newsfirstkannada.com

ನೆಟ್ಟಿಗರ ಕಣ್ಮನ ಸೆಳೆದ ಕ್ಲಿಪ್​.. ಮೊಮ್ಮಕ್ಕಳ ಜೊತೆ ರೆಟ್ರೋ ಹಾಡು ರೀ ಕ್ರಿಯೇಟ್ ಮಾಡಿದ ಅಂಬಾನಿ ದಂಪತಿ; ಏನಿದರ ಸ್ಪೆಷಲ್‌?

Share :

Published July 6, 2024 at 4:23pm

  ನಾಲ್ಕು ಮೊಮ್ಮಕ್ಕಳನ್ನು ಅಕ್ಕ ಪಕ್ಕ ಕೂರಿಸಿಕೊಂಡು ಕಾರಿನಲ್ಲಿ ದಂಪತಿ ರೈಡ್​

  ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಅಂಬಾನಿ ದಂಪತಿ ವಿಡಿಯೋ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆಗೆ 6 ದಿನಗಳು ಬಾಕಿ ಉಳಿದಿವೆ. ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಅಂಬಾನಿ ಮಗನ ಮದುವೆ.. ಅನಂತ್- ರಾಧಿಕಾ ಹಾಕಿರೋ ಬಟ್ಟೆ ಬೆಲೆ ಎಷ್ಟು ಲಕ್ಷ ರೂಪಾಯಿ ಗೊತ್ತಾ?

ಈಗಾಗಲೇ ಮುಖೇಶ್ ಅಂಬಾನಿ ಕುಟುಂಬದಲ್ಲಿ ಮದುವೆ ಸಡಗರ ಜೋರಾಗಿದೆ. ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. ನಿನ್ನೆಯಿಂದಲೇ ಅಂಬಾನಿ ಮನೆಯಲ್ಲಿ ಸಂಗೀತ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಇನ್ನು ನಿನ್ನೆ ನಡೆದ ಸಂಗೀತ ಸಮಾರಂಭಕ್ಕೆ ಸಿನಿಮಾ, ಕ್ರಿಕೆಟ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಮುಂಬೈನ ಜಿಯೋ ವರ್ಲ್ಡ್​​ ಸೆಂಟರ್​ನಲ್ಲಿ ನಡೆದ ಸಂಗೀತ ಸಮಾರಂಭದಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಸೇರಿ ಇಡೀ ಫ್ಯಾಮಿಲಿಯೇ ಶಾರುಖ್​​​ ಖಾನ್ ಅವರ ಓಂ ಶಾಂತಿ ಓಂ ಸಿನಿಮಾದ ಸಾಂಗ್​ಗೆ ಕುಣಿದು ಸಂತಸ ವ್ಯಕ್ತಪಡಿಸಿತ್ತು. ಈ ಸಮಾರಂಭದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅವರಲ್ಲಿ ಸಲ್ಮಾನ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕಿಯಾರಾ ಆಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಜಾನ್ವಿ ಕಪೂರ್, ವಿಕ್ಕಿ ಕೌಶಲ್, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇದ್ದರು.

ಇವುಗಳ ನಡುವೆ ಮತ್ತೊಂದು ಕ್ಯೂಟ್​ ವಿಡಿಯೋವೊಂದು ಎಲ್ಲರ ಗಮನವನ್ನು ಸೆಳೆದಿದೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರು 60ರ ದಶಕದ ಹಾಡನ್ನು ಮೊಮ್ಮಕ್ಕಳೊಂದಿಗೆ ರೀ ಕ್ರಿಯೇಟ್ ಮಾಡಿದ್ದಾರೆ. ಹೌದು, ಮುಕೇಶ್ ಅಂಬಾನಿ ಅವರ ಪಕ್ಕದಲ್ಲಿ ಅವರ ಪತ್ನಿ ನೀತಾ ಅಂಬಾನಿ ಕುಳಿತುಕೊಂಡಿದ್ದಾರೆ. ನೀತಾ ಅಂಬಾನಿ ಅವರು ನಾಲ್ಕು ಮೊಮ್ಮಕ್ಕಳ ಜತೆ ಕಾರಿನಲ್ಲಿ ಕುಳಿತಿದ್ದಾರೆ. ಅಂಬಾನಿ ದಂಪತಿ 1968ರಲ್ಲಿ ರಿಲೀಸ್ ಆದ ಬ್ರಹ್ಮಚಾರಿ ಸಿನಿಮಾದ ಚಕ್ಕೆ ಮೇ ಚಕ್ಕಾ ಎಂಬ ಹಿಂದಿ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಮಕ್ಕಳಾದ ಪೃಥ್ವಿ ಮತ್ತು ವೇದಾ, ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ಅವಳಿಗಳಾದ ಆದಿಯಾ ಮತ್ತು ಕೃಷ್ಣ ವಿಡಿಯೊದಲ್ಲಿ ಇದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೂರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೆಟ್ಟಿಗರ ಕಣ್ಮನ ಸೆಳೆದ ಕ್ಲಿಪ್​.. ಮೊಮ್ಮಕ್ಕಳ ಜೊತೆ ರೆಟ್ರೋ ಹಾಡು ರೀ ಕ್ರಿಯೇಟ್ ಮಾಡಿದ ಅಂಬಾನಿ ದಂಪತಿ; ಏನಿದರ ಸ್ಪೆಷಲ್‌?

https://newsfirstlive.com/wp-content/uploads/2024/07/ambani6.jpg

Load More