newsfirstkannada.com

ಆಕಾಶ್​ ಅಟ್ಯಾಕಿಂಗ್​​ ಆಟಕ್ಕೆ ಲಕ್ನೋ ಪಲ್ಟಿ! ಗೇಮ್​ ಚೇಂಜರ್ ಮಧ್ವಾಲ್​ಗೆ ತಲೆ ಬಾಗಿದ ಮುಂಬೈ ಫ್ಯಾನ್ಸ್​

Share :

Published May 25, 2023 at 11:11am

Update September 25, 2023 at 10:36pm

    ಆಕಾಶ್ ಅಟ್ಯಾಕಿಂಗ್ ಸ್ಪೆಲ್​ಗೆ ಲಕ್ನೋ ಕಂಗಾಲ್

    ಆಕಾಶ್​ ಆಟಕ್ಕೆ ಬಧೋನಿ-ಪೂರನ್ ಸ್ಟನ್..!

    ಗೇಮ್​ ಚೇಂಜರ್ ಮಧ್ವಾಲ್​ಗೆ ತಲೆ ಬಾಗಿದ ಮುಂಬೈ ಫ್ಯಾನ್ಸ್

ಚೆನ್ನೈ ಚೆಪಾಕ್​​ನಲ್ಲಿ ಮುಂಬೈ ಇಂಡಿಯನ್ಸ್​ ಗೆದ್ದು ಬೀಗಿದ್ದಾಗಿದೆ. ನಾನಾ.. ನೀನಾ ಎಂಬ ಹೋರಾಟದಲ್ಲಿ ಲಕ್ನೋಗೆ ಶಾಕ್ ನೀಡಿದ ಮುಂಬೈ ಇಂಡಿಯನ್ಸ್​, ಕ್ವಾಲಿಫೈಯರ್​-2ಗೆ ಗ್ರ್ಯಾಂಡ್​ ಆಗಿ ಎಂಟ್ರಿ ನೀಡಿದೆ. ಆ ಮೂಲಕ 6ನೇ ಬಾರಿಗೆ ಐಪಿಎಲ್​ ಟ್ರೋಫಿಗೆ ಮುತ್ತಿಡುವತ್ತ ಹೆಜ್ಜೆಹಾಕಿದೆ.

ಹೌದು! 183 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಲಕ್ನೋ ಸುಲಭ ಗೆಲುವಿನ ಲೆಕ್ಕಚಾರದಲ್ಲಿತ್ತು. ಇನ್​​ಫ್ಯಾಕ್ಟ್​_ ಲೀಲಾಜಾಲವಾಗಿ ಬ್ಯಾಟ್ ಬೀಸಿದ್ದ ಲಕ್ನೋ  ಬ್ಯಾಟ್ಸ್​ಮನ್ಸ್​, ಮುಂಬೈ ಮಣಿಸಿ ಕ್ವಾಲಿಫೈಯರ್​​-2ನಲ್ಲಿ ಗುಜರಾತ್​ ಎದುರು ಸೆಣಸಾಡುವ ಲೆಕ್ಕಚಾರ ಹಾಕಿತ್ತು. ಆದ್ರೆ, ಈ ಎಲ್ಲಾ ಲೆಕ್ಕಚಾರ ತಲೆಕೆಳಗಾಗಿಸಿದ್ದು ಯಂಗ್ ಪೇಸರ್​ ಆಕಾಶ್ ಮಧ್ವಾಲ್​.

ಆಕಾಶ್ ಅಟ್ಯಾಕಿಂಗ್ ಸ್ಪೆಲ್​ಗೆ ಲಕ್ನೋ ಕಂಗಾಲ್

ಟಾರ್ಗೆಟ್ ಬೆನ್ನತ್ತಿದ್ದ ಲಕ್ನೋ, ಮೊದಲ ಓವರ್​ನಲ್ಲೇ 10 ರನ್ ಸಿಡಿಸಿ ಭಾರೀ ನಿರೀಕ್ಷೆ ಹುಟ್ಟಿಹಾಕಿತ್ತು. ಆದ್ರೆ, ಮುಂಬೈ ಪರ ಆಕಾಶ್​​ ಮಧ್ವಾಲ್​​​ನ ಅಟ್ಯಾಕಿಂಗ್ ಸ್ಪೆಲ್​ಗೆ ದಿಕ್ಕು ತಪ್ಪಿದ ಲಕ್ನೋ ದಿಕ್ಕಾಪಾಲಾಯ್ತು.  2ನೇ ಓವರ್​​ನ 5 ಎಸೆತದಲ್ಲಿ ಮಂಕದ್​​​ಗೆ ಪೆವಿಲಿಯನ್​​​ ಹಾದಿ ತೋರಿಸಿದ ಮಧ್ವಾಲ್​, ಮುಂಬೈ ಇಂಡಿಯನ್ಸ್​ಗೆ ಆರಂಭಿಕ ಮೇಲುಗೈ ತಂದಿಟ್ಟರು.

ಆಕಾಶ್​ ಆಟಕ್ಕೆ ಬಧೋನಿ-ಪೂರನ್ ಸ್ಟನ್..!

ಯೆಸ್! ಆರಂಭಿಕ ಅಘಾತದ ಬಳಿಕ ಚೇತರಿಕೆ ಕಂಡಿದ್ದ ಲಕ್ನೋ, ಮತ್ತೆ ಗೆಲುವಿನ ಹಳಿಗೇರುತ್ತಿತ್ತು. ಆದ್ರೆ, ಈ ವೇಳೆ ಮತ್ತೆ ದಾಳಿಗಿಳಿದ ಆಕಾಶ್​, ಬ್ಯಾಕ್ ಟು ಬ್ಯಾಕ್ ಬದೋನಿ ಹಾಗೂ ಪೂರನ್​​​​ಗೆ ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರು. ಆ ಮೂಲಕ ಮುಂಬೈ ಗೆಲುವಿಗೆ ಅಧಿಕೃತ ಮುದ್ರೆ ಒತ್ತಿದರು. ಈ ಬೆನ್ನಲ್ಲೇ ರವಿ ಬಿಷ್ನೋಯಿ, ಮೊಹ್ಸಿನ್ ಖಾನ್ ವಿಕೆಟ್ ಉರುಳಿಸಿದ ಆಕಾಶ್​, ಅಕ್ಷರಶಃ ಲಕ್ನೋ ಪಾಲಿಗೆ ವಿಲನ್ ಆಗಿ ಮಾರ್ಪಟ್ಟರು.

ಹೌದು! ಮುಂಬೈ ಇಂಡಿಯನ್ಸ್​ ಪರ ಅದ್ಬುತ ದಾಳಿ ಸಂಘಟಿಸಿದ ಆಕಾಶ್​, ತಾನೆಸೆದ 3. 3 ಓವರ್​ಗಳಲ್ಲಿ ಜಸ್ಟ್​ 5 ರನ್ ನೀಡಿ 5 ವಿಕೆಟ್​ ಉರುಳಿಸಿದರು. ಆ ಮೂಲಕ ಐಪಿಎಲ್​ನಲ್ಲಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು.

ಅಷ್ಟೇ ಅಲ್ಲ.! ಐಪಿಎಲ್​ನಲ್ಲಿ ಅನ್​ಕ್ಯಾಪಡ್​​ ಪ್ಲೇಯರ್​ ಒಬ್ಬನ ಬೆಸ್ಟ್ ಫರ್ಫಾಮೆನ್ಸ್ ಎಂಬ ಹೆಗ್ಗಳಿಗೂ ಪಾತ್ರವಾದರು.  ಒಟ್ನಲ್ಲಿ ಮುಂಬೈ ಎದುರು ಸುಲಭ ಗೆಲುವಿನ ಲೆಕ್ಕಚಾರದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್​, ಉತ್ತರಾಖಂಡ್​ನ ಆಕಾಶ್​ ಆಕರ್ಷಕ ಆಟಕ್ಕೆ ಮಕಾಡೆ ಮಲಗಿದ್ದು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಕಾಶ್​ ಅಟ್ಯಾಕಿಂಗ್​​ ಆಟಕ್ಕೆ ಲಕ್ನೋ ಪಲ್ಟಿ! ಗೇಮ್​ ಚೇಂಜರ್ ಮಧ್ವಾಲ್​ಗೆ ತಲೆ ಬಾಗಿದ ಮುಂಬೈ ಫ್ಯಾನ್ಸ್​

https://newsfirstlive.com/wp-content/uploads/2023/05/Aksh-Madhwal.jpg

Load More