Advertisment

ಇಂದು ಕಾಂತಾರ ಪ್ರೀಕ್ವೆಲ್​ಗೆ ಮುಹೂರ್ತ ಫಿಕ್ಸ್​.. ಕುಂಭಾಸಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಚಿತ್ರತಂಡ

author-image
AS Harshith
Updated On
ಹೋಮ, ಹವನದ ಬಳಿಕ ಸ್ಯಾಂಡಲ್​ವುಡ್​​ನಲ್ಲಿ ಅಚ್ಚರಿಯ ಬೆಳವಣಿಗೆ! ಕಾಂತಾರ, KGF​ಗೆ ಬಂತು ನ್ಯಾಷನಲ್​ ಅವಾರ್ಡ್!
Advertisment
  • ರಿಷಬ್​ ಶೆಟ್ಟಿ ನಟನೆಯ ಕಾಂತಾರ ಸಿನಿಮಾ
  • ಆನೆಗುಡ್ಡೆ ವಿನಾಯಕನನ್ನು ಹೂವಿನಿಂದ ಸಿಂಗರಿಸಿದ ಚಿತ್ರತಂಡ
  • ಇಂದು ಕಾಂತಾರ ಸಿನಿಮಾದ ಪೋಸ್ಟರ್​ ರಿಲೀಸ್​, ಕಾತುರದಲ್ಲಿ ಫ್ಯಾನ್ಸ್

ಕಾಂತಾರ ರಿಷಬ್​ ಶೆಟ್ಟಿ ನಿರ್ದೇಶನದ ಮತ್ತು ನಟನೆಯ ಸಿನಿಮಾ. ಈ ಸಿನಿಮಾದ ಪ್ರೀಕ್ವೆಲ್​ಗೆ ಇಂದು ಮಹೂರ್ತ ಫಿಕ್ಸ್​ ಆಗಿದೆ. ಕುಂದಾಪುರ ಆನೆಗುಡ್ಡೆ ವಿನಾಯಕ ದೇವಸ್ಥಾನವನ್ನು ಹೂವಿನಿಂದ ಸಿಂಗರಿಸಿ ಚಿತ್ರತಂಡವು ಕುಂಭಾಸಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದೆ

Advertisment

ಇದರೊಂದಿಗೆ ಇಂದು ಬಹುನಿರೀಕ್ಷಿತ ಕಾಂತಾರ ಸಿನಿಮಾ ಮೊದಲ ಅಧ್ಯಾಯದ ಪೋಸ್ಟರ್​ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಮಧ್ಯಾಹ್ನ 12.25ಕ್ಕೆ ಪೋಸ್ಟರ್​ ರಿಲೀಸ್​ ಮಾಡಲಿದೆ. ಹೀಗಾಗಿ ಸಿನಿ ಪ್ರೇಕ್ಷಕರು ಕಾಂತಾರ ತಂಡ ಬಿಡುಗಡೆ ಮಾಡಲಿರುವ ಪೋಸ್ಟರ್​ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.


">November 25, 2023

ಕಾಂತಾರ ಹೊಂಬಾಳೆ ಫೀಲಂ, ವಿಜಯ್ ಕಿರಗಂದೂರ್​ ನಿರ್ಮಾಣ ಹಾಗೂ​ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಚಿತ್ರವಾಗಿದೆ. ಸದ್ಯ ಚಿತ್ರತಂಡ ಕುಂದಾಪುರದಲ್ಲಿ ಬೀಡುಬಿಟ್ಟಿದೆ ಎಂಬ ಸುದ್ದಿ ಹೊರಬಿದ್ದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment