newsfirstkannada.com

×

ಬದ್ರಿನಾಥ, ಕೇದಾರನಾಥ ಮಂದಿರಗಳಿಗೆ ಮುಖೇಶ್ ಅಂಬಾನಿಯಿಂದ ದೇಣಿಗೆ; ಎಷ್ಟು ಕೋಟಿ ಗೊತ್ತಾ?

Share :

Published October 21, 2024 at 1:51pm

Update October 21, 2024 at 2:08pm

    ಕೇದರನಾಥ, ಬದ್ರಿನಾಥ ದೇಗುಲಗಳಿಗೆ ಭೇಟಿ ನೀಡಿದ ಮುಖೇಶ್ ಅಂಬಾನಿ

    ದೇವಾಲಯಗಳ ಜಾಯಿಂಟ್ ಕಮೀಟಿಗೆ ಎಷ್ಟು ಕೋಟಿ ದೇಣಿಗೆ ನೀಡಿದ್ರು?

    2023ರಲ್ಲಿಯೂ ಈ ಪುಣ್ಯಧಾಮಗಳಿಗೆ ಭೇಟಿ ನೀಡಿತ್ತು ಅಂಬಾನಿ ಕುಟುಂಬ

ರಿಲೈನ್ಸ್ ಇಂಡಸ್ಟ್ರೀಯ ಅಧ್ಯಕ್ಷ ಮುಖೇಶ್ ಅಂಬಾನಿ ದೀಪಾವಳಿಗೂ ಮುನ್ನ ಪವಿತ್ರ ಧಾಮ್​ಗಳಲ್ಲಿ ಒಂದಾಗಿರುವ ಕೇದರಾನಾಥ ಹಾಗೂ ಬದ್ರಿನಾಥಕ್ಕೆ ಹೋಗಿ ದೇವರ ದರುಶನ ಪಡೆದು ಬಂದಿದ್ದಾರೆ. ಈ ಎರಡು ಪುಣ್ಯಕ್ಷೇತ್ರಗಳಿಗೆ ಧಾರ್ಮಿಕ ಪ್ರಯಾಣ ಬೆಳೆಸಿದ್ದ ಮುಖೇಶ್ ಅಂಬಾನಿಯವರನ್ನು ಬದ್ರಿನಾಥ-ಕೇದಾರನಾಥ ಮಂದಿರ ಕಮೀಟಿ ಬಹಳ ಆದರದಿಂದಲೇ ಸ್ವಾಗತಿಸಿತ್ತು. ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಕಮೀಟಿಗೆ ಮುಖೇಶ್ ಅಂಬಾನಿ 5 ಕೋಟಿ ರೂಪಾಯಿ ದೇಣಿಗೆ ನೀಡಿದರು ಎಂದು ಕಮೀಟಿ ಸಿಬ್ಬಂದಿ ಹೇಳಿದೆ.

ಸರಳವಾದ ವೈಟ್ ಕುರ್ತಾ ಹಾಗೂ ಪಾಯಜಾಮದ ಮಳೆ ಒಂದು ಜಾಕೆಟ್ ಧರಿಸಿ ದೇವಸ್ಥಾನಕ್ಕೆ ಆಗಮಿಸಿದ ಮುಖೇಶ ಅಂಬಾನಿ ಎರಡೂ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭಾರೀ ಭದ್ರತೆಯ ನಡುವೆ ಆಗಮಿಸಿದ್ದ ಮುಖೇಶ್ ಅಂಬಾನಿಯವರನ್ನು ನೋಡಲು ಜನರು ಕೂಡ ಮುಗಿಬಿದ್ದಿದ್ದರು.

ಇದನ್ನೂ ಓದಿ: ರಾಮ ಮಂದಿರ ತೀರ್ಪು ವಿಚಾರದಲ್ಲಿ ಸಿಜೆಐ ಹೇಳಿಕೆಗೆ ವಿರೋಧ ಪಕ್ಷಗಳ ಟೀಕೆ: ಅಸಲಿಗೆ ಹೇಳಿದ್ದೇನು?

ಹಿಮಾಲಯದ ಬೆಟ್ಟಗಳ ಮೇಲೆ ನೆಲೆ ನಿಂತಿರುವ ಈ ಎರಡು ಪುಣ್ಯಧಾಮಗಳು ಹಿಂದೂ ಧರ್ಮದ ಯಾತ್ರಿಕರ ಪ್ರಮುಖ ಸ್ಥಾನಗಳಾಗಿವೆ. ನಾಲ್ಕು ಪವಿತ್ರ ಧಾಮಗಳಲ್ಲಿ ಬದ್ರಿನಾಥ ಹಾಗೂ ಕೇದಾರನಾಥ ಕೂಡ ಸೇರಿಕೊಂಡಿವೆ. ಕಳೆದ ವರ್ಷ ಅಂದ್ರೆ 2023ರಲ್ಲಿಯೂ ಕೂಡ ಮುಖೇಶ್ ಅಂಬಾನಿ ಈ ಎರಡು ಕ್ಷೇತ್ರಗಳಿಗೆ ಕುಟುಂಬ ಸಮೇತರಾಗಿ ಬಂದು ಭೇಟಿ ನೀಡಿದ್ದರು. ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಕೂಡ ಇವರ ಜೊತೆ ಬಂದು ದರ್ಶನ ಪಡೆದಿದ್ದರು.

ಇದನ್ನೂ ಓದಿ: ಸದ್ಗುರು ಜಗ್ಗಿ ವಾಸುದೇವ್‌ಗೆ ಬಿಗ್ ರಿಲೀಫ್‌.. ಗಂಭೀರ ಆರೋಪದಿಂದ ಮುಕ್ತಗೊಳಿಸಿದ ಸುಪ್ರೀಂಕೋರ್ಟ್!

ಇನ್ನು 2022ರಲ್ಲಿಯೂ ಈ ಪುಣ್ಯಧಾಮಗಳಿಗೆ ಭೇಟಿ ನೀಡಿದ್ದ ಮುಖೇಶ್ ಅಂಬಾನಿ ಅಂದು ಕೂಡ 5 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಅಂಬಾನಿ ಕುಟುಂಬ ಮೊದಲಿನಿಂದಲೂ ದೈವಭಕ್ತಿಯನ್ನಿಟ್ಟುಕೊಂಡು ಬದುಕುತ್ತಿರುವ ಕುಟುಂಬ ಒಂದಲ್ಲ ಒಂದು ದೇವಸ್ಥಾನಕ್ಕೆ ಈ ಮನೆಯವರು ಭೇಟಿ ನೀಡುತ್ತಲೇ ಇರುತ್ತಾರೆ. ಈ ಬಾರಿಯ ಗಣೇಶೋತ್ಸವದ ಅಂಗವಾಗಿ ಮುಂಬೈನ ಲಾಲ್​ಬೌಗ್ಚಾ ರಾಜ ಗಣೇಶನಿಗೆ 15 ಕೋಟಿ ರೂಪಾಯಿ ಮೌಲ್ಯದ 20 ಕೆಜಿ ಬಂಗಾರದಿಂದ ಸಿದ್ಧಪಡಿಸಲಾಗಿದ್ದ ಕಿರೀಟವನ್ನು ಉಡುಗೊರೆಯಾಗಿ ನೀಡಿತ್ತು ಅಂಬಾನಿ ಕುಟುಂಬ

2023ರಲ್ಲಿ ಕೇರಳದ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದಾಗ 1.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಬಂದಾಗ ಅಲ್ಲಿಯೂ ಕೂಡ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬದ್ರಿನಾಥ, ಕೇದಾರನಾಥ ಮಂದಿರಗಳಿಗೆ ಮುಖೇಶ್ ಅಂಬಾನಿಯಿಂದ ದೇಣಿಗೆ; ಎಷ್ಟು ಕೋಟಿ ಗೊತ್ತಾ?

https://newsfirstlive.com/wp-content/uploads/2024/10/MUKESH-AMBANI.jpg

Load More