newsfirstkannada.com

ಮುಡಾ ಸೈಟ್‌ ಅಕ್ರಮ ಆರೋಪ; ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಬಿಚ್ಚಿಟ್ರು ಅಸಲಿ ವಿಷ್ಯ; ಏನದು?

Share :

Published July 4, 2024 at 10:14pm

  ಮುಡಾದವರು ಜಾಗವನ್ನು ನಿವೇಶನಕ್ಕಾಗಿ ಬಳಸಿಕೊಂಡಿದ್ದು ನಿಜನಾ?

  2010ರಲ್ಲಿ ದಾನ ಪತ್ರದ ಮೂಲಕ ಸಿಎಂ ಪತ್ನಿಗೆ ವರ್ಗಾವಣೆ ಆಗಿದೆ

  ದಾಖಲೆ ಸಮೇತ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಶಾಸಕ ಪೊನ್ನಣ್ಣ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ಅಕ್ರಮ ನಡೆದಿದೆ ಅನ್ನೋ ಆರೋಪ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದೆ. ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಮುಗಿಬಿದ್ದಿದ್ದು, ಮೈಸೂರಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಗರಣವನ್ನು ಸಿಬಿಐಗೆ ಕೊಡಿ ಎಂದು ಬಿಜೆಪಿ ಒತ್ತಾಯಿಸಿದ್ದು, ಸಿಎಂ ಸಿದ್ದರಾಮಯ್ಯ ಇದು ಸಿಬಿಐಗೆ ಕೊಡುವ ಕೇಸೇ ಅಲ್ಲ ಎಂದು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಸಿಎಂ ಸಿದ್ದು ಪತ್ನಿಗೆ 14 ಮೂಡಾ ಸೈಟ್ ಹಂಚಿಕೆ.. ಗಂಭೀರ ಆರೋಪ; ಏನಿದರ ಅಸಲಿಯತ್ತು?

ವಿರೋಧ ಪಕ್ಷದ ಈ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯರ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಈ ಬಗ್ಗೆ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಎ.ಎಸ್ ಪೊನ್ನಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಧರ್ಮಪತ್ನಿಗೆ ಪರಿಹಾರ ನೀಡಿದ್ದ ಸ್ಥಳವನ್ನೇ ವಿರೋಧ ಪಕ್ಷದವರ ದುರುದ್ದೇಶದಿಂದ ದೊಡ್ಡ ಹಗರಣದ ರೀತಿ ಬಿಂಬಿಸುತ್ತಿದ್ದಾರೆ. 1998ರಲ್ಲಿ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ. ನಿಂಗಣ್ಣ ಎನ್ನುವವರಿಗೆ ಜಮೀನು ಸೇರಿರುತ್ತದೆ. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟದ ಡೀಡ್ ಆಗಿದೆ. ಮಲ್ಲಿಕಾರ್ಜುನ ಸ್ವಾಮಿ ಸಿದ್ದರಾಮಯ್ಯ ಧರ್ಮ ಪತ್ನಿಯ ಸಹೋದರರು 2005ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ವ್ಯವಸಾಯೇತರ ಜಮೀನಾಗಿ ಪರಿವರ್ತಿಸಿದ್ದಾರೆ. 2010ರಲ್ಲಿ ದಾನ ಪತ್ರದ ಮೂಲಕ ಅವರ ಸಹೋದರಿ ಅಂದರೆ ಸಿಎಂ ಪತ್ನಿ ಪಾರ್ವತಿಯವರಿಗೆ ವರ್ಗಾವಣೆ ಆಗಿದೆ ಎಂದು ಹೇಳಿದ್ದಾರೆ.

ಶಾಸಕ ಎ.ಎಸ್ ಪೊನ್ನಣ್ಣ

2010 ರಲ್ಲಿ ಪಾರ್ವತಿಯವರಿಗೆ ಜಮೀನು ಸೇರಿದೆ. ಮುಡಾದವರು ಈ ಜಾಗವನ್ನು ನಿವೇಶನಕ್ಕಾಗಿ ಬಳಸಿಕೊಂಡಿರುತ್ತಾರೆ. 2014ರಲ್ಲಿ ಈ ಬಗ್ಗೆ ಮುಡಾದವರಿಗೆ ಪಾರ್ವತಿಯವರು ಪತ್ರ ಬರೆಯುತ್ತಾರೆ. ಮುಡಾದವರು ತಮ್ಮ ಜಮೀನು ಬಳಸಿಕೊಂಡಿದ್ದಾರೆ, ಅದಕ್ಕೆ ಪರಿಹಾರ ನೀಡಿ ಎಂದು ಕೇಳಿರುತ್ತಾರೆ. ಇದು ಬದಲಿ ನಿವೇಶನ ಅಲ್ಲ, ಇದು ಪರಿಹಾರ ರೂಪದ ನಿವೇಶನವಾಗಿದೆ. ಪರಿಹಾರದ ರೂಪದಲ್ಲಿ ಕೊಡಬೇಕಾದ ಹಣದ ಬದಲು ನಿವೇಶನವನ್ನು ನೀಡಿದ್ದಾರೆ.

2014 ನವೆಂಬರ್ 01ರಲ್ಲಿ 50:50 ರೂಲ್ಸ್ ಪ್ರಕಾರವೂ ಪರಿಹಾರ ನೀಡುವುದಿಲ್ಲ. ಸಿಎಂ ಪತ್ನಿ ಪಾರ್ವತಿ ಅವರಿಗೆ ಪರಿಹಾರ ಕೊಡುವ ಸಂದರ್ಭದಲ್ಲಿ ಬಿಜೆಪಿ ಆಡಳಿತ ಇತ್ತು. ಸಿಎಂ ಪತ್ನಿ ಪಾರ್ವತಿ ಅವರು‌ 1,48,104 ಚದರ ಅಡಿ ಜಮೀನು ಕಳೆದುಕೊಂಡಿದ್ದಾರೆ. 38,284 ಚದರ ಅಡಿ ಪರಿಹಾರ ಮಾತ್ರ ಕೊಡಲಾಗಿದೆ. ಕಳೆದುಕೊಂಡ ಜಮೀನು ಮೌಲ್ಯದ ಪ್ರಕಾರ 57 ಕೋಟಿ ರೂಪಾಯಿ ಪರಿಹಾರವನ್ನು ಅವರು ಕೊಡಬೇಕಿತ್ತು. ಆದರೆ ಅವರಿಗೆ ಸಿಕ್ಕ ಜಮೀನಿನ ಮಾರುಕಟ್ಟೆ ಮೌಲ್ಯ ಕೇವಲ 16 ಕೋಟಿ ರೂಪಾಯಿ ಆಗಿದೆ ಎಂದು ಪೊನ್ನಣ್ಣ ಅವರು ಹೇಳಿದ್ದಾರೆ. ಇನ್ನು ಇದೇ ವೇಳೆ ಸಿಎಂ ಪತ್ನಿಗೆ ಮುಡಾ ನಿವೇಶನ ನೀಡಿರುವ ಬಗ್ಗೆ ಕೆಲ ದಾಖಲಾತಿಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಬಿಡುಗಡೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಡಾ ಸೈಟ್‌ ಅಕ್ರಮ ಆರೋಪ; ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಬಿಚ್ಚಿಟ್ರು ಅಸಲಿ ವಿಷ್ಯ; ಏನದು?

https://newsfirstlive.com/wp-content/uploads/2024/07/CM_PONNANNA_1.jpg

Load More