ಇನ್ಸ್ಟಾಗ್ರಾಮ್ನಲ್ಲಿ ಬೇಬಿ ಬಂಪ್ಸ್ ಫೋಟೋ ಶೇರ್ ಮಾಡಿದ ದೀಪಿಕಾ
ದೀಪಿಕಾ-ರಣವೀರ್ ಸಿಂಗ್ರ ಸಂಭ್ರಮದ ಫೋಟೋಶೂಟ್ ಫುಲ್ ವೈರಲ್!
ಸೆಪ್ಟೆಂಬರ್ 28ಕ್ಕೆ ದೀಪು-ರಣವೀರ್ ಬಾಳಲ್ಲಿ ತೆರೆಯಲಿದೆಯಾ ಮತ್ತೊಂದು ಪುಟ
ಮುಂಬೈ: ದೀಪಿಕಾ ಪಡುಕೊಣೆ ಹಾಗೂ ರಣವೀರ್ ಸಿಂಗ್ ಮನೆಗೆ ಸದ್ಯದಲ್ಲಿಯೇ ಮುದ್ದಾದ ಮಗುವೊಂದು ಬರಲಿದೆ ಅನ್ನೋದು ಈಗಾಗಲೇ ದೊಡ್ಡ ಸುದ್ದಿಯಾಗಿತ್ತು. ಸೆಪ್ಟೆಂಬರ್ 28 ರಂದು ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ. ದೀಪಿಕಾ ಪಡುಕೋಣೆ ಅವರು ತನ್ನ ಮಗುವಿನ ಹಾಗೂ ರಣವೀರ್ ಸಿಂಗ್ರ ಹುಟ್ಟು ಹಬ್ಬವನ್ನು ಒಂದೇ ದಿನ ಆಚರಿಸುವ ಯೋಚನೆಯಲ್ಲಿದ್ದಾರೆ.
ಈಗ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಬೇಬಿ ಬಂಪ್ಸ್ ಫೋಟೋಗಳಲ್ಲಿ ಮಿರಮಿರ ಮಿಂಚುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದಕ್ಕಿಂತ ಒಂದು ಅದ್ಭುತ ಫೋಟೋಗಳನ್ನು ಹಾಕುವ ಮೂಲಕ ಡಿಪ್ಪಿ ತಮ್ಮ ಹಾಗೂ ರಣವೀರ್ ಸಿಂಗ್ ಅಭಿಮಾನಿಗಳಿಗೆ ಖುಷಿಯನ್ನು ಹಂಚಿದ್ದಾರೆ.
ಇದನ್ನೂ ಓದಿ: ‘ನಾನು ತಲೆ ಎತ್ಕೊಂಡು ಓಡಾಡ್ತೀನಿ’- ಮಾತು ಮಾತಿಗೂ ದರ್ಶನ್ & ಫ್ಯಾನ್ಸ್ಗೆ ಟಾಂಗ್ ಕೊಟ್ರಾ ಕಿಚ್ಚ ಸುದೀಪ್?
ಎಲ್ಲಾ ಗಾಳಿಸುದ್ದಿಗಳಿಗೆ ಫೋಟೋ ಮೂಲಕವೇ ಉತ್ತರ
ಕೆಲವು ದಿನಗಳ ಹಿಂದಷ್ಟೇ ಅನೇಕ ಗಾಳಿ ಸುದ್ದಿಗಳು ರೂಮರ್ಸ್ಗಳು ಈ ಜೋಡಿಯ ಸುತ್ತ ಸುತ್ತುತ್ತಿದ್ದವು. ದೀಪಿಕಾ ಅಂತರ್ವತ್ನಿಯಾಗಿರುವುದೇ ಸುಳ್ಳು. ರಣವೀರ್ ಹಾಗೂ ದೀಪು ಸುಳ್ಳು ಹೇಳುತ್ತಿದ್ದಾರೆ. ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯಲು ನಿರ್ಧರಿಸಿದ್ದಾರೆ ಎಂಬೆಲ್ಲ ಗಾಳಿಮಾತುಗಳು ಬಿಟೌನ್ ಅಂಗಳದಲ್ಲಿ ಹಾರಾಡಿದ್ದವು. ಆದ್ರೆ ಇಂದು ದೀಪಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬೇಬಿ ಬಂಪ್ಸ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಎಲ್ಲ ವಿವಾದಗಳಿಗೂ ತೆರೆ ಎಳೆದಿದ್ದಾರೆ. ಹಾಗು ಸದ್ಯದಲ್ಲಿಯೇ ತಮ್ಮ ಮನೆಗೆ ತುಂಟ ರಣವೀರ್ ಇಲ್ಲವೇ ಮುದ್ದು ದೀಪಿಕಾ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: 51ನೇ ವಸಂತಕ್ಕೆ ಕಾಲಿಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್; ಕೇಕ್ ಕಟ್ ಮಾಡಿ ಬಾದ್ ಷಾ ಸಂಭ್ರಮ
ಸದ್ಯ ದೀಪಿಕಾ ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಹೆರಿಗೆ ರಜೆಯಲ್ಲಿದ್ದಾರೆ. ಅದು ಮುಂದಿನ ವರ್ಷ ಅಂದ್ರೆ 2025ರವರೆಗೂ ಕೂಡ ನಡೆಯಲಿದೆ. ತುಂಬು ಗರ್ಭಿಣಿಯಿದ್ದಾಗಲೇ ಅವರು ಪ್ರಭಾಸ್ ಅಮಿತಾಬ್ ಬಚ್ಚನ ನಟನೆಯ ಕಲ್ಕಿ ಸಿನಿಮಾದಲ್ಲಿ ಅಭಿನಯಿಸಿದರು. ಅದರ ಸಿಕ್ವೇಲ್ನಲ್ಲಿ ಅಭಿನಯಿಸಲು ಈಗ ಅವರು ಮುಂದಿನ ವರ್ಷದವರೆಗೂ ಕಾಯಬೇಕಿದೆ. ಸದ್ಯ ದೀಪಿಕಾ ಹಾಗೂ ರಣವೀರ್ ಮಾತ್ರ ಸೆಪ್ಟಂಬರ್ 28ನೇ ದಿನಾಂಕಕ್ಕೆ ಕಾಯುತ್ತಿದ್ದಾರೆ. ಯಾಕಂದ್ರೆ ಅದೇ ದಿನ ಅವರ ಮುದ್ದಿನ ಮಗು ಬರಲಿದೆ.
ಸದ್ಯ ದೀಪಿಕಾ ಹಾಗೂ ರಣವೀರ್ ತಮ್ಮ ಬದುಕಿನ ಮತ್ತೊಂದು ಅಧ್ಯಾಯಕ್ಕೆ ಕಾಯುತ್ತಿದ್ದಾರೆ. ಹೊಸ ಚಾಪ್ಟರ್ ಅವರ ಬದುಕಿನಲ್ಲಿ ಇದೇ ತಿಂಗಳು ಬರಲಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ದೀಪಿಕಾ ಸೆಪ್ಟಂಬರ್ 28 ರಂದೇ ತಮ್ಮ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ದಿನಾಂಕಕ್ಕೂ ರಣವೀರ್ ಸಿಂಗ್ಗೂ ಒಂದು ಕನೆಕ್ಷನ್ ಇದೆ. ಸೆಪ್ಟಂಬರ್ 28 ರಂದು ರಣವೀರ್ ಸಿಂಗ್ ಅವರ ಬರ್ತ್ಡೇ.
ರಣವೀರ್ ಹುಟ್ಟಿದ ದಿನವೇ ಮಗು ಬರಲಿ ಎಂಬ ಬಯಕೆ ದಂಪತಿಯದ್ದು, ಹೀಗಾಗಿ ಅದೇ ದಿನ ಮಗು ಪಡೆಯಲು ಈಗ ಎಲ್ಲ ತಯಾರಿಯಲ್ಲಿದ್ದಾರೆ ಬಾಲಿವುಡ್ನ ಬ್ಯೂಟಿಫುಲ್ ಜೋಡಿ. 2018ರಲ್ಲಿ ಮದುವೆಯಾದ ಈ ಜೋಡಿ ಬರೊಬ್ಬರಿ 6 ವರ್ಷಗಳ ನಂತರ ಮಗುವನ್ನು ಹೊಂದಲು ಸಜ್ಜಾಗಿದ್ದರು. ಈಗ ಅಂದುಕೊಂಡಂತೆ ಎಲ್ಲವೂ ಆದ್ರೆ ರಣವೀರ್ ಸಿಂಗ್ ಹಾಗೂ ಅವರ ಮುದ್ದು ಮಗು ಒಂದೇ ದಿನ ಹುಟ್ಟು ಹಬ್ಬ ಆಚರಿಸಿಕೊಳ್ಳುವ ದಿನಗಳು ಭವಿಷ್ಯದಲ್ಲಿ ಬರಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ