ಕೊಹ್ಲಿ ಇಡೀ ದೇಶವೇ ಹೆಮ್ಮೆ ಪಡುವ ಕೊಡುಗೆ ನೀಡಿದ್ದಾರೆ
ಆದಾಯದ ಮೂಲ ಜಾಹೀರಾತುಗಳ ಶೂಟಿಂಗ್ ಕೂಡ ಹೌದು
ಕೊಹ್ಲಿ ಸಿನಿಮಾ ಕ್ಷೇತ್ರದ ಎಂಟ್ರಿ ಬಗ್ಗೆ ನಿರ್ದೇಶಕರು ಹೇಳಿದ್ದೇನು?
ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ದಂತಕತೆ. ಇವರ ಆದಾಯದ ದೊಡ್ಡ ಮೂಲ ಕ್ರಿಕೆಟ್ ಜೊತೆಗೆ ಜಾಹೀರಾತುಗಳ ಶೂಟಿಂಗ್. ಆದರೆ ಅವರು ಸಂಪೂರ್ಣವಾಗಿ ನಟನೆಯಲ್ಲಿ ಮುಳುಗಿಲ್ಲ. ಕ್ರಿಕೆಟ್ಗೆ ನಿವೃತ್ತಿ ಪಡೆದ ಮೇಲೆ ನಟನೆಯತ್ತ ಮುಖ ಮಾಡಿದರೂ ಅಚ್ಚರಿ ಇಲ್ಲ. ಯಾಕೆಂದರೆ ಕೊಹ್ಲಿ ಅಷ್ಟೊಂದು ಫಿಟ್ ಆಗಿದ್ದು, ಎನರ್ಜಿಟಿಕ್ ಆಗಿದ್ದಾರೆ
ಆದರೆ ಕೊಹ್ಲಿ ಯಾವುದೇ ಕಾರಣಕ್ಕೂ ಸಿನಿಮಾದತ್ತ ಬರಬಾರದು ಎಂದು ಜನಪ್ರಿಯ ನಿರ್ದೇಶಕ ಮುಖೇಶ್ ಛಾಬ್ರಾ ಕೊಹ್ಲಿಗೆ ಸಲಹೆ ನೀಡಿದ್ದಾರೆ. ಮುಖೇಶ್ ಛಾಬ್ರಾ ಡಂಕಿ, ಜವಾನ್ ಮತ್ತು ದಂಗಲ್ ಸಿನಿಮಾಗಳ ಮೂಲಕ ದೊಡ್ಡ ಹೆಸರುವಾಸಿ.
ಇದನ್ನೂ ಓದಿ: ಧವನ್ ನೆನಪುಗಳಲ್ಲಿ ರೋಹಿತ್ ಕೂಡ ಒಬ್ಬರು.. ಕ್ರಿಕೆಟ್ ಪ್ರೇಮಿಗಳನ್ನೂ ಕಾಡಲಿದೆ ಈ ವಿಚಾರ..!
ಈಗಾಗಲೇ ವಿರಾಟ್ ಉತ್ತಮ ನಟ. ನಟನೆ ಮತ್ತು ಸಿನಿಮಾಗಳಿಂದ ವಿರಾಟ್ ದೂರವಿರಬೇಕು ಎಂದು ಮುಖೇಶ್ ಛಾಬ್ರಾ ಹೇಳಿದ್ದಾರೆ. ಅವರು ದೆಹಲಿ, ಪಂಜಾಬಿಯವರಾಗಿರುವ ಹಿನ್ನೆಲೆಯಲ್ಲಿ ಆ ಭಾಗದ ಜೀವನ ಶೈಲಿಯನ್ನು ಹೆಚ್ಚಾಗಿ ಅಳವಡಿಸಿಕೊಂಡಿದ್ದಾರೆ. ತಮ್ಮ ಯಶಸ್ಸನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಸ್ಪರ್ಧೆ, ಫಿಟ್ನೆಸ್, ಲುಕ್, ಮೆಂಟಾಲಿಟಿ ಸೇರಿದಂತೆ ಎಲ್ಲಾ ವಿಚಾರದಲ್ಲೂ ಮೊದಲಿನಂತೆಯೇ ಇದೆ. ನಾನು ಸುಮಾರು ಐದಾರು ವರ್ಷಗಳ ಹಿಂದೆ ಪಾರ್ಟಿ ಒಂದರಲ್ಲಿ ವಿರಾಟ್ರನ್ನು ಭೇಟಿ ಮಾಡಿದ್ದೆ. ಅಂದು ಹೇಗಿದ್ದರೋ ಇಂದು ಕೂಡ ಹಾಗೆಯೇ ಇದ್ದಾರೆ ಎಂದು ಮುಖೇಶ್ ಛಾಬ್ರಾ ಹೇಳಿದ್ದಾರೆ.
ಸಿನಿಮಾಗಳಿಗೆ ಹೋಗಬಾರದು
ಕೊಹ್ಲಿ ತುಂಬಾ ತಮಾಷೆ ಮಾಡುವ ವ್ಯಕ್ತಿ. ಅವರು ಡ್ಯಾನ್ಸ್ ಮಾಡುತ್ತಾರೆ, ಇತರರ ಶೈಲಿಯನ್ನು ಇನ್ಆ್ಯಕ್ಟ್ ಮಾಡ್ತಾರೆ. ಅವರ ಕಾಮಿಕ್ ಟೈಮಿಂಗ್ ಅತ್ಯುತ್ತಮವಾಗಿದೆ. ಇಷ್ಟೆಲ್ಲ ಪ್ರತಿಭೆ ಇದ್ದರೂ ಕೊಹ್ಲಿ ಸಿನಿಮಾ ರಂಗಕ್ಕೆ ಬರಬಾರದು. ಕ್ರಿಕೆಟ್ನಲ್ಲಿ, ಸಾಮಾಜಿಕ ಕಾರ್ಯಗಳ ಮೂಲಕ ಕೊಹ್ಲಿ ಇಡೀ ದೇಶವೇ ಹೆಮ್ಮೆ ಪಡುವಂತಹ ಕೊಡುಗೆಗಳನ್ನು ನೀಡಿದ್ದಾರೆ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಉಳಿಯಬೇಕು ಎಂದು ಮುಕೇಶ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:MI ಜೊತೆ KKR ಬಿಗ್ ಡೀಲ್.. ಕ್ಯಾಪ್ಟನ್ಸಿಗಾಗಿ ಸ್ಟಾರ್ ಆಟಗಾರನ ಖರೀದಿಸಲು ಮಾತುಕತೆ.. ರೋಹಿತ್ ಅಲ್ಲ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್