newsfirstkannada.com

ಮುಂಬೈ ದಾಳಿಗೆ ಗಂಟುಮೂಟೆ ಕಟ್ಟಿದ ಲಕ್ನೋ; ಕ್ವಾಲಿಫಯರ್​​​​​​​-2 ನಲ್ಲಿ ರೋಹಿತ್​ -ಪಾಂಡ್ಯ ಮುಖಾಮುಖಿ

Share :

25-05-2023

    ರೋಹಿತ್​​​-ಕಿಶನ್ ಬೇಜವಾಬ್ದಾರಿ ಆಟ

    ಟ್ರಿಕ್ಕಿ ಪಿಚ್​​ನಲ್ಲಿ ಸೂರ್ಯಕುಮಾರ್​​-ಗ್ರೀನ್​ ರೋರಿಂಗ್

    ಮುಂಬೈ ಡೆಡ್ಲಿ ದಾಳಿಗೆ ಗಂಟುಮೂಟೆ ಕಟ್ಟಿದ ಲಕ್ನೋ

ಮುಂಬೈ ಇಂಡಿಯನ್ಸ್​​​​​ ಕಟ್ಟಿಹಾಕಿದ್ರೆ ಲೀಗ್​​ನಲ್ಲೇ ಕಟ್ಟಿಹಾಕಬೇಕು. ಒಂದು ವೇಳೆ ಅಂಬಾನಿ ಬ್ರಿಗೇಡ್​​ ಪ್ಲೇಆಫ್​​​​ಗೆ ಎಂಟ್ರಿಕೊಟ್ರೆ ಮೋಸ್ಟ್ ಡೇಂಜರಸ್​​​​ ಟೀಮ್ ಅನ್ನೋ ಟಾಕ್ಸ್ ಇದೆ. ಆ ಮಾತು ನಿಜವಾಗಿದೆ. ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ದೈತ್ಯ ಮುಂಬೈ ಇಂಡಿಯನ್ಸ್​​​​​, ಲಕ್ನೋ ತಂಡವನ್ನ ಸೋಲಿಸಿ ಕ್ವಾಲಿಫಯರ್​​​​-2ಗೆ ಎಂಟ್ರಿಕೊಟ್ಟಿದೆ.​​​​​

ಡಿಸೈಡರ್​​ ಪಂದ್ಯದಲ್ಲಿ ರೋಹಿತ್​​​-ಕಿಶನ್ ಬೇಜವಾಬ್ದಾರಿ ಆಟ..!

ಚೆಪಾಕ್​​ನಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​​​​ ಸಾಲಿಡ್ ಓಪನಿಂಗ್ ನಿರೀಕ್ಷೆಯಲ್ಲಿತ್ತು. ಆದ್ರೆ 38 ರನ್ ಅಂತರದಲ್ಲಿ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಹಾಗೂ ಇಶನ್ ಕಿಶನ್ ವಿಕೆಟ್​ ಒಪ್ಪಿಸಿ ಎಲ್ಲ ಲೆಕ್ಕಚಾರಗಳನ್ನ ತಲೆಕೆಳಗಾಗಿಸಿದ್ರು.

ಆದ್ರೆ 3ನೇ ವಿಕೆಟ್​​ಗೆ ಒಂದಾದ ಡೇಂಜರಸ್​​​ ಸೂರ್ಯಕುಮಾರ್​​​ ಯಾದವ್​​​​​​-ಕ್ಯಾಮರೂನ್​​ ಗ್ರೀನ್​​​ ಅಸಲಿ ಆಟ ಶುರುವಿಟ್ಟುಕೊಂಡ್ರು. ಟ್ರಿಕ್ಕಿ ಪಿಚ್​​ನಲ್ಲಿ ಲಕ್ನೋ ಬೌಲರ್ಸ್​ ಬೆಂಡೆತ್ತಿದ ಈ ಜೋಡಿ ಸ್ಪೋಟಕ 66 ರನ್​ ಪೇರಿಸಿತು.

ಲಕ್ನೋಗೆ ಕಂಟಕವಾಗಿದ್ದ ಈ ಜೋಡಿಯನ್ನ ನವೀಲ್​ ಉನ್​​​ ಹಕ್​ ಬೇರ್ಪಡಿಸಿದ್ರು. ಸ್ಕೈ ಆರ್ಭಟ 33 ಕ್ಕೆ ಸ್ಟಾಪ್ ಆಯ್ತು. ಇದಾದ ಮರುಎಸೆತದಲ್ಲೇ ಪವರ್​ಫುಲ್ ವೆಪನ್​​​ ಗ್ರೀನ್​​​​ ಬೌಲ್ಡ್​ ಆದ್ರು. ನಂತ್ರ ಬಂದ ಬಿಗ್​ ಹಿಟ್ಟರ್ಸ್​ ಹೆಚ್ಚೇನು ಜಾದೂ ಮಾಡ್ಲಿಲ್ಲ.

ಲಾಸ್ಟ್​ ಓವರ್​​ನಲ್ಲಿ ನೇಹಲ್ ವಡೇರ ಸಿಕ್ಸರ್​​-ಬೌಂಡ್ರಿಗಳ ಚಿತ್ತಾರ ಬಿಡಿಸಿದ್ರು. ಪರಿಣಾಮ ಮುಂಬೈ ತಂಡ 20 ಓವರ್​​ಗಳಲ್ಲಿ 8 ವಿಕೆಟ್​ಗೆ 182 ರನ್​ ಬಾರಿಸ್ತು.

ಇನ್ನು ಲಕ್ನೋ ಓಪನರ್ಸ್​ ಕಥೆನೂ ಮುಂಬೈ ತಂಡದಂತೆ ರಿಪೀಟ್​​​ ಆಯ್ತು..ಪ್ರೇರಕ್​​​​​​​​ ಮಂಕಡ್​​​-ಮೇಯರ್​​​​​ ಒಂದಂಕಿಗೆ ವಿಕೆಟ್​ ಒಪ್ಪಿ ಬೇಜವಾಬ್ದಾರಿತನ ಪ್ರದರ್ಶಿಸಿದ್ರು. ಇನ್ನು ನಾಯಕನೂ ಸಿಲ್ಲಿಯಾಗಿ ವಿಕೆಟ್​ ಒಪ್ಪಿಸಿ ಹೊರನಡೆದ್ರು.

ಟಾಪ್​ ಆರ್ಡರ್​​ ಬಳಿಕ ಲಕ್ನೋದ ಮಿಡಲ್​ ಆರ್ಡರ್ ಸಂಪೂರ್ಣ ನೆಲಕಚ್ಚಿತು. ಮಾರ್ಕಸ್ ಸ್ಟೋಯ್ನಿಸ್​​ 40 ರನ್​ ಗಳಿಸಿದ್ದು ಬಿಟ್ರೆ ಬಂದ ಪುಟ್ಟ ಹೋದ ಪುಟ್ಟ ರೀತಿಯಲ್ಲಿ ಪೆವಿಲಿಯನ್ ಸೇರಿಕೊಂಡ್ರು.

ಫೈನಲಿ ಮುಂಬೈ ಡೆಡ್ಲಿ ದಾಳಿಗೆ ಪತರುಗುಟ್ಟಿದ ಲಕ್ನೋ 101 ರನ್​ಗೆ ಸುಸ್ತಾಯ್ತು..ಇದರೊಂದಿಗೆ ಕೃನಾಲ್​​ ಪಾಂಡ್ಯ ಬಳಗದ ಕಪ್ ಗೆಲ್ಲುವ ಕನಸು ನುಚ್ಚುನೂರಾಗಿದೆ.

ಕ್ವಾಲಿಫಯರ್​​​-2 ನಲ್ಲಿ ಮುಂಬೈ-ಗುಜರಾತ್​​​ ಸೆಣಸಾಟ..!

ಎಲಿಮಿನೇಟರ್​​​​​ ಮ್ಯಾಚ್​​ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್ ಕ್ವಾಲಿಫಯರ್​​​-2ಗೆ ಎಂಟ್ರಿಕೊಟ್ಟಿದೆ. ನಾಳೆ ನಡೆಯುವ ಬಿಗ್​ ಬ್ಯಾಟಲ್​​ನಲ್ಲಿ ರೋಹಿತ್ ಪಡೆ ಕ್ವಾಲಿಫಯರ್​​​​-1 ನಲ್ಲಿ ಪರಾಭವಗೊಂಡ ಗುಜರಾತ್ ಟೈಟನ್ಸ್​ ತಂಡವನ್ನ ಎದುರಿಸಲಿದೆ..ಇಲ್ಲಿ ಗೆದ್ದ ತಂಡ ಫೈನಲ್​​​​​​ನಲ್ಲಿ ಚೆನ್ನೈ ತಂಡದ ವಿರುದ್ಧ ತೊಡೆ ತಟ್ಟಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ದಾಳಿಗೆ ಗಂಟುಮೂಟೆ ಕಟ್ಟಿದ ಲಕ್ನೋ; ಕ್ವಾಲಿಫಯರ್​​​​​​​-2 ನಲ್ಲಿ ರೋಹಿತ್​ -ಪಾಂಡ್ಯ ಮುಖಾಮುಖಿ

https://newsfirstlive.com/wp-content/uploads/2023/05/Rohit-sharma-1-1.jpg

Load More