಿದ್ದು ಯಾಕೆ?
ರಾಜ್ಯದಲ್ಲಿ ಮುಡಾ ಹಾಗೂ ವಾಲ್ಮೀಕಿ ಪ್ರಕರಣ ಸಖತ್ ಸದ್ದು ಮಾಡುತ್ತಿದೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅತಂತ್ರಗೊಳಿಸಲು ಬಿಜೆಪಿ ಪ್ರಯತ್ನ ಮಾಡ್ತಿದೆ ಎಂದು ಕೈ ನಾಯಕರು ಪದೇ ಪದೇ ಆರೋಪ ಮಾಡುತ್ತಲೇ ಇದ್ದಾರೆ. ಸದ್ಯ ಮುಡಾ ಸುಳಿಯಲ್ಲಿ ಸಿಲುಕಿರುವ ಸಿದ್ದು, ಕೇಂದ್ರ ಸರ್ಕಾರ ಯಾವುದೇ ಸಂದರ್ಭದಲ್ಲಿ ಸಿಬಿಐ ಅನ್ನ ದುರ್ಬಳಕೆ ಮಾಡಿಕೊಳ್ಳಬಹುದೆಂಬ ಭೀತಿ ಸರ್ಕಾರಕ್ಕಿದೆ. ಇದರ ಸುಳಿವು ಅರಿಯುತ್ತಿದ್ದಂತೆ ರಾಜ್ಯ ಸರ್ಕಾರ ಈ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?
ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಸಿಬಿಐ ನೇರ ಪ್ರವೇಶಕ್ಕೆ ಕಡಿವಾಣ ಹಾಕಲಾಗಿದೆ. ಇದೀಗ ಕರ್ನಾಟಕ ಸರ್ಕಾರವೂ ಅದೇ ರೀತಿಯ ನಿರ್ಧಾರ ಕೈಗೊಂಡಿದೆ. ರಾಜ್ಯ ಸರ್ಕಾರ ತನಿಖೆಗೆ ಹೆದರಿತಾ ಅಥವಾ ಸಿದ್ದರಾಮಯ್ಯರನ್ನು ಮುಡಾ ಸುಳಿಯಿಂದ ರಕ್ಷಣೆ ಮಾಡಲು ಈ ನಿರ್ಣಯ ಕೈಗೊಂಡಿದ್ಯಾ ಎಂಬ ಅನುಮಾನ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ