ಆಯತಪ್ಪಿ ಕೆಂಡ ಹಾಯುವಾಗ ಬಿದ್ದ ಮಗು ಹಾಗೂ ವ್ಯಕ್ತಿಗೆ ಗಂಭೀರ ಗಾಯ
ಗಾಯಗಳಾದ ಪುಟ್ಟ ಕಂದಮ್ಮನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿ ಹಿಂದೇಟು
ಜಿಲ್ಲಾ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಅಮಾನವೀಯ ವರ್ತನೆಗೆ ಆಕ್ರೋಶ
ಚಿತ್ರದುರ್ಗ: ಕೆಂಡ ಹಾಯುವಾಗ ಆಕಸ್ಮಿಕವಾಗಿ ಪುಟ್ಟ ಕಂದಮ್ಮನ ಜೊತೆ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿರೋ ಘಟನೆ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಕೆಂಡದಲ್ಲಿ ಬಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಬೊಮ್ಮೇನಹಳ್ಳಿಯಲ್ಲಿ ಮೊಹರಂ ಹಿನ್ನೆಲೆ ಕೆಂಡ ಹಾಯುವ ಆಚರಣೆ ವೇಳೆ ಈ ಘಟನೆ ಸಂಭವಿಸಿದೆ. ರಮೇಶ್ ಎಂಬುವವರು ಪುಟ್ಟ ಕಂದಮ್ಮನ ಜೊತೆ ಕೆಂಡ ಹಾಯುವಾಗ ಕಾಲು ಜಾರಿ ಕೆಂಡದಲ್ಲಿ ಬಿದ್ದಿದ್ದಾರೆ. ಇಬ್ಬರು ಬಿದ್ದ ಕೂಡಲೇ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ನಿಗಿ ನಿಗಿ ಕೆಂಡದಲ್ಲಿ ಬಿದ್ದಿದ್ದರಿಂದ ಇಬ್ಬರಿಗೂ ದೇಹದ ಶೇಕಡಾ 25ರಷ್ಟು ಸುಟ್ಟ ಗಾಯಗಳಾಗಿವೆ. ಕೂಡಲೇ ಇಬ್ಬರನ್ನು ಇಂದು ಬೆಳಗ್ಗೆ 6 ಗಂಟೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿಯು ಯಾವುದೇ ಚಿಕಿತ್ಸೆ ನೀಡದೇ ಅಮಾನವೀಯ ವರ್ತನೆ ತೋರಿದ್ದಾರೆ ಎನ್ನಲಾಗಿದೆ.
ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ 2 ವರ್ಷದ ಮಗುವಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯು ಮಗುವಿನ ಕುಟಂಬಸ್ಥರಿಂದಲೇ ಡ್ರೆಸ್ಸಿಂಗ್ ಮಾಡಿಸಿದ್ದಾರೆ. ಇನ್ನು ಡಾಕ್ಟರ್ ಅನೂಪ್ ವಿಎಂ ಎಂಬುವವರು ಬಯೋಮೆಟ್ರಿಕ್ (ಲಾಗ್ಇನ್) ಹಾಕಿ ಎಸ್ಕೇಪ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೈದ್ಯರು ಹಲವು ಬಾರಿ ಫೋನ್ ಮಾಡಿದ್ದರೂ ಕೂಡ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಶಾಸಕರು ವಾರ್ನ್ ಮಾಡಿದ್ದರು ಸಹ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ ಎಂಬ ಆರೋಪಗಳು ಈ ಆಸ್ಪತ್ರೆಯಲ್ಲಿದೆ.
ವೈದ್ಯರ ನಿರ್ಲಕ್ಷ್ಯದ ಬಗ್ಗೆ ನ್ಯೂಸ್ ಫಸ್ಟ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಸಚಿವ ಡಿ. ಸುಧಾಕರ್ ಹಾಗೂ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಜಿಲ್ಲಾ ಆಸ್ಪತ್ರೆಗೆ ದೌಡಾಯಿಸಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಡಿಸ್ಟಿಕ್ ಸರ್ಜನ್, ಡ್ಯೂಟಿ ಡಾಕ್ಟರ್ ಅನೂಪ ವಿಎಂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಸಸ್ಪೆಂಡ್ ಮಾಡುತ್ತೇವೆ ಎಂದು ಸಚಿವ ಡಿ. ಸುಧಾಕರ್ ಭರವಸೆ ನೀಡಿದ್ದಾರೆ.
ಕೆಂಡ ಹಾಯುವಾಗ ಪುಟ್ಟ ಕಂದಮ್ಮನ ಜೊತೆ ವ್ಯಕ್ತಿಯೊಬ್ಬ ಕಾಲು ಜಾರಿ ಕೆಂಡದಲ್ಲಿ ಬಿದ್ದ ಘಟನೆ ಚಿತ್ರದುರ್ಗದ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಕೆಂಡದಲ್ಲಿ ಬಿದ್ದ ಮಗು ಅಪಾಯದಿಂದ ಪಾರಾಗಿದೆ. #NewsFirstKannada #Chitradurga #Justmiss #Miracles pic.twitter.com/EPtJCWDJKy
— NewsFirst Kannada (@NewsFirstKan) July 30, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ