newsfirstkannada.com

‘ಮಾಣಿಕ್ಯ’ ನಟಿ ವರಲಕ್ಷ್ಮೀ ಅದ್ಧೂರಿ ಮದುವೆಗೆ ಸಾಕ್ಷಿಯಾದ ತಾರೆಯರು; ಟಾಪ್ 10 ಫೋಟೋ ಇಲ್ಲಿವೆ

Share :

Published July 4, 2024 at 8:44pm

Update July 4, 2024 at 8:45pm

  ವರಲಕ್ಷ್ಮೀ ವಿವಾಹದಲ್ಲಿ ನಟ ಕಿಚ್ಚ ಸುದೀಪ್ ಫ್ಯಾಮಿಲಿ ಭಾಗಿ

  ತಮಿಳು ಚಿತ್ರರಂಗದ ಖ್ಯಾತ ನಟ ಶರತ್​ ಕುಮಾರ್​ ಮಗಳು

  ಕನ್ನಡದ ವಿಸ್ಮಯ, ರಣಂ ಚಿತ್ರದಲ್ಲಿ ಅಭಿನಯಿಸಿರುವ ವರಲಕ್ಷ್ಮೀ

ಕಿಚ್ಚ ಸುದೀಪ್​ ನಟನೆಯ ಮಾಣಿಕ್ಯ ಸಿನಿಮಾದಲ್ಲಿ ಅಭಿನಯಿಸಿದ್ದ ಬಹುಭಾಷಾ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವರಲಕ್ಷ್ಮಿ ಅವರು ತನ್ನ ಬಹುಕಾಲದ ಗೆಳೆಯ ನಿಕೋಲಾಯ್ ಸಚ್‌ದೇವ್ ಅವರನ್ನು ಕೈ ಹಿಡಿದಿದ್ದು, ಕುಟುಂಬಸ್ಥರು, ಹಲವು ಸಿನಿಮಾ ನಟ, ನಟಿಯರು ಆಗಮಿಸಿ ಶುಭಾಶಯ ಕೋರಿದ್ದಾರೆ.

ಕಳೆದ ಮಾರ್ಚ್ 1ರಂದು ವರಲಕ್ಷ್ಮಿ ಅವರು ತಮಗೆ 14 ವರ್ಷದಿಂದ ಪರಿಚಯವಿದ್ದ ಬಾಯ್​ಫ್ರೆಂಡ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದರು.

ವರಲಕ್ಷ್ಮಿ ಅವರು ತಮಿಳು ಚಿತ್ರರಂಗದ ಖ್ಯಾತ ನಟ ಶರತ್​ ಕುಮಾರ್​ ಅವರ ಮಗಳು. ಹೀಗಾಗಿ ವರಲಕ್ಷ್ಮೀ ಅವರ ವಿವಾಹಕ್ಕೆ ಹಲವಾರು ಸಿನಿಮಾ ತಾರೆಯರು ಸಾಕ್ಷಿಯಾದರು.

ನಟ ಕಿಚ್ಚ ಸುದೀಪ್ ಫ್ಯಾಮಿಲಿ ಸೇರಿದಂತೆ ವರಲಕ್ಷ್ಮೀ ವಿವಾಹಕ್ಕೆ ತೆಲುಗು, ತಮಿಳು ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು.

ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಸಚಿವ ಉದಯನಿಧಿ ಮಾರನ್ ಸೇರಿದಂತೆ ಸಾಕಷ್ಟು ಗಣ್ಯರು ನವಜೋಡಿಗೆ ಶುಭ ಕೋರಿದ್ದಾರೆ.

ವರಲಕ್ಷ್ಮೀ ಕೈ ಹಿಡಿದ ನಿಕೋಲಾಯ್ ಸಚ್‌ದೇವ್ ಅವರು ಆರ್ಟ್ ಗ್ಯಾಲರಿ ಮಾಲೀಕರು. ವರಲಕ್ಷ್ಮೀ ಅವರು ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಸುದೀಪ್ ಜೊತೆ ಮಾಣಿಕ್ಯ ಮಾತ್ರವಲ್ಲ, ರನ್ನ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಕನ್ನಡದ ವಿಸ್ಮಯ, ರಣಂ ಚಿತ್ರದಲ್ಲಿ ವರಲಕ್ಷ್ಮಿ ನಟಿಸಿದ್ದಾರೆ.

ಇದನ್ನೂ ಓದಿ: ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು? 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮಾಣಿಕ್ಯ’ ನಟಿ ವರಲಕ್ಷ್ಮೀ ಅದ್ಧೂರಿ ಮದುವೆಗೆ ಸಾಕ್ಷಿಯಾದ ತಾರೆಯರು; ಟಾಪ್ 10 ಫೋಟೋ ಇಲ್ಲಿವೆ

https://newsfirstlive.com/wp-content/uploads/2024/07/Actress-Varalaksmi-Marriage.jpg

Load More